23/12/2024
IMG-20240519-WA0000

ಬೆಳಗಾವಿ-೧೯:ಶನಿವಾರ ಬಿಜೆಪಿ ಮಹಾನಗರ ಜಿಲ್ಲೆ ಬೆಳಗಾವಿ ಮಹಿಳಾ ಮೋರ್ಚಾ ವತಿಯಿಂದ ವತಿಯಿಂದ ಪ್ರತಿಭಟನೆ  ನಡೆಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

IMG 20240518 124907 -

ಈ ಸಂದರ್ಭದಲ್ಲಿ ಕರ್ನಾಟಕದಲ್ಲಿ ಮಹಿಳೆಯರಿಗೆ ಶೂನ್ಯ ಸುರಕ್ಷತೆ ಗ್ಯಾರಂಟಿ ಕೊಟ್ಟ ಕಾಂಗ್ರೆಸ್ ಸರಕಾರ, ಕರ್ನಾಟಕದ ಕಾಂಗ್ರೆಸ್ ಸರಕಾರವು ಮಹಿಳೆಯರಿಗೆ ಶೂನ್ಯ ಸುರಕ್ಷತೆಯ ಗ್ಯಾರಂಟಿ ಎಂಬ ಹೊಸ ಯೋಜನೆ ಜಾರಿಗೊಳಿಸಿದೆ. ಇದರಿಂದ ಕಾನೂನು ಸುವ್ಯವಸ್ಥೆ, ಹದಗೆಟ್ಟು ಮಹಿಳೆಯರು ನೆಮ್ಮದಿಯಿಂದ ಬದುಕಲು ದುಸ್ತರವಾಗಿದೆ. ಮೊನ್ನೆ ನೇಹಾ, ನಿನ್ನೆ ಅಂಜಲಿ ಇಂದು ಇನ್ಯಾರೋ ಎನ್ನುವಂತಾಗಿದೆ. ಪೊಲೀಸರ ಭಯವಿಲ್ಲದ ದಿನವೂ ಕೊಲೆ, ಸುಲಿಗೆ ಅತ್ಯಾಚಾರ ಮುಂತಾದವು ನಡೆಯುತ್ತಿದೆ. ಕೆಲಸಕ್ಕೆ, ಕಾಲೇಜಿಗೆ ಹೋದಂತಹ ಹೆಣ್ಣು ಮಕ್ಕಳು ಸುರಕ್ಷಿತವಾಗಿ ಮನೆಗೆ ಬರುತ್ತಾರೆಂಬ ನಂಬಿಕೆ ಇಲ್ಲದೆ ಪೋಷಕರು ಭಯದಿಂದ ಬದಕುವಂತಾಗಿದೆ.

1. 2023 ರ ಡಿಸೆಂಬರ್ 23 ರಂದು ಬೆಳಗಾವಿಯ ವಂಟಮೂರಿಯಲ್ಲಿ ಮಹಿಳೆಯನ್ನು ವಿವಸ್ತ್ರಗೊಳಿಸಿದ ಪ್ರಕರಣ, ರಾಣೆಬೆನ್ನೂರಿನ ಅರೆಮಲ್ಲಾಪುರದಲ್ಲಿ ಯುವತಿ ಜೊತೆ ಮಗ ಓಡಿ ಹೋಗಿದ್ದಾನೆಂದು 50 ವರ್ಷದ ಮಹಿಳೆಯನ್ನು ವಿದ್ಯುತ್‌ ಕಂಬಕ್ಕೆ ಕಟ್ಟಿ ವಿವಸ್ತ್ರಗೊಳಿಸಿ ತಿಳಿಸಿದ್ದು.

2. ಹಾವೇರಿಯಲ್ಲಿ ಎಳು ಮಂದಿ ಮುಸ್ಲಿಂ ಪುರುಷರಿಂದ ಸಾಮೀಹಿಕ ಅತ್ಯಾಚಾರ.

3. ಎಪ್ರಿಲ್ 18 ರಂದು ಹುಬ್ಬಳ್ಳಿಯ ಕಾಲೇಜು ಕ್ಯಾಂಪನನಲ್ಲಿ ಕಾಂಗ್ರೆಸ ಕಾಪೆರೇಟರ್ ಮಗಳು ನೀಹಾಳನ್ನು 11 ಬಾರಿ ಚಾಕುವಿನಿಂದ ಚುಚ್ಚಿ ಚುಚ್ಚಿ ಕೊಲೆ ಮಾಡಿರುವುದು.

4. ಮೇ 9 ರಂದು ಕೊಡಗಿನ ಸೊರ್ಲಬ್ಬಿ ಗ್ರಾಮದಲ್ಲಿ ಎಸ್.ಎಸ್.ಎಲ್.ಸಿ ವಿದ್ಯಾರ್ಥಿನಿ ಯು.ಎಸ್.ಮೀನಳ ರುಂಡವನ್ನು ಕತ್ತರಿಸಿದ ಪ್ರಕಾಶ ಎಂಬ ದುರುಳ.

5. ಮೇ 15 ರಂದು ಹುಬ್ಬಳ್ಳಿಯಲ್ಲಿ 21 ವರ್ಷದ ಅಂಜಲಿ ಅಂಬಿಗೇರ ಎಂಬ ಯುವತಿಯನ್ನು ವಿಶ್ವ ಎಂಬುವವನು ಚಾಕುವಿನಿಂದ ಹಿರಿದು ಕೊಲೆ ಮಾಡಿದ್ದಾನೆ. ಹೀಗೆ ಕರ್ನಾಟಕದ ಕಾಂಗ್ರೆಸ್ ಸಕರಾರದ ಕೊಲೆಗಡುಕರ ಸರ್ಕಾರ ಎನ್ನುವಂತಾಗಿದೆ.

error: Content is protected !!