23/12/2024
IMG-20240615-WA0029_copy_512x325

ಬೆಳಗಾವಿ-೧೬: ನಗರದ ಖ್ಯಾತ ವೈದ್ಯ ಡಾ. ಗಿರೀಶ್ ಸೋನವಾಲ್ಕರ್ ಅವರ ಮನೆಗೆ ಲೋಕೋಪಯೋಗಿ ಇಲಾಖೆ ಸಚಿವ ಸತೀಶ್‌ ಜಾರಕಿಹೊಳಿ, ಚಿಕ್ಕೋಡಿ ಲೋಕಸಭೆ ಸದಸ್ಯೆ ಪ್ರಿಯಂಕಾ ಜಾರಕಿಹೊಳಿ ಅವರು ಭೇಟಿ ನೀಡಿ ಆತ್ಮೀಯ ಸನ್ಮಾನ ಸ್ವೀಕರಿಸಿದರು.

ಚಿಕ್ಕೋಡಿ ಲೋಕಸಭೆ ಕ್ಷೇತ್ರದಿಂದ ಗೆದ್ದು ಸಂಸದೆಯಾಗಿ ಆಯ್ಕೆಯಾಗಿ ಮೊದಲ ಬಾರಿಗೆ ಪ್ರಿಯಂಕಾ ಜಾರಕಿಹೊಳಿ ಅವರು ನಗರದ ಲಕ್ಷ್ಮೀ ಟೇಕ್‌ ನಲ್ಲಿರುವ ಖ್ಯಾತ ವೈದ್ಯ ಡಾ. ಗಿರೀಶ್ ಸೋನವಾಲ್ಕರ್ ಅವರ ಮನೆಗೆ ಭೇಟಿ ನೀಡಿದ ಹಿನ್ನೆಲೆಯಲ್ಲಿ ಡಾ. ಗಿರೀಶ್ ಸೋನವಾಲ್ಕರ್ ದಂಪತಿಗಳು, ಕುಟುಂಬಸ್ಥರು ವಿಶೇಷವಾಗಿ ಸನ್ಮಾನಿಸಿದರು.

ಇದೇ ವೇಳೆ ಸಂಸದೆ ಪ್ರಿಯಂಕಾ ಜಾರಕಿಹೊಳಿಯವರು ಡಾ. ಗಿರೀಶ್ ಸೋನವಾಲ್ಕರ್ ಅವರ ತಾಯಿ ಲಕ್ಷ್ಮೀ ಸೋನವಾಲ್ಕರ್ ಅವರ ಆಶೀರ್ವಾದವನ್ನು ಪಡೆದರು. ಡಾ. ಗಿರೀಶ್ ಸೋನವಾಲ್ಕರ್ ಅವರ ಪತ್ನಿ ಡಾ. ಸವಿತಾ ಸೋನವಾಲ್ಕರ್ ಅವರು ಸಂಸದೆ ಪ್ರಿಯಂಕಾ ಜಾರಕಿಹೊಳಿ ಅವರನ್ನು ಆರತಿ ಬೆಳಗುವ ಮೂಲಕ ಮನೆಯೊಳಗೆ ಸ್ವಾಗತಿಸಿದರು.

ಈ ಸಂದರ್ಭದಲ್ಲಿ ಸತೀಶ್‌ ಶುಗರ್ಸ್‌ ನಿರ್ದೇಶಕ, ಯುವ ಕಾಂಗ್ರೆಸ್ ನಾಯಕ ರಾಹುಲ್‌ ಜಾರಕಿಹೊಳಿ ಸೇರಿದಂತೆ ಖ್ಯಾತ ವೈದ್ಯ ಡಾ. ಗಿರೀಶ್ ಸೋನವಾಲ್ಕರ್ ಅವರ ಸಹೋದರರಾದ ಸಂತೋಷ ಸೋನವಾಲ್ಕರ್, ಪ್ರಕಾಶ ಸೋನವಾಲ್ಕರ್ ಉಪಸ್ಥಿತಿರಿದ್ದರು.

error: Content is protected !!