23/12/2024
IMG-20240527-WA0036

ಬೆಳಗಾವಿ-೨೭:ಸರ್ಕಾರದಿಂದ ಸಬ್ಸಿಡಿ ದರದಲ್ಲಿ ರೈತರಿಗೆ ನೀಡಲಾಗುತ್ತಿರುವ ಸೋಯಾಭಿನ್, ಹೆಸರು, ಗೋವಿನಜೋಳ, ಉದ್ದು ಭೀಜಗಳನ್ನು ಹತ್ತಿರದ ಸಹಕಾರಿ ಸಂಘಗಳಲ್ಲಿ ಪಡೆದುಕೊಂಡು ಅದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕೃಷಿ ಅಧಿಕಾರಿ ಆರ್ ಆಯ. ಕುಂಬಾರ ಹೇಳಿದರು.

ಅವರು ಸೋಮವಾರದಂದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿ. ನೇಸರಗಿಯ ಗೋಡಾವಣದಲ್ಲಿ ರೈತರಿಗೆ ಭೀಜ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿ ಮಾತನಾಡಿ ರೈತರಿಗೆ ಸಾಕಾಗುವಷ್ಟು ಭೀಜ ದಾಷ್ಟಾನು ಇದ್ದು ಗಡಿಬಿಡಿ ಮಾಡದೇ ಸರಳವಾಗಿ ಭೀಜ ಪಡೆಯಬೇಕು.30 ಕೆ ಜಿ ಸೋಯಾಭಿನ್ ಪ್ಯಾಕೇಟ ಗೆ ಸಾಮಾನ್ಯರಿಗೆ ರೂ 1431/- ಹಾಗೂ ಎಸ್ ಸಿ / ಎಸ್ ಟಿ ಅವರಿಗೆ ರೂ 1065/- ದರದಲ್ಲಿ ವಿತರಿಸಲಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಹಿರಿಯರಾದ ಕೆಂಚಪ್ಪ ಕಳ್ಳಿಬಡ್ಡಿ,ಯುವ ಮುಖಂಡ ಸಚಿನ್ ಪಾಟೀಲ,ಅಡಿವಪ್ಪ ಮಾಳಣ್ಣವರ, ಎ ಪಿ ಎಂ ಸಿ ಮಾಜಿ ಅಧ್ಯಕ್ಷರಾದ ಬರಮಣ್ಣ ಸತ್ತೇನ್ನವರ,ಎಂ ಟಿ. ಪಾಟೀಲ, ಶಂಕರ್ ತಿಗಡಿ, ನಿಂಗಪ್ಪ ತಳವಾರ,ಶೇಖರ ಕಾರಜೋಳ,ಮಲ್ಲಿಕಾರ್ಜುನ ಕಲ್ಲೋಳಿ,ಸಂಘದ ಆಡಳಿತ ಮಂಡಳಿ ಸದಸ್ಯರಾದ ವೀರಪ್ಪಣ್ಣ ಚೋಭಾರಿ, ಎಸ್ ಎಂ. ಪಾಟೀಲ, ಮಲ್ಲೇಶಪ್ಪ ಮಾಳಣ್ಣವರ,ಪಕ್ಕೀರಪ್ಪ ಸೋಮಣ್ಣವರ,ಸಿದ್ದಪ್ಪ ತುಳಜನ್ನವರ, ಪ್ರಕಾಶ್ ತೋಟಗಿ, ಸುರೇಶ ಖಂಡ್ರಿ,ಶ್ರೀಮತಿ ಸಾವಿತ್ರಿ ಕೊಲಕಾರ, ಗಂಗಪ್ಪ ಕಾಡಣ್ಣವರ, ಕಾರ್ಯನಿರ್ವಾಹಕ ವಿಶ್ವನಾಥ ಕೂಲಿನವರ, ಶ್ರೀಕಾಂತ ತರಗಾರ ಸೇರಿದಂತೆ ನೇಸರಗಿ ಹಾಗೂ ಸುತ್ತಮುತ್ತಲಿನ ರೈತರು, ರೈತ ಮುಖಂಡರು, ಕೃಷಿ ಇಲಾಖೆ ಸಿಬ್ಬಂದಿ, ಪಿಕೆಪಿಸ್ ಸಿಬ್ಬಂದಿ ಉಪಸ್ಥಿತಿರಿದ್ದರು.

error: Content is protected !!