ಬೆಳಗಾವಿ-೨೨ : ವಿಧ್ಯಾರ್ಥಿಗಳನ್ನು ತಾಂತ್ರಿಕವಾಗಿ ಔದ್ಯೋಗಿಕ ಜಗತ್ತಿಗೆ ಸಜ್ಜುಗೊಳಿಸುತ್ತಿರುವ ಬೆಳಗಾವಿಯ ಉದ್ಯಮಬಾಗದಲ್ಲಿರುವ ಸರಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ(ಜಿಟಿಟಿಸಿ)ಯಲ್ಲಿ ಪ್ರಥಮ ಬಾರಿಗೆ ಡಿಪ್ಲೋಮಾ ಇನ್ ಆರ್ಟಿಫಿಸಿಯಲ್ ಇಂಟಿಲಿಜೆನ್ಸಿ ಆಂಡ ಮಷಿನ್ ಲರ್ನಿಂಗ್ ಕೋರ್ಸಗಳನ್ನು ಪ್ರಸಕ್ತ ಸಾಲಿನಿಂದ ಪ್ರಾರಂಭಿಸಲಾಗುತ್ತಿದೆ ಎಂದು ಬೆಳಗಾವಿ ಜಿಟಿಟಿಸಿಯ ಪ್ರಾಂಶುಪಾಲರಾದ ಬಿ,ಜಿ. ಮೋಗೇರ ಅವರು ತಿಳಿಸಿದರು.
ನಗರದ ಕರೆಯಲಾದ ಬುಧವಾರ ದಂದು ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ಇಂದಿನ ದಿನಮಾನಗಳಲ್ಲಿ ತಂತ್ರಜ್ಞಾನಕ್ಕೆ ಬಹು ಬೇಡಿಕೆ ಇದ್ದು ಇದಕ್ಕೆ ಅನುಗುಣವಾಗಿ ಇಂದಿನ ಯುವಪೀಳಿಗೆ ತಂತ್ರಜ್ಞಾನವನ್ನು ಹೊಂದಬೇಕು ಎನ್ನುವ ಉದ್ದೇಶದಿಂದ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದ ಕೈಗಾರಿಕಾ ವಸಾಹತು ಉದ್ಯಮ ಭಾಗದಲ್ಲಿ ವಿವಿಧ ಡಿಪ್ಲೋಮಾ ಕೋಸ್‌ಗಳಿಗೆ ಪ್ರವೇಶ ಆರಂಬಿಸಲಾಗಿರುತ್ತದೆ ಎಂದರು.ಉತ್ತರ ಕರ್ನಾಟಕದಲ್ಲಿ ಮೊದಲ ಬಾರಿಗೆ ಡಿಪ್ಲೋಮಾ ಇನ್ ಆರ್ಟಿಫೀಷಿಯಲ್ ಇಂಟಲಿಜೆನ್ಸಿ ಆ್ಯಂಡ್ ಮಷಿನ್ ಲರ್ನಿಂಗ್ ಕೋರ್ಸನ್ನು ಪ್ರಾರಂಭಿಸಲಾಗಿದ್ದು ಇದರ ಜೊತೆಗೆ ಡಿಪ್ಲೋಮಾ ಇನ್ ಆಟೋಮೆಷನ್ ಆ್ಯಂಡ್ ರೊಬೋಟಿಕ್ಸ್ ಡಿಪ್ಲೋಮಾ ಇನ್ ಟೂನ್ ಆ್ಯಂಡ್ ಡೈ ಮೇಂಕಿAಗ್, ಡಿಪ್ಲೋಮಾ ಇನ್ ಪ್ರಿಸಿಷನ್ ಆ್ಯಂಡ್ ಮ್ಯಾನ್ಯುಫ್ಯಾಕ್ಷರಿಂಗ್ ಪೂರ್ಣಾವಧಿ ತರಬೇತಿಯ ಸದುಪಯೋಗ ಪಡೆದುಕೊಳ್ಳಲು ವಿಧ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಲಾಗಿದೆ.ಪ್ರಸಕ್ತ ಸಾಲಿನ ಡಿಪ್ಲೋಮಾ ತರಬೇತಿಗಳಿಗೆ ಆಸಕ್ತ ವಿಧ್ಯಾರ್ಥಿಗಳು ಅರ್ಜಿಗಳನ್ನು ಆನಲೈನ್ ಮೂಲಕ ಇದೇ ಮೇ ೨೭ ರೊಳಗಾಗಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಬೆಳಗಾವಿ ಜಿಟಿಟಿಸಿ ಪ್ರಾಂಶುಪಾಲರು, ಮೊಬೈಲ್ ಸಂಖ್ಯೆ ೯೧೪೧೬೩೦೩೦೯ ಅಥವಾ ೦೮೩೧-೨೯೫೦೬೧೧ಗೆ ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದರು.
ಪತ್ರಿಕಾ ಗೋಷ್ಠಿಯಲ್ಲಿ ಜಿಟಿಟಿಸಿಯ ವಿವಿಧ ವಿಭಾಗಗಳ ಮುಖ್ಯಸ್ಥರುಗಳಾದ ರಮಾಕಾಂತ ಮಠ, ಅರವಿಂದ ಖಡೇದ ಪಾಲ್ಗೊಂಡಿದ್ದರು.