ಬೆಳಗಾವಿ-೧೧:”ಬೆಳಗಾವಿ ಮಾವು ಮೇಳ” ದ ಸಂತೆಯಲ್ಲಿ ಶನಿವಾರ ವಿವಿಧ ತಳಿಯ ಮಾವಿನ ಹಣ್ಣುಗಳು ಅಧಿಕ ಪ್ರಮಾಣದಲ್ಲಿ ಮಾರಾಟಗೊಂಡವು.
ಶುಕ್ರವಾರದಿಂದ ಕ್ಲಬ್ ರಸ್ತೆಯ ಹುಲ್ಮ್ ಪಾರ್ಕ್ (ಈಫಾ ಹೋಟೆಲ್ ಎದುರು) ಪ್ರಾರಂಭವಾಗಿರುವ ಮೂರು ದಿನಗಳ ಮೇಳದಲ್ಲಿ ಶನಿವಾರ ವ್ಯವಹಾರ ಜೋರಾಗಿತ್ತು. ಶುಕ್ರವಾರಕ್ಕಿಂದ ಶನಿವಾರ ಹೆಚ್ಚು ಸ್ಟಾಲ್ ಮತ್ತು ಹೆಚ್ಚು ತಳಿಗಳು ಮಾರಾಟಗೊಂಡವು.
ಮಹಾರಾಷ್ಟ್ರದಿಂದಲೂ ಮಾವು ಬೆಳೆಗಾರರು ಮೇಳದಲ್ಲಿ ಪಾಲ್ಗೊಂಡಿದ್ದಾರೆ.
ಪೇಟೆಯಲ್ಲಿ ದೊರೆಯುವ ಮಾವಿನ ಹಣ್ಣಿಗಿಂತ ಮೇಳದಲ್ಲಿ ಹಣ್ಣಿನ ಧರ ಜಾಸ್ತಿ ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ.