ಬೆಳಗಾವಿ-೩೧:ಇಂದಿನಿಂದ ಕರ್ನಾಟಕದಲ್ಲಿ ಹೊಸ ಶೈಕ್ಷಣಿಕ(ಶಾಲೆಯ ತರಗತಿಗಳು) ವರ್ಷ ಆರಂಭವಾಗಿದೆ. ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ವಿದ್ಯಾರ್ಥಿಗಳು ಮತ್ತು ಪೋಷಕರ ಮೇಲೆ ಪುಷ್ಪವೃಷ್ಟಿ ಮಾಡುವ ಮೂಲಕ ಸ್ವಾಗತಿಸಲಾಯಿತು. ಉದ್ಘಾಟನಾ ಸಮಾರಂಭದ ನಿಮಿತ್ತ ಬೆಳಗಾವಿ ನಗರದ ಎಲ್ಲ ಶಾಲೆಗಳಲ್ಲಿ ನೂತನ ಶೈಕ್ಷಣಿಕ ವರ್ಷದ ಮೊದಲ ದಿನ ವಿದ್ಯಾರ್ಥಿಗಳನ್ನು ಪುಷ್ಪಾರ್ಚನೆ ಮಾಡಿ ಸ್ವಾಗತಿಸಲಾಯಿತು.
ಕೆಲವು ಶಾಲೆಗಳಲ್ಲಿ ತರಗತಿ ಕೊಠಡಿಗಳನ್ನು ಹೂವಿನ ಕಮಾನು, ಮಾವಿನ ಎಲೆ, ಅಲಂಕರಿಸಲಾಗಿತ್ತು. ಕೆಲವು ಶಾಲೆಗಳಲ್ಲಿ, ಶಾಲೆಯ ಪ್ರವೇಶದ್ವಾರದ ಬಳಿ ಬಲೂನ್ ಕಮಾನು ನಿರ್ಮಿಸಲಾಗಿದೆ. ಶಾಲೆಯ ಪ್ರವೇಶದ್ವಾರದಲ್ಲಿ, ಶಿಕ್ಷಕರು ಮತ್ತು ಶಾಲೆಗೆ ಪ್ರವೇಶಿಸಿದ ವಿದ್ಯಾರ್ಥಿಗಳು ಮತ್ತು ಪೋಷಕರ ಮೇಲೆ ಹೂವುಗಳನ್ನು ಸುರಿಸಿ ವಿದ್ಯಾರ್ಥಿಗಳನ್ನು ಗುಲಾಬಿಯೊಂದಿಗೆ ಸ್ವಾಗತಿಸಿದರು. ಕೆಲವು ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ಸಿಹಿ ವಿತರಿಸಲಾಯಿತು.ಸರ್ಕಾರಿ ಸರ್ದಾರ್ಸ್ ಪ್ರೌಢಶಾಲೆಯಲ್ಲಿ ಶಾಲೆಗೆ ಆಗಮಿಸಿದ ವಿದ್ಯಾರ್ಥಿಗಳನ್ನು ಪುಷ್ಪಗುಚ್ಛ ನೀಡಿ,ಹೂ ಮಳೆಗರೆದು ಸ್ವಾಗತಿಸಲಾಯಿತು. ಈ ಸಂದರ್ಭದಲ್ಲಿ ಶಾಲೆಯ ಉಪಪ್ರಾಂಶುಪಾಲರು ಮತ್ತು ಎಲ್ಲಾ ಶಿಕ್ಷಕರು ಉಪಸ್ಥಿತರಿದ್ದರು. ನಂತರ ನಡೆದ ಕಾರ್ಯಕ್ರಮದಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ಪಠ್ಯಪುಸ್ತಕ ವಿತರಿಸಲಾಯಿತು. ಈ ಸಂದರ್ಭದಲ್ಲಿ ಉಪನಿರ್ದೇಶಕರ ಕಛೇರಿ ಯ ಶಿಕ್ಷಣಾಧಿಕಾರಿಗಳಾದ ಎನ್.ಆರ್.ಪಾಟೀಲ. ಖಡೇ ಬಜಾರ್ ಪೊಲೀಸ್ ಠಾಣೆಯ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಪ್ರೇಮಲತಾ ಚೌರ್ ಉಪಸ್ಥಿತರಿದ್ದರು. ಶಿವಶಂಕರ ಹಾದಿಮನಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಮಂಜುಷಾ ಅಡಿಕೆ, ಎಂ.ಎ.ಡಾಂಗೆ, ಸಂಪದ ಕಲಕೇರಿ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ರವಿ ಹಲಕರ್ಣಿ ನಿರ್ವಹಿಸಿದರು. ಮಧ್ಯಾಹ್ನ ವಿದ್ಯಾರ್ಥಿಗಳಿಗೆ ಸಿಹಿ ಊಟವನ್ನು ನೀಡಲಾಯಿತು