ಬೆಳಗಾವಿ-03: ವರ್ಲ್ಡ್ ಸ್ಕಿಲ್ಸ್ ಕಾಂಪಿಟೇಷನ್ ಎರಡು ವರ್ಷಗಳಿಗೊಮ್ಮೆ ಪ್ರಪಂಚದ ಆಯಕಟ್ಟಿನ ಸ್ಥಳಗಳಲ್ಲಿ ದೇಶಗಳಲ್ಲಿ ಆಯೋಜಿಸಲಾಗುವ ಪ್ರಮುಖ ಜಾಗತಿಕ ಕಾರ್ಯಕ್ರಮವಾಗಿದ್ದು, ೭೫ ಕ್ಕೂ ಹೆಚ್ಚು ದೇಶಗಳು ಭಾಗವಹಿಸುತ್ತವೆ .೨೨ ವರ್ಷದೊಳಗಿನ ೧೦೦೦ ಕ್ಕೂ ಹೆಚ್ಚು ಯುವಜನತೆ ೫೭ಕ್ಕೂ ಹೆಚ್ಚು ಕೌಶಲ್ಯದ ವಿವಿಧ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುವ ಅತೀ ದೊಡ್ಡ ವೃತ್ತಿಪರ ಶಿಕ್ಷಣ & ಕೌಶಲ್ಯ ಶ್ರೇಷ್ಠತೆಯ ಕಾರ್ಯಕ್ರಮವಾಗಿದೆ. ಫ್ರಾನ್ಸ್ನ ಲಿಯೋನ್‌ನಲ್ಲಿ ನಡೆಯಲಿರುವ “ವರ್ಲ್ಡ್ ಸ್ಕಿಲ್ಸ್ ಕಾಂಪಿಟೇಷನ್ ೨೦೨೪ ರ ಪೂರ್ವ ತಯಾರಿಯಾಗಿ ಇಂಡಿಯಾ ಸ್ಕಿಲ್ಸ್ ಕಾಂಪಿಟೇಷನ್ ಕರ್ನಾಟಕ ಸ್ಪರ್ಧೆಯನ್ನು ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮವು ಏರ್ಪಡಿಸಲಾಗಿದೆ. ಈ ಕೌಶಲ್ಯ ಸ್ಪರ್ಧೆಗಳಲ್ಲಿ ಗೆಲುವು ಸಾಧಿಸಿದವರಿಗೆ ನಿರಂತರ ತರಬೇತಿ ಒದಗಿಸಿ, ಪ್ರಾದೇಶಿಕ ಹಾಗೂ ರಾಷ್ಟçಮಟ್ಟದಲ್ಲಿ ಗೆಲುವು ಸಾಧಿಸಲು ಹಾಗೂ ಭಾರತವನ್ನು ಜಾಗತಿಕ ಮಟ್ಟದಲ್ಲಿ ಪ್ರತಿನಿಧಿಸಲು ವೇದಿಕೆ ಕಲ್ಪಿಸಿಕೊಡಲಾಗುವುದು.ಸದರಿ ಸ್ಪರ್ಧೆಯಲ್ಲಿ ಭಾಗವಹಿಸಲು ಯಾವುದೇ ವಿದ್ಯಾರ್ಹತೆಯ ಮಿತಿಗಳಿಲ್ಲ, ಅಭ್ಯರ್ಥಿಗಳ ಕೌಶಲ್ಯವೇ ಪ್ರಮುಖ ಮಾನದಂಡವಾಗಿರಲಿದೆ, ಭಾಗವಹಿಸುವ ಅಭ್ಯರ್ಥಿಗಳು ೧೭ ರಿಂದ ೨೨ ವಯೋಮಾನದಲ್ಲಿರಬೇಕು ಸ್ಪರ್ಧೆಗೆ ನೋಂದಾಯಿಸಲು ಜನವರಿ ೭ ೨೦೨೪ ಅಂತಿಮ ದಿನಾಂಕವಾಗಿದ್ದು ಆಸಕ್ತರು ಹೆಚ್ಚಿನ ಮಾಹಿತಿಗಳಿಗಾಗಿ ಹೆಲ್ಪ್ಲೈನ್ ಸಂಖ್ಯೆ ೧೮೦೦೫೯೯೯೯೧೮ ಗೆ ಸಂರ್ಪಕಿಸಬಹುದಾಗಿದೆ ಎಂದು ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.