ಬೆಳಗಾವಿ-೦೨:ವೈದ್ಯೋ ನಾರಾಯಣ. ಅಂದರೆ ವೈದ್ಯರು ದೇವರಿಗೆ ಸಮ,ವಿಶ್ವ ವೈದ್ಯರ ದಿನಾಚರಣೆ ನಿಮಿತ್ತವಾಗಿ ನಗರದ ಪ್ರತಿಷ್ಠಿತ ಕಣ್ಣಿನ ಆಸ್ಪತ್ರೆಯಾದ ನೇತ್ರದರ್ಶನ್ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ ಯೂನಿಟ್ ಆಫ್ ಡಾ. ಅಗರ್ವಾಲ್ಸ್ ಕಣ್ಣಿನ ಆಸ್ಪತ್ರೆ ಅನಗೊಳ ಬೆಳಗಾವಿ .ಇಲ್ಲಿನ ಖ್ಯಾತ ಹಾಗೂ ಹೆಸರಾಂತ ಕಣ್ಣಿನ ವೈದ್ಯರಾದ ಡಾ. ಸಚಿನ ಮಾಹುಲಿ, DO.DNB.FMRF.FVRF. ಕಣ್ಣಿನ ರೇಟಿನಾ ತಜ್ಞರು, ಮತ್ತು ಡಾ. ಅಲ್ಪೇಶ ಟೋಪರಾನಿ MS.FPAS.FAPCS.ಕಣ್ಣಿನ ರೀಫ್ರ್ಯಾಕ್ಟಿವ್ ತಜ್ಞರು. ಇವರನ್ನು ವಿಶ್ವ ವೈದ್ಯರ ದಿನಾಚರಣೆ ನಿಮಿತ್ತವಾಗಿ ಶ್ರೀ ಆಕಾಶ ಹಲಗೇಕರ ಅವರು ಸನ್ಮಾನಿಸಿದರು ಹಾಗೂ ಶ್ರೀ ಸುನೀಲಕುಮಾರ ದೇವರ ಅನ್ನ ಫೌಂಡೇಶನ್ ಉಪಾಧ್ಯಕ್ಷರು ಸಾಥ ನೀಡಿದರು, ಇದೆ ಸಂದರ್ಭದಲ್ಲಿ ಆಸ್ಪತ್ರೆಯ ವೈದ್ಯರ ಸೇವೆಯನ್ನು ಸ್ಮರಿಸಿದರು. ಉಚಿತ ಕಣ್ಣಿನ ಶಿಬಿರಗಳು. ಉಚಿತ ಮೋತಿಬಿಂದು ಶಸ್ತ್ರಚಿಕಿತ್ಸೆ. ಉಚಿತ ಕಣ್ಣಿನ ಪರೀಕ್ಷೆ.ಕಳೆದ 15 ವರ್ಷಗಳಿಂದ ಡಾ. ಸಚಿನ ಮಾಹುಲಿ ಹಾಗೂ ಡಾ. ಅಲ್ಪೇಶ ಟೋಪರಾನಿ ಇವರುಗಳು ಮಾಡುತ್ತಾ ಸಮಾಜದಲ್ಲಿ ಯಾರು ದೃಷ್ಟಿ ಹೀನರಾಗಿ ಇರಬಾರದು ಅನ್ನೋ ಉದ್ದೇಶದಿಂದ ಉಚಿತ ನೇತ್ರ ಚಿಕಿತ್ಸೆಯನ್ನು ಮಾಡುತ್ತಾ ಬಂದಿದ್ದಾರೆ. ಇವರ ಈ ಕಾರ್ಯ ಶ್ಲಾಘನೀಯ. ಇವರ ಈ ಸೇವೆ ಹೀಗೆ ಮುಂದುವರಿಯಲಿ ಅಂತ ನಾವು ಆಶಿಸೋಣ.