ಬೆಳಗಾವಿ-೦೫: ಹುಟ್ಟುಹಬ್ಬದ ನೆಪದಲ್ಲಿ ಸ್ನೇಹಿತನನ್ನೇ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಯರಗಟ್ಟಿ ತಾಲೂಕಿನ ನುಗನಟ್ಟಿ ಗ್ರಾಮದಲ್ಲಿ ನಡೆದಿದೆ.
ಮಂಗಳವಾರ ಈ ಘಟನೆ ನಡೆದಿದ್ದು, ಬುಧವಾರ ಬೆಳಗ್ಗೆ ಕೊಲೆ ನಡೆದಿರುವುದು ಬೆಳಕಿಗೆ ಬಂದಿದೆ. ಮೃತ ಯುವಕನನ್ನು ಬಸವರಾಜ ಗುರುಲಿಂಗಪ್ಪ ಮುದ್ದಣ್ಣನವರ್ (ವಯಸ್ಸು 23) ಎಂದು ಗುರುತಿಸಲಾಗಿದೆ. ವೈಯಕ್ತಿಕ ಜಗಳದಿಂದ ಈ ಸಂಚು ರೂಪಿಸಲಾಗಿದೆ ಎಂದು ವರದಿಯಾಗಿದೆ. ಮಂಗಳವಾರ ಸಂಜೆ ನಾಲ್ವರು ತಮ್ಮ ಸ್ನೇಹಿತನ ಹುಟ್ಟುಹಬ್ಬಕ್ಕೆ ಬಸವರಾಜ್ ನನ್ನು ಆಹ್ವಾನಿಸಿ, ಬಳಿಕ ಆತನೊಂದಿಗೆ ಜಗಳ ಮಾಡಿ ಹೊಡೆದು, ಚಾಕುವಿನಿಂದ ಇರಿದಿದ್ದಾರೆ. ದುರ್ದೈವ ಆತ ಮೃತ ನಾಗಿದ್ದು. ಬಳಿಕ ನಾಲ್ವರೂ ಪರಾರಿಯಾಗಿದ್ದಾರೆ. ಈ ಬಗ್ಗೆ ಮುರಗೋಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.