23/12/2024
IMG-20240718-WA0004

ಬೆಳಗಾವಿ-18:-ನಗರದ ವಡಗಾಂವದ ಸರಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರು, ಬೆಳಗಾವಿ ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದ ಪ್ರಧಾನ ಕಾರ್ಯದರ್ಶಿಗಳು ಹಾಗೂ ಶಿಕ್ಷಕರ ಸಂಘ ಗಳ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಡಾ ನಾಗರಾಜ ಮರೆಣ್ಣವರ ರಿಗೆ ರಾಜ್ಯ ಮಟ್ಟದ ಕಾಯಕಯೋಗಿ ಪ್ರಶಸ್ತಿಗೆ ಜಿಲ್ಲೆಯಿಂದ ಆಯ್ಕೆ ಯಾಗಿದ್ದಾರೆ.

ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ಪ್ರತಿವರ್ಷ ನೀಡುವ ಈ ಪ್ರಶಸ್ತಿಗೆ ಅವರ ಶೈಕ್ಷಣಿಕ,ಸಾಮಾಜಿಕ ಸಂಶೋಧನ ಕ್ಷೇತ್ರಗಳಲ್ಲಿ ಮಾಡಿದ ಸೇವೆ, ರಾಜ್ಯ ಸಂಪನ್ಮೂಲವ್ಯಕ್ತಿ ಯಾಗಿ ಮಾಡಿರುವ ಸೇವೆಯನ್ನು ಗುರುತಿಸಿ ಕರ್ನಾಟಕ ವೈಜ್ಞಾನಿಕ ಸಂಶೋಧನಾ ಪರಿಷತ್ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಹುಲಿಕಲ್ ನಟರಾಜ ರವರು ಆಯ್ಕೆ ಮಾಡಿದ್ದಾರೆಂದು ಜಿಲ್ಲಾಧ್ಯಕ್ಷರಾದ ಸಂಗಮೇಶ ಖನ್ನಿನಾಯ್ಕರ ತಿಳಿಸಿದ್ದಾರೆ
ಇದೇ ತಿಂಗಳು ದಿ 13 ರಂದು ಬೀದರದ ಡಾ ಚನ್ನಬಸವ ಪಟ್ಟದೇವರ ರಂಗ ಮಂದಿರದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಸಚಿವರಾದ ಈಶ್ವರ ಖಂಡ್ರೆ, ಇಸ್ರೋ ಮಾಜಿ ಅಧ್ಯಕ್ಷರಾದ ಕಿರಣ ಕುಮಾರರವರು ಪ್ರಶಸ್ತಿ ವಿತರಣೆ ಮಾಡಲಿದ್ದಾರೆ
ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿರುವ ಡಾ ನಾಗರಾಜ ಮರೆಣ್ಣವರ ರಿಗೆ ಕಾಯಕಯೋಗಿ ಪ್ರಶಸ್ತಿಗೆ ಬಾಜನ ರಾಗಿರುವುದು ಅಭಿಮಾನ ಪಡುವ ಸಂಗತಿಯಾಗಿದೆ ಎಂದು ಹೇಳಿ ಜಿಲ್ಲಾ ನೌಕರರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷರಾದ ಸುರೇಶ ಸಕ್ರೆನವರ, ಜಿಲ್ಲಾ ವೈಜ್ಞಾನಿಕ ಸಂಶೋಧನಾ ಪರಿಷತ್ ಜಿಲ್ಲಾ ಕಾರ್ಯದರ್ಶಿ ರುದ್ರಣ್ಣ ಚಂದರಗಿ, ಶ್ರೀ ಸದ್ಗುರು ಸಾಹಿತ್ಯ ಪ್ರತಿಷ್ಠಾನದ ಅಧ್ಯಕ್ಷರಾದ ಬಸವರಾಜ ಫಕೀರಪ್ಪ ಸುಣಗಾರ ಮತ್ತು ಉಪನ್ಯಾಸಕರ ಸಂಘದ ಅಧ್ಯಕ್ಷರಾದ ರವಿಶಂಕರ ಮಠ ರವರು ಅಭಿನಂದನೆ ಸಲ್ಲಿಸಿ ಸಂತೋಷ ವ್ಯಕ್ತಪಡಿಸಿದ್ದಾರೆ

error: Content is protected !!