23/12/2024
IMG-20240610-WA0002

ಚಿಕ್ಕೋಡಿ-೧೦ : ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷರಾದ ನಾರಾಯನ ಗೌಡರ ಹುಟ್ಟು ಹಬ್ಬದ ನಿಮಿತ್ಯ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಹಣ್ಣು ಮತ್ತು ಸಿಹಿ ವಿತರನೆ.ಕರ್ನಾಟಕ ರಕ್ಷಣಾ ವೇದಿಕೆ ಬೆಳಗಾವಿ ಜಿಲ್ಲಾ ಸಂಚಾಲಕರಾದ ಸಂಜು ಬಡಿಗೇರ ಮತ್ತು ಚಿಕ್ಕೋಡಿ ತಾಲೂಕಾಧ್ಯಕ್ಷರಾದ ನಾಗೇಶ ಮಾಳಿ ಇವರ ನೇತೃತ್ವದಲ್ಲಿ, ಚಿಕ್ಕೋಡಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿಯ ಒಳರೋಗಿಗಳಿಗೆ, ಕರವೇ ರಾಜ್ಯಾಧ್ಯಕ್ಷರಾದ ನಾರಾಯನ ಗೌಡರ ಹುಟ್ಟು ಹಬ್ಬದ ನಿಮಿತ್ಯ ಹಣ್ಣು ಮತ್ತು ಸಿಹಿ ವಿತರಿಸುವ ಮೂಲಕ ಅವರ ಹುಟ್ಟು ಹಬ್ಬವನ್ನು ಆಚರಿಸಲಾಯಿತು, ಈ ಕಾರ್ಯದಲ್ಲಿ ಆಸ್ಪತ್ರೆಯ ವೈದ್ಯರಾದ ಡಾ. ವರ್ಧಮಾನ ಬದನಿಕಾಯಿ ಇವರು ಪಾಲ್ಗೊಂಡು ಮಾತನಾಡಿ, ಕರವೇ ಕಾರ್ಯಕರ್ತರು ಮಾಡುವ ಈ ಕಾರ್ಯ ಜನ ಮೆಚ್ಚುಗೆಯದಾಗಿದೆ, ಕನ್ನಡ ಪರ ಹೋರಾಟದ ಜೊತೆಗೆ ಇಂತಹ ಜನಪರ ಕಾರ್ಯಗಳನ್ನು ಮಾಡುವುದು ಬಡ ರೋಗಿಗಳಿಗೆ ಸಹಾಯಕರವಾಗಿದೆ ಎಂದು ಹೇಳಿದರು, ಸಮಾಜ ಸೇವಕ ಚಂದ್ರಕಾಂತ ಹುಕ್ಕೇರಿ ಮಾತನಾಡಿ, ಕನ್ನಡ ಭಾಷೆ, ನೆಲ, ಜಲದ ರಕ್ಷಣೆಗಾಗಿ ನಾರಾಯನ ಗೌಡರ ಹೋರಾಟದ ದಾರಿ ಒಂದು ಮಾದರಿಯಾಗಿದೆ, ಕನ್ನಡದ ಉಳುವಿಗಾಗಿ ಅವರ ದಶಕಗಳ ಕೊಡುಗೆ ಅಪಾರವಾಗಿದೆ, ಅವರು ಶತಾಯುಸಿಗಳಾಗಲಿ ಎಂದು ಹಾರೈಸಿದರು, ಚಿಕ್ಕೋಡಿ ಕರವೇ ಅಧ್ಯಕ್ಷ ನಾಗೇಶ ಮಾಳಿ ಮಾತನಾಡಿ, ಈ ಹೊತ್ತು ಕನ್ನಡ ಪರ ಹೋರಾಟಗಾರ, ಸಮರಸಿಂಹ ನಾರಾಯನ ಗೌಡರ ಹುಟ್ಟು ಹಬ್ಬವನ್ನು, ಅಭಿಮಾನಿಗಳು ಕಾರ್ಯಕರ್ತರು ಸಾಮಾಜಿಕ ಕಾರ್ಯಗಳನ್ನು ಮಾಡುವ ಮೂಲಕ ಆಚರಿಸುತ್ತಿದ್ದಾರೆ, ಅವರ ಆಯಸ್ಸು ಬೆಳೆಯಲಿ, ಇನಷ್ಟು ಕನ್ನಡ ಪರ ಕಾರ್ಯಗಳು ಅವರಿಂದ ಆಗಲಿ, ಅವರು ನೂರಾರು ವರ್ಷಗಳ ಕಾಲ ಸುಖ:ವಾಗಿ ಬಾಳಲಿ ಎಂದು ಹಾರೈಸಿದರು, ಈ ಸಂಧರ್ಭದಲ್ಲಿ ಕನ್ನಡಪರ ಕಾರ್ಯಕರ್ತರಾದ ಬಸವರಾಜ ಸಾಜನೆ, ರಫೀಕ್ ಪಠಾಣ, ಖಾನಪ್ಪಾ ಬಾಡಕರ, ಅಮೂಲ ನಾವಿ, ಮಾಳು ಕರೆಣ್ಣವರ, ರಾಜೇಂದ್ರ ಪಾಟೀಲ, ರುದ್ರಯ್ಯಾ ಹಿರೇಮಠ, ರಾಖೇಶ ಮಗದುಮ್, ಗಣೇಶ ಕುಂಬಾರ, ಸಂಜು ಲಟ್ಟೆ, ಚಂದ್ರಶೇಖರ ಕುಂಬಾರ, ಸಚಿನ ದೊಡ್ಡಮನಿ, ದುಂಡಪ್ಪಾ ಬಡಿಗೇರ, ರಮೇಶ ಡಂಗೇರ, ದುಂಡಪ್ಪಾ ಚೌಗಲಾ, ಸಿದ್ಧು ಕಾಂಬಳೆ, ಚನ್ನಯ್ಯಾ ಬಡಿಗೇರ, ವಿಜಯ ಬ್ಯಾಳೆ ಹಾಗೂ ನೂರಾರು ಜನ ಕನ್ನಡದ ಅಭಿಮಾನಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.

error: Content is protected !!