23/12/2024
IMG_20240516_151600

ಕೊಲ್ಹಾಪುರ: ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ರವರು ಅಂಬಾಬಾಯಿ ದೇವಸ್ಥಾನಕ್ಕೆ ಭೇಟಿ ನೀಡಿದರು. 15 ನಿಮಿಷಗಳ ಕಾಲ ಅಂಬಾಬಾಯಿ ಪೂಜೆ ಮಾಡಿದರು. ಈ ಸಂದರ್ಭದಲ್ಲಿ ಪಶ್ಚಿಮ ಮಹಾರಾಷ್ಟ್ರ ದೇವಸ್ತಾನ ಸಮಿತಿ ವತಿಯಿಂದ ನಾಯ್ಡು ದಂಪತಿಯನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ಮೋದಿಯವರು ತುಂಬಾ ಒಳ್ಳೆಯವರು. ಸದ್ಯ ದೇಶದಲ್ಲಿ ಮೋದಿ ಹವಾ ಇದೆ ಎಂದು ಪ್ರಸ್ತಾಪಿಸಿದರು. ಆದರೆ, ಆಂಧ್ರಪ್ರದೇಶದ ರಾಜಕೀಯದ ಬಗ್ಗೆ ಮಾತನಾಡಲು ನಿರಾಕರಿಸಿದರು. ನರೇಂದ್ರ ಮೋದಿ ನೇತೃತ್ವದಲ್ಲಿ ಎನ್‌ಡಿಎ 400+ ಸ್ಥಾನಗಳನ್ನು ಗೆಲ್ಲಲಿದೆ ಎಂದು ನಾಯ್ಡು ಹೇಳಿದರು.

ಆದರೆ, ಆಂಧ್ರಪ್ರದೇಶದ ರಾಜಕೀಯ ಬೆಳವಣಿಗೆಗಳ ಬಗ್ಗೆ ಮಾತನಾಡಲು ನಿರಾಕರಿಸಿದರು

error: Content is protected !!