ಬೆಳಗಾವಿ-05: ಬಸವಣ್ಣನವರ ಕಾಲವನ್ನು ಕಲ್ಪನೆ ಮಾಡಿಕೊಂಡರೆ ಆ ಕಾಲದಲ್ಲಿ ಬಸವಣ್ಣನವರು ಬದುಕಿದ್ದಾಗಿನ ಸಮಾಜದ ತತ್ವಗಳನ್ನು ಸಾಕಾರಗೊಳಿಸಿದವರು ಶ್ರೀ ಸಿದ್ಧಗಂಗಾ ಶ್ರೀಗಳು ಎಂದು ಹಮೀದಾ ಬೇಗಂ ದೇಸಾಯಿ ಹೇಳಿದರು.
ಜಿಸಲಾದ ಬೆಳಗಾವಿ ಜಿಲ್ಲಾ ಲೇಖಕಿಯರ ಸಂಘದ ದತ್ತಿ ನಿಧಿ ಕಾರ್ಯಕ್ರಮದಲ್ಲಿ ಪರಮ ಪೂಜ್ಯ ಶ್ರೀ ಸಿದ್ಧಗಂಗಾ ಶ್ರೀಗಳು ಕುರಿತು ಉಪನ್ಯಾಸ ನೀಡಿ, ಮಾತನಾಡಿದ ಅವರು,
ಯಾವ ಜಾತಿ ಮತ ಪಂಥದ ಭೇದ ವಿಲ್ಲದೆ ಎಲ್ಲರನ್ನೂ ಮಾನವೀಯ ದೃಷ್ಟಿಯಿಂದ ಕಂಡ ಸಮಾನತೆಯನ್ನು ಸಾರಿದವರು ಶ್ರೀಗಳು. ಎಲ್ಲಾ ಧರ್ಮದ, ಎಲ್ಲಾ ವರ್ಗದ ವಿದ್ಯಾರ್ಥಿಗಳನ್ನು ತಮ್ಮ ಆಶ್ರಯದಲ್ಲಿ ತ್ರಿವಿಧ ದಾಸೋಹ ನೀಡಿದವರು.
ಉತ್ತರದಲ್ಲಿ ಗಂಗೆ, ದಕ್ಷಿಣದಲ್ಲಿ ಸಿದ್ದಗಂಗೆ ಎಂದೂ ಪ್ರಸಿದ್ದಿಯನ್ನು ಪಡೆದಿರುವ ತಿಳಿಸಿದರು.
ಈ ವೇಳೆ ವಿಶೇಷ ಚೇತನ ರಿಂದ ಸಂಗೀತ ಕಾರ್ಯಕ್ರಮ, ಸಂಘದ ಸದಸ್ಯೆಯರು ದೇಶಭಕ್ತಿ ಗೀತೆಗಳನ್ನು ಹಾಡಿದರು.
ದತ್ತಿ ದಾನಿಗಳಾದ ಹಿರಿಯ ಲೇಖಕಿಯರಾದ ನೀಲಗಂಗಾ ಚರಂತಿಮಠ, ಸುನಂದಾ ಸಿದ್ದಪ್ಪಾ ಮುಳೆ, ಮೃಣಾಲಿನಿ ಅಂಗಡಿ, ಸರಳಾ ಹೇರೇಕರ್ ಉಪಸ್ಥಿತರಿದ್ದರು .
ಸಂಘದ ಕಾರ್ಯದರ್ಶಿ ಆಶಾ ಯಮಕನಮರಡಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ ಅವರು , ದತ್ತಿನಿಧಿಗೆ ಬಹಳಷ್ಟು ಜನ ಸಹಾಯ- ಸಹಕಾರ ಇರುವುದರಿಂದ ಒಂದು ಕಾರ್ಯಕ್ರಮದಲ್ಲಿ ಇಬ್ಬರು ಮೂವರು ದತ್ತಿ ದಾನಿಗಳ ಕಾರ್ಯಕ್ರಮ ನೇರವೇರಿಸಬೇಕಾಗಿದೆ ಎಂದು ತಿಳಿಸಿದರು. ಸಂಘವು ರಜತ ಮಹೋತ್ಸವದ ಸಂಭ್ರಮ ದಲ್ಲಿರುವುದನ್ನು ಸ್ಮರಿಸಿ, ಇದು ಶತಮಾನದ ಸಂಭ್ರಮ ಕಾಣುವಂತಾಗಲಿ. ಅದಕ್ಕೆ, ಎಲ್ಲರ ಸಹಕಾರದಿಂದ ಸಂಘಕ್ಕೆ ಮತ್ತಷ್ಟೂ ಶಕ್ತಿ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈ ವೇಳೆ ಅಧ್ಯಕ್ಷೆ ಸುಮಾ ಕಿತ್ತೂರು ಮಾತನಾಡಿ, ದೇಶಭಕ್ತಿ, ದೇಶಭಕ್ತಿ ಗೀತೆಗಳ ಕುರಿತು, ಲೇಖಕಿಯರ ಬರೆಯುವ ಸಾಮರ್ಥ್ಯ ಹಾಗೂ ಆಸಕ್ತಿ ಹೀಗೇ ಮುಂದುವರೆಸಿಕೊಂಡು ಹೋಗುವ ಕುರಿತು ಸ್ಪೂರ್ತಿಯ ಮಾತುಗಳನ್ನು ತಿಳಿಸಿದರು.
ಈ ಸಂದರ್ಭದಲ್ಲಿ ಹಿರಿಯ ಲೇಖಕಿಯರಾದ ಜ್ಯೋತಿ ಬದಾಮಿ, ಜಯಶೀಲ ಬ್ಯಾಕೊಡ, ಹೇಮಾ ಸೊನೊಳ್ಳಿ, ಶ್ವೇತಾ ನರಗುಂದ, ವಾಸಂತಿ ಮೇಳೇದ ಸುನಂದಾ ಹಾಲಭಾವಿ ಕಾರ್ಯಕಾರಿಣಿ ಸಮೀತಿಯ ಎಲ್ಲಾ ಸದಸ್ಯೆಯರು ಹಾಗೂ ಇತರರು ಇದ್ದರು.ಸುನೀತಾ ನಂದೆನ್ನವರ ನಾಡಗೀತೆ ಪ್ರಸ್ತುತಪಡಿಸಿದರು ರಾಜೇಶ್ವರಿ ಹಿರೇಮಠ ನಿರೂಪಿಸಿದರು. ಸುನಂದಾ ಹಾಲಭಾವಿ ವಂದಿಸಿದರು.