ಬೆಳಗಾವಿ-27: ಐಟಿಸಿ ಹಾಗೂ ಜೊಲ್ಲೆ ಗ್ರೂಪ ಸಹಭಾಗಿತ್ವದಲ್ಲಿ ಕಾಕತಿಯಲ್ಲಿ ವೆಲಕಮ್ ಹೊಟೇಲ್ ಉದ್ಘಾಟನೆ ನಡೆಯಿತು. ಕಾರ್ಯಕ್ರಮದಲ್ಲಿ ಜೊಲ್ಲೆ ಹಾಸ್ಪಿಟಾಲಿಟಿ ವ್ಯವಸ್ಥಾಪಕ ನಿರ್ದೇಶಕರಾದ ಬಸವ ಪ್ರಸಾದ ಜೊಲ್ಲೆ ಮಾತನಾಡಿ ಪ್ರಕೃತಿ ಸೌಂದರ್ಯದಲ್ಲಿ ಈ ಹೊಟೇಲ್ ನಿರ್ಮಾಣ ಮಾಡಿದ್ದುಅತಿಥಿಗಳಿಗೆ ಅಸಾಧಾರಣ ಆತಿಥ್ಯ ಅನುಭವ ನೀಡುವ ನಿಟ್ಟಿನಲ್ಲಿ ತನ್ನ ಪ್ರಯಾಣಕ್ಕೆ ಹೊಸ ಆಯಾಮ ನೀಡಲಿದೆ ಎಂದರು
ಇನ್ನು ಜೊಲ್ಲೆ ಗ್ರೂಪನ ಅಧ್ಯಕ್ಷ ಹಾಗೂ ಮಾಜಿ ಸಂಸದರಾದ ಅಣ್ಣಾಸಾಹೇಬ ಜೊಲ್ಲೆ ಮಾತನಾಡಿ ಐದು ಎಕರೆ ಹಚ್ಚ ಹಸಿರಿನ ಉಸಿರು-ತೆಗೆದುಕೊಳ್ಳುವ ನೋಟವನ್ನು ನೀಡುವ ಮೂಲಕ ಈ ಹೊಟೇಲನ್ನು ಐಟಿಸಿ ಸಹಭಾಗಿತ್ವದಲ್ಲಿ ಕಾರ್ಯನಿರ್ವಹಿಸಲಿದ್ದು, ಪ್ರವಾಸಿಗರಿಗೆ ಸೌಕರ್ಯ ಮತ್ತು ಸೊಬಗುಗಾಗಿ ಹೊಸ ಮಾನದಂಡವನ್ನು ಕಲ್ಪಿಸಲಿದೆ ಎಂದರು.
ಇನ್ನು ಶಾಸಕಿ ಶಶಿಕಲಾ ಜೊಲ್ಲೆ ಮಾತನಾಡಿ ವೆಲ್‌ಕಮ್‌ಹೋಟೆಲ್ ,ಐಟಿಸಿ ಹೊಟೇಲ್ ಸಹಭಾಗಿತ್ವದಲ್ಲಿ ವೆಲ್‌ಕಮ್‌ಹೋಟೆಲ್ ಬೆಳಗಾವಿಯಲ್ಲಿ ತರಲು ನಾವು ತುಂಬಾ ಹೆಮ್ಮೆಪಡುತ್ತೇವೆ, ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಹೊಂದಿರುವ ಪ್ರಮುಖ ವ್ಯಾಪಾರ ತಾಣವಾಗಿರುವ ಈ ನಗರಕ್ಕೆ ಈ ಹೋಟೆಲ್ ಆಧುನಿಕ ಸೌಕರ್ಯಗಳು ಮತ್ತು ಸ್ಥಳೀಯ ಸಾಂಸ್ಕೃತಿಕ ಅಂಶಗಳ ಪರಿಪೂರ್ಣತೆಯನ್ನು ನೀಡಲಿದೆಂದರು.
ಕಾರ್ಯಕ್ರಮದಲ್ಲಿ ಐಟಿಸಿ ಜನರಲ್ ಮ್ಯಾನೇಜರ ರಾಹುಲ ಸೇರಿದಂತೆ ಸಿಬ್ಬಂದಿ ವರ್ಗದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.