ಬೆಳಗಾವಿ-೦೧:ರಾಜ್ಯ ಸರ್ಕಾರವು ರೈತರಿಗೆ ಶಿಘ್ರವೇ ಹಾಲಿನ ಪ್ರೋತ್ಸಾಹ ಧನ ಬಿಡುಗಡೆ ಹಾಗೂ ಹಾಲಿನ ಪ್ರೋತ್ಸಾಹ ಧನವನ್ನು 5 ರಿಂದ 10 ರೂಪಾಯಿಗೆ ಏರಿಕೆ ಮಾಡಬೇಕು ಜೋತೆಗೆ ಸದ್ಯ ಏರಿಕೆ ಮಾಡಿರುವ ಗ್ರಾಹಕರ ಹಾಲಿನ ಇಳಿಸಬೇಕು ಎಂದು ಸೋಮವಾರ ಬಿಜೆಪಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಗೆ ಮನವಿ ಅರ್ಪಿಸಿದರು.
ದರವನ್ನು ಏರಿಸಿ ರಾಜ್ಯಾದ್ಯಂತ ಜನ ವಿರೋಧಿ ನೀತಿಯನ್ನ ಅನುಸರಿಸುತ್ತಿದ್ದು ಇದು ಜನರ ಮೇಲೆ ಸರ್ಕಾರ ಲೋಕಸಭೆ ಚುನಾವಣೆಯ ಸೋಲಿನ ಪ್ರತಿಕಾರವನ್ನು ತೀರಿಸಿಕೊಂಡಂತೆ ಕಾಣುತ್ತಿದೆ ಶೀಘ್ರವೇ ಹಾಲಿನ ದರವನ್ನು ಇಳಿಕೆ ಮಾಡಿ ಜೊತೆಗೆ ಅಗತ್ಯ ವಸ್ತುಗಳ ಬೆಲೆಯನ್ನು ಏರಿಸುತ್ತಿರುವುದನ್ನು ನಿಲ್ಲಿಸಿ ಜನಪರ ಆಡಳಿತವನ್ನು ನೀಡಬೇಕು ಇಲ್ಲವಾದರೆ ರಾಜೀನಾಮೆ ಕೊಟ್ಟು ಮನೆಗೆ ಹೋಗಬೇಕೆಂದು ಈ ಮೂಲಕ ಎಚ್ಚರಿಸುತ್ತೇವೆ. ಸರ್ಕಾರ ರೈತರಿಗೆ ಶಿಘ್ರವೇ ಹಾಲಿನ ಪ್ರೋತ್ಸಾಹ ಧನ ಬಿಡುಗಡೆ ಮಾಡಬೇಕು ಹಾಗೂ ಹಾಲಿನ ಪ್ರೋತ್ಸಾಹ ಧನವನ್ನು 5 ರಿಂದ 10 ರೂಪಾಯಿಗೆ ಏರಿಕೆ ಮಾಡಬೇಕು. ಏರಿಕೆ ಮಾಡಿರುವ ಗ್ರಾಹಕರ ಹಾಲಿನ ದರವನ್ನು ಶೀಘ್ರವೇ ಇಳಿಕೆ ಮಾಡದಿದ್ದರೆ ರೈತ ಮೋರ್ಚಾ ನೇತೃತ್ವದಲ್ಲಿ ರಾಜ್ಯಾದ್ಯಂತ ಉಗ್ರ ಪ್ರತಿಭಟನೆ ಮಾಡಲಾಗುವುದು ಅದಕ್ಕೆ ಸರ್ಕಾರವೇ ಹೊಣೆ ಯಾಗುತ್ತದೆ ಎಂದು ಎಂದು ಜಿಲ್ಲಾಧಿಕಾರಿ ಮೂಲಕ ಮನವಿಯನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ಸುಭಾಸ ಪಾಟೀಲ ಜಿಲ್ಲಾಧ್ಯಕ್ಷರು ಬಿಜೆಪಿ ಬೆಳಗಾವಿ ಗ್ರಾಮಾಂತರ ಜಿಲ್ಲೆ,ಜಗದೀಶ ಚ ಬೂದಿಹಾಳ ಜಿಲ್ಲಾಧ್ಯಕ್ಷರು ಬಿಜೆಪಿ ರೈತ ಮೋರ್ಚಾ ಬೆಳಗಾವಿ ಗ್ರಾಮಾಂತರ ಜಿಲ್ಲೆ,ಲ್ಲಪ್ಪ ಶಾಹಾಪುರಕರ,ಗೀತಾ ಸುತಾರ,ಲೀನಾ ಟೋಪಣ್ಣವರ,ಎಫ್ ಎಸ್ ಸಿದ್ದನಗೌಡರ,ಮಾಜಿ ಶಾಸಕ ಸಂಜಯ ಪಾಟೀಲ,ಇತರರು ಹಾಜರಿದ್ದರು.