ಬೆಳಗಾವಿ-೧೦ : ಶಿಂದೊಳ್ಳೀಯ ದೇವೇಂದ್ರ ಜಿನಗೌಡ ಶಾಲೆಯ ವಿದ್ಯಾರ್ಥಿಗಳು ೨೦೨೩-೨೪ ನೇ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಉತ್ತಮ ಸಾಧನೆಯನ್ನು ತೋರಿದ್ದಾರೆ.ಶಾಲೆಯ ಆದಿತಿ ರಮೇಶ ಹೆಗಡೆ ಶೇ. ೯೭.೯೨ ಅಂಕ ಪಡೆದು ಶಾಲೆಗೆ ಪ್ರಥಮ ಸ್ಥಾಣ, ಮಾನವಿ ದಶರಥ ಪಾಲಕರ ಶೇ.೯೬.೧೬ ಅಂಕ ಪಡೆದು ದ್ವೀತಿಯ, ಹಾಗೂ ಇಂಪನಾ ದಿಲೀಪಕುಮಾರ ಕಾಳೆ ಶೇ.೯೫.೩೪ ಅಂಕ ಪಡೆದು ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.
ಅದರಂತೆ ಒಟ್ಟು ೧೧ ವಿದ್ಯಾರ್ಥಿಗಳು ಶೇ. ೯೦ ರಷ್ಟು ಅಂಕಗಳು ಹಾಗೂ ೧೧ ವಿದ್ಯಾರ್ಥಿಗಳು ಶೆ.೮೫ ರಷ್ಟು ಅಂಕಗಳನ್ನು ಗಳಿಸಿದ್ದಾರೆ. ೫೦ ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿ ಶಾಲೆಗೆ ಕಿರ್ತೀ ತಂದಿದ್ದಾರೆ.