ನೇಸರಗಿ-27: ದೇಶ ಕಾಯುವ ಸೈನಿಕರ ತ್ಯಾಗ, ಬಲಿದಾನ ಮೂಲಕ ನಮ್ಮ ಭಾರತ ದೇಶದ ಇಷ್ಟೊಂದು ಸುರಕ್ಷಿತವಾಗಿದ್ದು, ಕಾರ್ಗಿಲ್ ಮೇಲೆ ಪಾಕಿಸ್ತಾನಿಯರು ಅಕ್ರಮವಾಗಿ ಯುದ್ಧ ಮಾಡಲು ಬಂದಾಗ ಅವರನ್ನು ಸದೇಬಡಿದು, ಹಿಮೇಟಿಸಿ ದೇಶದ ರಕ್ಷಣೆಗೆ ಪ್ರಾಣ ತ್ಯಾಗ ಮಾಡಿದ್ದು ನಮ್ಮ ಯೋಧ ಸಾಧನೆ ಅಪಾರ ಎಂದು ಮಾಜಿ ಶಾಸಕರು, ಬಿಡಿಸಿಸಿ ಬ್ಯಾಂಕ ನಿರ್ದೇಶಕ ಮಹಾಂತೇಶ ದೊಡ್ಡಗೌಡರ ಹೇಳಿದರು.
ಅವರು ಸಮೀಪದ ನಾಗನೂರ ಗ್ರಾಮದ ರುದ್ರಾಕ್ಷಿಮಠದ ಮಠದಲ್ಲಿ ಆಯೋಜಿಸಲಾಗಿದ್ದ 25 ನೇ ಕಾರ್ಗಿಲ್ ವಿಜಯ ದಿನದ ಆಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ನಾಗನೂರ – ಬೆಳಗಾವಿ ರುದ್ರಾಕ್ಷಿಮಠದ ಪೂಜ್ಯಶ್ರೀ ಡಾ. ಅಲ್ಲಮಪ್ರಭು ಮಹಾಸ್ವಾಮಿಗಳು ಮಾತನಾಡಿ ಕಾರ್ಗಿಲ ಸೈನಿಕರ ಪರಾಕ್ರಮ, ಬಲಿದಾನ, ಎಂದಿಗೂ ಮರೆಯಲು ಸಾಧ್ಯವಿಲ್ಲ. ಸೈನಿಕರಾಗಿ ಕೆಲಸ ಮಾಡುವದು ದೇವರ ಕೆಲಸ ಮಾಡಿದ ಹಾಗೆ ಅಂದರು.
ಕಾರ್ಯಕ್ರಮದಲ್ಲಿ ಕೆಪಿಸಿಸಿ ಸದಸ್ಯ, ಮಾಜಿ ಜಿ ಪಂ ಸದಸ್ಯರಾದ ಶ್ರೀಮತಿ ರೋಹಿಣಿ ಪಾಟೀಲ, ಹಾವೇರಿ ಜಿಲ್ಲೆಯ ಅಲ್ಪ ಸಂಖ್ಯಾತರ ಜಿಲ್ಲಾಧಿಕಾರಿಗಳು, ತಹಶೀಲ್ದಾರರಾದ ಅಶೋಕ್ ಗಡ್ಡಿಗೌಡರ,ಶ್ರೀಮತಿ ಲಕ್ಷ್ಮೀ ಇನಾಮದಾರ,
ಗ್ರಾಂ ಪಂಚಾಯತ್ ಅಧ್ಯಕ್ಷರಾದ ಕು. ಶೋಭಾ ಪಾಟೀಲ್, ಹಿರಿಯ ಯೋಧರಾದ ಬಸವಣ್ಣೆಪ್ಪ ಶಿವನಾಯ್ಕರ, ಮಾಜಿಯೋದರ ಸಂಘದ ಅಧ್ಯಕ್ಷ ಸೋಮಪ್ಪ ವಾಳದ, ಉಪಾಧ್ಯಕ್ಷರು ವಿನೋದ ಶಿವನಾಯ್ಕರ, ಬಿ ಬಿ ವನ್ನೂರ. D m ಪಾಟೀಲ್, ಪ್ರಕಾಶ್ ನಾಯ್ಕರ. ನೇತ್ರಾ ಇಂಚಲ,ಇನ್ನೂ ಮಾಜಿ ಹಾಗೂ ಹಾಲಿ ಸೈನಿಕರು ಉಪಸ್ಥಿತರಿದ್ದರು.