23/12/2024
IMG-20240626-WA0004

ಬೆಳಗಾವಿ-೨೬:ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಬೆಳಗಾವಿ ವತಿಯಿಂದ ನಗರದ ಚನ್ನಮ್ಮ ವೃತ್ತದಲ್ಲಿ ವಿದ್ಯಾರ್ಥಿಗಳ ಬಸ್ ಪಾಸ್ ವಿಸ್ತರಣೆ ಹಾಗೂ ಸರಿಯಾದ ಸಮಯಕ್ಕೆ ತರಗತಿ ಹಾಜರಾಗಲು ಹೆಚ್ಚಿನ ಸಂಖ್ಯೆಯಲ್ಲಿ ಬಸ್ ಗಳನ್ನು ಬಿಡಬೇಕೆಂದು ಆಗ್ರಹಿಸಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಲಾಯಿತು. ನಂತರ ಜಿಲ್ಲಾಧಿಕಾರಿಗಳು ಹಾಗೂ KSRTC ವಿಭಾಗೀಯ ನಿರ್ವಹಣಾ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಚಿನ ಹಿರೇಮಠ, ಜಿಲ್ಲಾ ಸಂಘಟನಾ ಕಾರ್ಯದರ್ಶಿ,ರೋಹಿತ ಅಳಕುಂಟೆ, ನಗರ ಕಾರ್ಯದರ್ಶಿ ಸಂದೀಪ ದಂಡಗಲ,ಪಾಣಿರಾಘವೇಂದ್ರ,ಕುಶಾಲ ಗೋಧಗೇರಿ,ಯಲ್ಲಪ್ಪ ಪ್ರಜ್ವಲ ಪ್ರಥಮ ಹಾಗೂ ಇನ್ನೂ ಅನೇಕರು ಉಪಸ್ಥಿತಿರಿದ್ದರು.

error: Content is protected !!