ಬೆಳಗಾವಿ-16: ಅಥಣಿ ತಾಲೂಕಿನ ಸರಕಾರಿ ಶಾಲೆಯ ಮಕ್ಕಳಿಗೆ ಸುಮಾರು 27000 ನೋಟ್ ಬುಕ್ ಗಳನ್ನು ಉಚಿತವಾಗಿ ವಿತರಣೆ ಮಾಡುತ್ತಿರುವ ಸುಂದರ ಭಾರತ ಟ್ರಸ್ಟ್ ಸೇವೆ ಶ್ಲಾಘನೀಯವಾಗಿದೆ ಎಂದು ಮುಖಂಡ ಶಶಿಧರ ಬರ್ಲಿ ಹೇಳಿದರು.
ಮಂಗಳವಾರ ತಾಲೂಕಿನ ರಡ್ಡೆರಹಟ್ಟಿ ಹಾಗೂ ಅರಳೀಹಟ್ಟಿ ಗ್ರಾಮಗಳ ಸರಕಾರಿ ಪ್ರೌಢ ಶಾಲೆಯಲ್ಲಿ ಎಲ್ಲ ಮಕ್ಕಳಿಗೆ ಸುಂದರ ಭಾರತ ಟ್ರಸ್ಟ್ ವತಿಯಿಂದ ಉಚಿತ ನೋಟಬುಕ್ ವಿತರಿಸಿ ಮಾತನಾಡಿದರು. ಯಾವುದೇ ಪಲಾಪೇಕ್ಷೆ ಇಲ್ಲದೆ ಮುಕ್ತ ಮನಸ್ಸಿನಿಂದ ಮಕ್ಕಳ ಕಲಿಕೆಗೆ ಪ್ರೋತ್ಸಾಹ ನೀಡುತ್ತಿರುವ ಪ್ರತಾಪ ಪರಾಶರ ಹಾಗೂ ಅವರ ತಂಡದ ಕಾರ್ಯಕ್ಕೆ ಪ್ರಶಂಸೆ ವ್ಯಕ್ತಪಡಿಸಿದರು.
ಈ ವೇಳೆ ಬಸವರಾಜ ಪ್ರಧಾನಿ, ಪ್ರವೀಣ್ ರೂಗಿ ಸೇರಿದಂತೆ ಶಾಲಾ ಸಿಬ್ಬಂದಿಗಳು ಹಾಗೂ ಹಲವರು ಹಾಜರಿದ್ದರು.