ಬೆಳಗಾವಿ-01: ಭೀಮಾ ಕೋರೆಗಾಂವ್ ಶೌರ್ಯ ದಿನದ ನಿಮಿತ್ತ ನಗರದಲ್ಲಿ ಬೈಕ್ ರ್ಯಾಲಿ ಸೋಮವಾರ ಹಮ್ಮಿಕೊಳ್ಳಲಾಗಿತ್ತು.ವಿವಿಧ ದಲಿತ ಸಂಘಟನೆಗಳ ವತಿಯಿಂದ ಈ ಬೈಕ್ ರ್ಯಾಲಿ ಹಮ್ಮಿಕೊಳ್ಳಲಾಗಿತ್ತು. ಆರಂಭದಲ್ಲಿ ಧರ್ಮವೀರ ಛತ್ರಪತಿ ಸಂಭಾಜಿ ಮಹಾರಾಜ ಚೌಕದಲ್ಲಿರುವ ಛತ್ರಪತಿ ಸಂಭಾಜಿ ಮಹಾರಾಜರ ಮೂರ್ತಿಗೆ ಪುಷ್ಪ ನಮನ ಸಲ್ಲಿಸುವ ಮೂಲಕ ರ್ಯಾಲಿ ಆರಂಭವಾಗಿ,ಅಂಬೇಡ್ಕರ್ ಉದ್ಯಾನಕ್ಕೆ ರ್ಯಾಲಿ ಮುಕ್ತಾಯ ಗೊಂಡು ಅಂಬೇಡ್ಕರ್ ಉದ್ಯಾನಕ್ಕೆ ಸಭೆ ನಡೆಯಿತು.
ದಲಿತ ಮುಖಂಡ ಮಲ್ಲೇಶ ಚೌಗುಲೆ ಮಾತನಾಡಿ, ಛತ್ರಪತಿ ಸಂಭಾಜಿ ಮಹಾರಾಜರಿಗೆ ನಮನ ಸಲ್ಲಿಸುವ ಮೂಲಕ ಹೊಸ ವರ್ಷವನ್ನು ಆರಂಭಿಸುತ್ತಿದ್ದೇವೆ. ಈ ದಿನ ನಮ್ಮ ದೇಶದ ಐತಿಹಾಸಿಕ ಭೀಮಾ ಕೋರೆಗಾಂವ್ ಯುದ್ಧ ನಡೆಯಿತು.
ಈ ಯುದ್ಧಕ್ಕೆ ಇಂದಿಗೆ 206 ವರ್ಷಗಳು ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಭೀಮಾ ಕೋರೆಗಾಂವ್‌ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ದೇಶ, ಜಗತ್ತಿನ ಲಕ್ಷಾಂತರ ಭೀಮಸೇನ ಸೈನಿಕರು ಪಾಲ್ಗೊಂಡಿದ್ದರು. ಡಿ.31ರಂದು ಪೇಶ್ವೆ ವಿರುದ್ಧ ನಡೆದ ಭೀಮಾ ಕೋರೆಗಾಂವ್ ಹೋರಾಟದ ಸ್ಮರಣಾರ್ಥ ಇಂದು ನಗರದಲ್ಲಿ ವಿವಿಧ ದಲಿತ ಸಂಘಟನೆಗಳ ವತಿಯಿಂದ ಬೈಕ್ ರ್ಯಾಲಿ ಹಮ್ಮಿಕೊಂಡಿದ್ದೇವೆ.