ಬೆಳಗಾವಿ-೦೩: ಮನುಷ್ಯ ದೈಹಿಕವಾಗಿ ಮಾನಸಿಕವಾಗಿ ಆರೋಗ್ಯವಂತರಾಗಿಲು ಭಗವದ್ಗೀತೆಯಲ್ಲಿ ಮತ್ತು ಶರಣರ ವಚನದಲ್ಲಿ ಹೇಳಿದಂತೆ ಹಿತಮಿತ ಆಹಾರ ಸೇವಿಸಿ ಯೋಗಧ್ಯಾನ ಮಾಡಿ ಸ್ವಾಸ್ಥ ಜೀವನ ನಡೆಸಬೇಕೆಂದು ಕಾರಂಜಿಮಠದ ಗುರುಸಿದ್ಧ ಸ್ವಾಮಿಗಳು ಹೇಳಿದ್ದರು .
ನಗರದ ಕಾರಂಜಿಮಠದ ಶಿವಾನುಭವ ಮಂಟಪದಲ್ಲಿ ಜರುಗಿದ 272 ಶಿವಾನುಭವ ಕಾರ್ಯಕ್ರಮದಲ್ಲಿ ದಿವ್ಯ ಸಾನಿದ್ಯ ವಹಿಸಿದ ಮಾತನಾಡಿದ ಅವರು, ಶ್ರೀಕೃಷ್ಣನ ಪ್ರಕಾರ ದೀರ್ಘಾಯುಷ್ಯ, ಸದ್ಗುಣ, ಶಕ್ತಿ, ಆರೋಗ್ಯ, ಸಂತೋಷವನ್ನು ಉತ್ತೇಜಿಸುವ ಆಹಾರಗಳು ರಸಭರಿತ, ನಯವಾದ, ಗಣನೀಯ ಮತ್ತು ಪೌಷ್ಟಿಕವಾಗಿರುತ್ತದೆ.
ಇಂತಹ ಆಹಾರಗಳು ಆಹ್ಲಾದಕರ ಮನಸ್ಥಿತಿಯಲ್ಲಿರುವ ಜನರನ್ನು ಆಕರ್ಷಿಸುತ್ತವೆ. ಸಂಪೂರ್ಣ ಆರೋಗ್ಯದ ಪ್ರಮುಖ ಅಂಶವೆಂದರೆ ಮಾನಸಿಕ ಸ್ವಾಸ್ಥ್ಯ. ಸಾತ್ವಿಕ ಪಾಕಪದ್ಧತಿಯು ನಿಮಗೆ ಶಾಂತವಾದ ಮನಸ್ಸು, ಉತ್ತಮ ಆರೋಗ್ಯ, ದೀರ್ಘಾಯುಷ್ಯ ಮತ್ತು ಎಲ್ಲಾ ಸಮಯದಲ್ಲೂ ಉತ್ತಮ ಮನಸ್ಥಿತಿಯನ್ನು ನೀಡುತ್ತದೆ. ಸಾತ್ವಿಕ ಆಹಾರವು ಜೀರ್ಣಿಸಿಕೊಳ್ಳಲು ಸುಲಭವಾಗಿರುವುದರಿಂದ ಮತ್ತು ಸೇವಿಸಿದಾಗ ನಿಮ್ಮ ಮನಸ್ಥಿತಿ ಮತ್ತು ದೇಹವನ್ನು ನಿರಾಳವಾಗಿಡುತ್ತದೆ ಎಂಬ ಅಂಶದಿಂದಾಗಿ ಸಾತ್ವಿಕ ಆಹಾರವು ಶ್ರೇಷ್ಠ ಆಹಾರವಾಗಿದೆ.ಎಲ್ಲರೂ ಉತ್ತಮ ಆರೋಗ್ಯದೆಡೆ ಸಾಗಬೇಕು ಎಂದು ಎಂದು ಶ್ರೀಗಳು ಆಶೀರ್ವಚನ ನೀಡಿದರು.
ಈ ವೇಳೆ ಗಂದಿಗವಾಡ ಶ್ರೀ ಮೃತ್ಯುಂಜಯ ಸ್ವಾಮಿಜೀ ಮಾತನಾಡಿ, ಅತಿಯಾಗಿ ಉಣ್ಣುವವನು, ಏನೂ ಉಣ್ಣದೇ ಇರುವವನು, ಅತಿಯಾಗಿ ನಿದ್ರೆಮಾಡುವವನು ನಿದ್ರೆ ಇಲ್ಲದೇ ಇರುವವನು (ಧ್ಯಾನಯೋಗಕ್ಕೆ) ಅನರ್ಹನು. ಯೋಗ್ಯವಾದ ಆಹಾರ ಹಾಗೂ ವಿಹಾರದಲ್ಲಿ ಕರ್ಮದಲ್ಲಿ ತೊಡಗಿದವನು, ಅವಶ್ಯಕವಾದ ನಿದ್ರೆ ಹಾಗೂ ಎಚ್ಚರವನ್ನು ಕಾಪಾಡಿಕೊಂಡು ಬಂದವನು ಧ್ಯಾನಯೋಗದಿಂದ ಸಂಸಾರಿಕ ದುಃಖಗಳನ್ನೆಲ್ಲ ಕಳೆದುಕೊಳ್ಳಲು ಸಾಧ್ಯ ಎಂದು ಹೇಳಿದ್ದರು .
ಈ ವೇಳೆ ಪ್ರಕಾಶ ಕುಲಕರ್ಣಿ ಮಾತನಾಡಿ , ಒಂದು ಕುಟುಂಬ ಎಂದ ಮೇಲೆ ಅದರಲ್ಲಿ ಅಪ್ಪನ ಜವಾಬ್ದಾರಿ ಎಷ್ಟಿರುತ್ತದೋ ಅಮ್ಮನ ಜವಾಬ್ದಾರಿ ಕೂಡ ಅದಕ್ಕೂ ಮಿಗಿಲಾಗಿರುತ್ತದೆ ತಾಯಿಯ ಗುಣಗಳ ಗುಣಗಾನ ಮಾಡಲು ದಿನವೂ ಸಾಲುವುದಿಲ್ಲ, ಪದಗಳೂ ಸಾಲುವುದಿಲ್ಲ ಸಾವಿರಾರು ವರ್ಷಗಳಿಂದ ರಸಾಯನ ಶಾಸ್ತ್ರ, ಭೌತಶಾಸ್ತ್ರಗಳಲ್ಲಿ ಸೂತ್ರಗಳಿವೆಯೋ ಹಾಗೆಯೇ ಭಗವದ್ಗೀತೆಯೂ ಜೀವನದ ಸೂತ್ರಗಳನ್ನು ಒಳಗೊಂಡಿದೆ. ಗೀತೆಯನ್ನು ಕೇವಲ ಧಾರ್ಮಿಕ ಗ್ರಂಥವಾಗಿ ನೋಡದೆ ಸ್ಫೂರ್ತಿಯ ಸೆಲೆಯಾಗಿ ನೋಡಬೇಕು ಎಂದು ಹೇಳಿದರು.
ಪೂಜ್ಯ ಶ್ರೀ ಶಿವಶರಣರ ದೇವರು ಅಲೌಕಿಕ ಧ್ಯಾನಮಂದಿರ ನಿಲಜಿ ಅವರು “ಭಗವದ್ಗೀತೆಯಲ್ಲಿ ಸ್ವಾಸ್ಥ್ಯಜೀವನ” ಎಂಬ ವಿಷಯ ಕುರಿತು ಉಪನ್ಯಾಸ ನೀಡುವರು . ಕಾರಂಜಿಂಠರದ ಉತ್ತರಾಧಿಕಾರಿ ಡಾ. ಶಿವಯೋಗಿ ದೇವರು ಕಾರ್ಯಕ್ರಮದ ನೇತೃತ್ವ ವಹಿಸಿದರು.
272 ನೇ ಶಿವಾನುಭವ ಕಾರ್ಯಕ್ರಮದಲ್ಲಿ ಶ್ರೇಷ್ಠ ಕೃಷಿಕ ಪ್ರಶ್ತಸಿ ಪಡೆದ ಪ್ರಕಾಶ ಕುಲಕರ್ಣಿ ಸೇರಿ ವಿವಿಧ ಗಣ್ಯರಿಗೆ ಸನ್ಮಾನಿಸಲಾಯಿತು.
ಇದೇ ಸಂದರ್ಭದಲ್ಲಿ ಅವರ ಷಷ್ಟ್ರಬ್ಬಿ ಸಮಾರಂಭ ಹಮ್ಮಿಕೊಳ್ಳಲಾಗಿದೆ. ಕಾರಂಜಿಮಠದ ಶಾಲೆಯ ಮಕ್ಕಳಿಂದ ಸಂಗೀತಾ ಕಾರ್ಯಕ್ರಮ ನಡೆಸಿಕೊಡಲಾಯಿತು.
ಕಾರ್ಯಕ್ರಮದಲ್ಲಿ ಎ.ಕೆ ಪಾಟೀಲ್ ,ಶ್ರೀಕಾಂತ ಶಾನವಾಡ , ವಿ.ಬಿ ದೊಡ್ಡಮನಿ ,ವಿ.ಕೆ ಪಾಟೀಲ್ ಸೇರಿ ವಿವಿಧ ಗಣ್ಯರು ಉಪಸ್ಥಿತಿದ್ದರು.