23/12/2024
IMG-20240711-WA0003

ಕಲ್ಯಾಣ ಕರ್ನಾಟಕದ ಕಲಬುರಗಿ ಜಿಲ್ಲೆಯವರಾದ ಆಯೇಷಾ ಖಾನಂ ಅವರು ದಿ ಏಷಿಯನ್​ ಏಜ್​, ಸ್ಟಾರ್​ ನ್ಯೂಸ್​, ಆಜ್​ ತಕ್​, ದೂರದರ್ಶನದ ಸೇರಿದಂತೆ ವಿವಿಧ ಮಾಧ್ಯಮಗಳಲ್ಲಿ ವರದಿಗಾರರಾಗಿ ಕೆಲಸ ಮಾಡಿದ್ದಾರೆ.
ಕರ್ನಾಟಕ ಮಾಧ್ಯಮ ಅಕಾಡೆಮಿಗೆ ಹಿರಿಯ ಪತ್ರಕರ್ತೆ ಆಯೇಷಾ ಖಾನಂ ಅವರನ್ನು ಅಧ್ಯಕ್ಷರನ್ನಾಗಿ ಸರ್ಕಾರ ನೇಮಿಸಿದೆ.

ಇದೇ ಮೊದಲ ಬಾರಿಗೆ ಅಲ್ಪಸಂಖ್ಯಾತ ಸಮುದಾಯದವರನ್ನು ಮತ್ತು ಮಹಿಳೆಯನ್ನು ಮಾಧ್ಯಮ ಅಕಾಡೆಮಿಗೆ ಅಧ್ಯಕ್ಷರನ್ನಾಗಿ ನೇಮಕ ಮಾಡಿರುವುದು ವಿಶೇಷವಾಗಿದೆ.
ಆಯೇಷಾ ಖಾನಂ ಅವರು ದೂರದರ್ಶನದ ದಕ್ಷಿಣ ಭಾರತದ ಮುಖ್ಯ ವರದಿಗಾರರಾಗಿದ್ದರು. ಜು.9ರಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಅವರು 26 ವರ್ಷಗಳ ಕಾಲ ಪತ್ರಿಕೋದ್ಯಮದಲ್ಲಿ ಕಾರ್ಯ ನಿರ್ವಹಿಸಿದ್ದು, ಶ್ರೀಲಂಕಾ ಸಂಘರ್ಷ, 11 ರಾಜ್ಯಗಳ ಚುನಾವಣೆ ಹಾಗೂ 5 ಸಾರ್ವತ್ರಿಕ ಲೋಕಸಭಾ ಚುನಾವಣೆಗಳಲ್ಲಿ ಪರಿಣಾಮಕಾರಿ ವರದಿಗಾರಿಕೆ ಮಾಡಿ ಖ್ಯಾತಿ ಗಳಿಸಿದ್ದಾರೆ.

ಅಕಾಡೆಮಿಯ ಸದಸ್ಯರಾಗಿ ಹಿರಿತ ಪತ್ರಕರ್ತ ಚಿತ್ರದುರ್ಗದ ಅಹೋಬಳಪತಿ, ಬೆಂಗಳೂರಿನ ಪತ್ರಿಕಾ ಛಾಯಾಗ್ರಾಹಕ ಕೆ.ವೆಂಕಟೇಶ್ ಮತ್ತು ಕೊಪ್ಪಳದ ಹಿರಿಯ ಪತ್ರಕರ್ತ ಕೆ.ನಿಂಗಜ್ಜ ಅವರನ್ನು ನೇಮಕ ಮಾಡಲಾಗಿದೆ.

error: Content is protected !!