23/12/2024
IMG-20240802-WA0012

ಬೆಳಗಾವಿ-02 : ಬೆಳಗಾವಿ ಗ್ರಾಮೀಣ ಕ್ಷೇತ್ರದ ಪ್ರವಾಹಪೀಡಿತ ಪ್ರದೇಶಕ್ಕೆ ಭೇಟಿ ನೀಡಿದ ಯುವ ಕಾಂಗ್ರೆಸ್ ಮುಖಂಡ ಮೃಣಾಲ ಹೆಬ್ಬಾಳಕರ್, ಸಂತ್ರಸ್ತರಿಗೆ ಸಾಂತ್ವನ ಹೇಳಿ ಆರ್ಥಿಕ ಸಹಾಯ ನೀಡಿದರು.

ಬೆಳಗಾವಿ ತಾಲೂಕಿನ ದೇಸೂರ್ ಗ್ರಾಮಕ್ಕೆ ಭೇಟಿ ನೀಡಿ, ಮಳೆಯಿಂದ ಹಾನಿಗೊಳಗಾಗಿರುವ ಪ್ರದೇಶಗಳನ್ನು ವೀಕ್ಷಿಸಿದ ಮೃಣಾಲ್, ಸಂತ್ರಸ್ತರಿಗೆ ಲಕ್ಷ್ಮೀ ತಾಯಿ ಫೌಂಡೇಷನ್ ವತಿಯಿಂದ ಆರ್ಥಿಕವಾಗಿ ಸಹಾಯ ಮಾಡಿದರು. ಪ್ರವಾಹ ಪೀಡಿತರು ಆತಂಕಪಡಬೇಕಾಗಿಲ್ಲ. ಅವರಿಗೆ ಎಲ್ಲ ನೆರವು ನೀಡಲಾಗುವುದು. ಅವರ ಕಷ್ಟಗಳಿಗೆ ವಯಕ್ತಿಕವಾಗಿ ಹಾಗೂ ಸರಕಾರದ ವತಿಯಿಂದ ಕೂಡ ಸಹಾಯ ಮಾಡಲಾಗುವುದು ಎಂದು ಅವರು ಭರವಸೆ ನೀಡಿದರು.
ಈ ಸಮಯದಲ್ಲಿ ಗ್ರಾಮ ಪಂಚಾಯತ್ ಸದಸ್ಯರು, ಗ್ರಾಮದ ಜನರು ಹಾಗೂ ಪಕ್ಷದ ಮುಖಂಡರು, ಕಾರ್ಯಕರ್ತರು ಹಾಜರಿದ್ದರು.

error: Content is protected !!