23/12/2024
IMG-20240626-WA0000

ಬೆಳಗಾವಿ-೨೬: ಮುಂಗಾರು ಮಳೆ ಆರಂಭವಾಗಿದ್ದು, ನಗರದಲ್ಲಿ ಎಲ್ಲೆಡೆ ಚಿಕೂನ್‌ಗುನ್ಯಾ, ಡೆಂಗ್ಯೂ ರೋಗಿಗಳು ಕಂಡು ಬರುತ್ತಿದ್ದು, ಇದನ್ನು ಗಮನದಲ್ಲಿಟ್ಟುಕೊಂಡು ಏಂಜಲ್ ಫೌಂಡೇಶನ್ ಸೋಮವಾರ ೨೫.ಜೂನ್ ರಂದು ಅಲಾರವಾಡದ ಸರ್ಕಾರಿ ಪ್ರಾಥಮಿಕ ಕನ್ನಡ ಶಾಲೆಯಲ್ಲಿ ಚಿಕೂನ್‌ಗುನ್ಯಾ ಮತ್ತು ಡೆಂಗ್ಯೂ ವಿರುದ್ಧ ಲಸಿಕೆ ಹಾಕುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

 ಸೋಮವಾರ 25 ಜೂನ್ 2024, ಶಾಲಾ ವಿದ್ಯಾರ್ಥಿಗಳಿಗೆ ಡೆಂಗ್ಯೂ ಮತ್ತು ಚಿಕೂನ್‌ಗುನ್ಯಾ ತಡೆಗಟ್ಟುವ ಲಸಿಕೆ ಶಿಬಿರವನ್ನು ಆಯೋಜಿಸಲಾಗಿತ್ತು.  ಫೌಂಡೇಶನ್ ಪದಾಧಿಕಾರಿಗಳು ಹಾಗೂ ಶಿಕ್ಷಕರು ವಿದ್ಯಾರ್ಥಿಗಳಿಗೆ ಡೆಂಗ್ಯೂ ಮತ್ತು ಚಿಕೂನ್ ಗುನ್ಯಾ ಲಸಿಕೆ ಹಾಕಿದರು.

ಈ ಸಂದರ್ಭದಲ್ಲಿ ಶಾಲೆಯ ಎಸ್ ಡಿಎಂಸಿ ಉಪಾಧ್ಯಕ್ಷೆ ಪದ್ಮಶ್ರೀ ಬಸ್ತವಾಡ, ಶಾಲಾ ಮುಖ್ಯೋಪಾಧ್ಯಾಯ ಪಿ.ಕೆ.  ಅರ್ಕ್ಷಾಲಿ, ಏಂಜೆಲ್ ಫೌಂಡೇಶನ್ ಅಧ್ಯಕ್ಷೆ ಮೀನತಾಯಿ ಬೆಂಕೆ, ಉಪಾಧ್ಯಕ್ಷ ದೀಪಕ್ ಸುತಾರ್, ಸದಸ್ಯರಾದ ಭಾರತಿ ಬದ್ವಿ, ಪ್ರಸಾದ್ ಸಂಕಣ್ಣವರ, ರೇಣುಕಾ ಹೊಸೂರು, ಶಶಿಕಲಾ ಜೋಶಿ, ಏಂಜಲೀನಾ ಡಿಸೋಜಾ, ಶಾಲೆಯ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

error: Content is protected !!