ಬೈಲಹೊಂಗಲ-೨೦:ಗ್ರಾಮಗಳಲ್ಲಿ ಪ್ರತಿವರ್ಷದಂತೆ ನಡೆಯುವ ಜಾತ್ರೆಗಳಿಂದ ಆದ್ಯಾತ್ಮಿಕ, ಮಾನಸಿಕ ನೆಮ್ಮದಿ ಮತ್ತು ಎಲ್ಲ ಸಮುಧಾಯಗಳು ಕೂಡಿಕೊಂಡು ಆಚರಿಸುವ ಜಾತ್ರೆಗಳಿಂದ ಭಾವೈಕ್ಯತೆ ಬೆಳೆಯುತ್ತವೆ ಎಂದು ಚನ್ನಮ್ಮನ ಕಿತ್ತೂರ ಶಾಸಕರಾದ ಬಾಬಾಸಾಹೇಬ ಪಾಟೀಲ ಹೇಳಿದರು.
ಅವರು ರವಿವಾರ ರಾತ್ರಿ ಸಮೀಪದ ಮಾಸ್ತಮರಡಿ ಗ್ರಾಮದ ಶ್ರೀ ಗ್ರಾಮದೇವಿಯರ ಜಾತ್ರೆ ಪ್ರಯುಕ್ತ ಜಾತ್ರೆಯಲ್ಲಿ ಪಾಲ್ಗೊಂಡು ಗ್ರಾಮಸ್ಥರಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದರು .
ಈ ಸಂದರ್ಭದಲ್ಲಿ ನೇಸರಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಿಂಗಪ್ಪಾ ಅರಿಕೇರಿ, ಕಾಂಗ್ರೆಸ್ ಮುಖಂಡ ಸಚಿನ ಪಾಟೀಲ, ಮಂಜುನಾಥ ಹುಲಮನಿ,ಸೇರಿದಂತೆ ಮಾಸ್ತಮರಡಿ ಗ್ರಾಮದ ಹಿರಿಯರು, ಗ್ರಾಮಸ್ಥರು ಭಾಗವಹಿಸಿದ್ದರು.