ಬೆಳಗಾವಿ-೩೦: ಚಿದಂಬರ ನಗರದ ಚಿದಂಬರೇಶ್ವರ ದೇವಸ್ಥಾನದಲ್ಲಿ ಶಾಂಭವಿ ಮಹಿಳಾ ಮಂಡಳದ ವತಿಯಿಂದ ಮತ್ತು ಲೇಕವ್ಯೂ ಆಸ್ಪತ್ರೆಯ ಸಹಕಾರದಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿತ್ತು.
ಸುಮಾರು150 ಕ್ಕೂ ಹೆಚ್ಚು ಜನ ಚಿಕಿತ್ಸೆಯ ಲಾಭ ಪಡೆದುಕೊಂಡರು,
ಬಿಪಿ, ಶುಗರ್ ಜನರಲ್ ತಪಾಸಣೆ ಸೇರಿದಂತೆ ನೇತ್ರ ತಪಾಸಣೆಯನ್ನೂ ಕೂಡ ಇದೇ ಸಂದರ್ಭದಲ್ಲಿ ಮಾಡಲಾಯಿತು, ಸಿದ್ಧಾರ್ಥ ನೇತ್ರಾಲಯದವರು ನೇತ್ರ ತಪಾಸಣೆ ಮಾಡಿದರು,
ಈ ತಪಾಸಣೆ ಶಿಬಿರಕ್ಕೆ ಆಕಸ್ಮಿಕ ಭೆಟ್ಟಿ ನೀಡಿದ ಲೇಕವ್ಯೂ ಆಸ್ಪತ್ರೆಯ ಹಿರಿಯ ವೈದ್ಯಾಧಿಕಾರಿ ಡಾ, ಗಿರೀಶ್ ಸೋನವಾಲ್ಕರ ಅವರನ್ನು ಶಾಂಭವಿ ಮಹಿಳಾ ಮಂಡಳದವರು ಸನ್ಮಾನಿಸಿದರು,
ಇದೇ ಸಂದರ್ಭದಲ್ಲಿ ಆರೋಗ್ಯಕ್ಕೆ ಸಂಬಂಧಿಸಿದಂತೆ ಇನ್ಣೂ ಹೆಚ್ಚಿನ ಸೇವೆಗೆ ತಮ್ಮ ಆಸ್ಪತ್ರೆ ಸದಾ ಸಿದ್ಧ ಎಂದು ಭರವಸೆ ನೀಡಿದರು,
ಇದೇ ಸಂದರ್ಭದಲ್ಲಿ ಶಾಸಕ ಅಭಯ ಪಾಟೀಲರ ಸಹಕಾರದಿಂದ ಪ್ರತಿಯೊಬ್ಬರಿಗೂ ಡೆಂಗ್ಯೂ ಹನಿಯನ್ನು ಹಾಕಲಾಯಿತು.
ಬೆಳಗಾವಿಯ ಚಿದಂಬರ ನಗರದಲ್ಲಿ ರವಿವಾರ ನಡೆದ ಉಚಿತ ಆರೋಗ್ಯ ತಪಾಸಣೆ ಶಿಬಿರಕ್ಕೆ ಭೆಟ್ಟಿ ನೀಡಿದಲೇಕವ್ಯೂ ಆಸ್ಪತ್ರೆಯ ಹಿರಿಯ ವೈದ್ಯಾಧಿಕಾರಿ ಗಿರೀಶ್ ಸೋನವಾಲ್ಕರ ಅವರನ್ನು ಶಾಂಭವಿ ಮಹಿಳಾ ಮಂಡಳದ ವತಿಯಿಂದ ಸನ್ಮಾನಿಸಲಾಯಿತು.