ಬೆಳಗಾವಿ-27 : ಮಹಾರಾಷ್ಟ್ರದಲ್ಲಿ ಮಳೆ ಆರ್ಭಟ ಮುಂದುವರಿದಿದ್ದು ಕೃಷ್ಣಾ ನದಿ ಅಪಯದ ಮಟ್ಟ ಮೀರಿ ಹರಿಯುತ್ತಿದೆ. ಈಗಾಗಲೇ ಕುಡಚಿ – ಉಗಾರ ಸೇತುವೆ ಜಲಾವೃತಗೊಂಡಿದ್ದು ಅಥಣಿ ಹಾಗೂ ಗೋಕಾಕ್ ಸಂಪರ್ಕಿಸುವ ದರೂರ ಸೇತುವೆ ಮುಳುಗಡೆ ಹಂತ ತಲುಪಿದೆ.
ಶನಿವಾರವೂ ನದಿ ನೀರಿನ ಮಟ್ಟ ಏರಿಕೆಯಾಗಿದೆ ಕಾಗವಾಡ, ಅಥಣಿ ಸೇರಿದಂತೆ ಅನೇಕ ತಾಲೂಕಿನ ಗ್ರಾಮಗಳಿಗೆ ನದಿ ನೀರು ಆವರಿಸಿದೆ. ಈಗಾಗಲೇ ನಡುಗಡ್ಡೆಯಲ್ಲಿ ಸಿಲುಕಿರುವರು ಸುರಕ್ಷಿತ ಸ್ಥಳಕ್ಕೆ ತೆರಳುತ್ತಿದ್ದಾರೆ.
ನದಿ ಪಾತ್ರದ ಜನ ಸುರಕ್ಷಿತ ಸ್ಥಳಕ್ಕೆ ಬರುವಂತೆ ಜಿಲ್ಲಾಡಳಿತ ಸೂಚನೆ ನೀಡಿದ್ದು ಅಗತ್ಯ ಬಿದ್ದರೆ ಬೋಟ್ ವ್ಯವಸ್ಥೆ ಕೂಡಾ ಮಾಡಲಾಗುತ್ತಿದೆ.