23/12/2024
IMG-20240519-WA0001

ಬೆಳಗಾವಿ-೧೯ : ಹುದಲಿ ಹಾಗೂ ಸಾಂಬ್ರಾ ಗ್ರಾಮ ದೇವತೆ ಶ್ರೀ ಮಹಾಲಕ್ಷ್ಮೀ ದೇವಿ ದೇವಸ್ಥಾನದ ಜಾತ್ರಾ ಮಹೋತ್ಸವದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಲೋಕೋಪಯೋಗಿ ಸಚಿವರಾದ ಸತೀಶ ಜಾರಕಿಹೊಳಿ ಅವರು ಭಾಗವಹಿಸಿದ್ದರು.

ಯಮಕನಮರಡಿ ವಿಧಾನಸಭಾ ಕ್ಷೇತ್ರದ ಹುದಲಿ ಗ್ರಾಮದ ಗ್ರಾಮ ದೇವತೆಯಾದ ಶ್ರೀ ಮಹಾಲಕ್ಷ್ಮೀ ದೇವಿ ಪ್ರತಿ 11 ವರ್ಷಕೋಮ್ಮೆ 9 ದಿನಗಳ ಕಾಲ ಜರಗುವ ಜಾತ್ರಾ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ದೇವಿಯ ಆರ್ಶೀವಾದ ಪಡೆದರು.

ಜಾತ್ರಾ ಮಹೋತ್ಸವದ ಕಮೀಟಿ ಹಾಗೂ ಊರಿನ ಮುಖಂಡರಿಂದ ಸಚಿವರಾದ ಸತೀಶ ಜಾರಕಿಹೊಳಿ ಅವರಿಗೆ ಸತ್ಕಾರ ಮಾಡಿದರು.
ಈ ಸಂದರ್ಭದಲ್ಲಿ ಉಸ್ತುವಾರಿ ಸಚಿವರ ಆಪ್ತ ಸಹಾಯಕರಾದ ಅರವಿಂದ್ ಕಾರ್ಚಿ ಹಾಗೂ ಹುದಲಿ, ಸಾಂಬ್ರಾ ಗ್ರಾಮದವರು ಊರಿನ ಮುಖಂಡರು ಹಾಜರಿದ್ದರು.

error: Content is protected !!