23/12/2024
IMG-20240521-WA0002

ಬೆಳಗಾವಿ-೨೧:ಜಾಗತಿಕ ಲಿಂಗಾಯತ ಮಹಾಸಭಾ (ರಿ) ಜಿಲ್ಲಾ ಘಟಕ, ಬೆಳಗಾವಿ ಇವರ ವತಿಯಿಂದ ವಿಶ್ವ ಗುರು ಬಸವಣ್ಣ ಜಯಂತಿಯನ್ನು ಆಚರಿಸಲಾಯಿತು. ಹಾಗೂ ಬುದ್ಧ, ಬಸವ, ಅಂಬೇಡ್ಕರ ಪ್ರಚಾರಕರಾದ ಶರಣಶ್ರೀ ಆಕಾಶ ರುದ್ರಪ್ಪಾ ಹಲಗೇಕರ ಅವರಿಗೆ
ಪೂಜ್ಯಶ್ರೀ ಜಗದ್ಗುರು ಡಾ.ತೋಂಟದ ಸಿದ್ಧರಾಮ ಮಹಾಸ್ವಾಮಿಗಳು,
ಪೂಜ್ಯಶ್ರೀ ಶಿವಾನಂದ ಮಹಾಸ್ವಾಮಿಗಳು,
ಪೂಜ್ಯಶ್ರೀ ಮುರುಘೇಂದ್ರ ಮಹಾಸ್ವಾಮಿಗಳು, ಹಾಗೂ
ಶರಣಶ್ರೀ ಬಸವರಾಜ ರೊಟ್ಟಿ,
ಶರಣಶ್ರೀ ಡಾ. ಬಸು ಬೇವಿನಕಟ್ಟಿ, ಅವರಿಂದ ಬಸವಣ್ಣ ಭಾವಚಿತ್ರವನ್ನು ನೀಡಿ ಗೌರವಿಸಲಾಯಿತು,ಜಗಜ್ಯೋತಿ ಶ್ರೀ ಬಸವಣ್ಣನವರು ತಮ್ಮ ಜೀವಿತಾವಧಿಯಲ್ಲಿ ದಿನ ದಲಿತರ ಸೇವೆ, ಅಸ್ಪೃಶ್ಯತೆಯ ವಿರುದ್ಧ ಹೋರಾಟ, ಸ್ತ್ರಿ ಸಮಾನತೆ, ಧಾರ್ಮಿಕ ಅಸಹಿಷ್ಣುತೆಯ ವಿರುದ್ಧ ಹೋರಾಟ ಮಾಡುತ್ತ ಬಂದವರು. ಅದೇ ರೀತಿ ಬಸವಣ್ಣನವರ ಹಾದಿಯಲ್ಲಿ ಮತ್ತು ಅವರ ವೈಚಾರಿಕತೆಯನ್ನು ತಮ್ಮಲ್ಲಿ ಅಳವಡಿಸಿಕೊಂಡು ಶ್ರೀ ಆಕಾಶ ಹಲಗೇಕರ ಅವರು ಸಮಾಜದಲ್ಲಿ ಎಲ್ಲರೂ ಸಮಾನರು ಅನ್ನುವ ಸಂದೇಶವನ್ನು ಸಾರುತ್ತ ತಮ್ಮ ಕೈಲಾದ ಮಟ್ಟದಲ್ಲಿ ಸಮಾಜ ಸೇವೆಯನ್ನು ಮಾಡುತ್ತಿದ್ದಾರೆ. ಶಿಕ್ಷಣಕ್ಕೆ ಹೆಚ್ಚಿನ ಮಹತ್ವವನ್ನು ಕೊಟ್ಟಿರುವ ಆಕಾಶ್ ಹಲಗೇಕರ್ ಅವರು ಓದುವ ವಿದ್ಯಾರ್ಥಿಗಳಿಗೆ ಪುಸ್ತಕ, ಶಾಲಾ ಶುಲ್ಕ, ಲೇಖನ ಸಾಮಗ್ರಿಗಳನ್ನು, ನೀಡಿರುತ್ತಾರೆ ಮತ್ತು ಈ ಸೇವೆ ನಿರಂತರ, ಬಸವಣ್ಣನವರ್ ಆದರ್ಶಗಳನ್ನು ಮೈಗೂಡಿಸಿಕೊಂಡಿರುವ ಇವರು ಮತ್ತು ಇವರ ಸಾಮಾಜಿಕ ಕಳಕಳಿಯ ಸೇವೆ ಇದೆ ರೀತಿ ಮುಂದುವರಿಯಲಿ ಅಂತ ಆಶಿಸೋಣ.

error: Content is protected !!