ಬೆಳಗಾವಿ-೦೮ – ನಗರದ ಹಾಸ್ಯಕೂಟ ಮತ್ತು ಕನ್ನಡ ಸಾಹಿತ್ಯ ಭವನ ವಿಶ್ವಸ್ತ ಮಂಡಳಿ ಸಂಯುಕ್ತ ಆಶ್ರಯದಲ್ಲಿ ಇದೇ ದಿ. ೧೧ ಶನಿವಾರದಂದು ಸಾಯಂಕಾಲ ೪-೩೦ ಕ್ಕೆ ಚೆನ್ನಮ್ಮ ವೃತ್ತದ ಬಳಿಯಿರುವ ಕನ್ನಡ ಸಾಹಿತ್ಯ ಭವನದಲ್ಲಿ ‘ವೃತ್ತಿ ಪ್ರವೃತ್ತಿಗಳ ಹಾಸ್ಯ’ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ.
ಅಧ್ಯಕ್ಷತೆಯನ್ನು ಹಿರಿಯ ಲೇಖಕ ಬಿ.ಎಸ್ . ಗವಿಮಠಯವರು ವಹಿಸಲಿದ್ದಾರೆ. ಪ್ರಾಯೋಜಕತ್ವವನ್ನು ನಿವೃತ್ತ ಶಿಕ್ಷಕರಾದ ಈರಣ್ಣ ಬಸೆಟ್ಟೆಪ್ಪ ಚಿನಗುಡಿಯವರು ವಹಿಸಿಕೊಂಡಿದ್ದಾರೆ. ರಾಮಚಂದ್ರ ಕಟ್ಟಿ ಉಪಸ್ಥಿತರಿರುತ್ತಾರೆ. ಗುಂಡೇನಟ್ಟಿ ಮಧುಕರ ಪ್ರಾಸ್ತಾವಿಕ ನುಡಿಗಳನ್ನಾಡಲಿದ್ದಾರೆ.
ಶ್ರೀರಂಗ ಜೋಶಿ (ಸಂಗೀತ), ಉಮೇಶ ಬಡಿಗೇರ (ನಾಟಕ ಮತ್ತು ಚಿತ್ರರಂಗ), ಡಾ. ಜಿ. ಬಿ. ಪಡಗುರಿ (ವೈದ್ಯಕೀಯ), ಶ್ರೀಮತಿ ಕೀರ್ತಿ ಕಾಸರಗೋಡ (ಪತ್ರಿಕೆ), ಆರ್ ವಿ ಭಟ್ (ಬ್ಯಾಂಕ್), ಬಸವರಾಜ ತಳವಾರ (ಶಿಕ್ಷಕ) ಇವರು ತಮ್ಮ ತಮ್ಮ ವೃತ್ತಿ, ಪ್ರವೃತ್ತಿಗಳಲ್ಲಿಯ ಹಾಸ್ಯ ಪ್ರಸಂಗಗಳನ್ನು ಹಂಚಿಕೊAಡು ಜನರನ್ನು ರಂಜಿಸಲಿದ್ದು ಜಿ. ಎಸ್. ಸೋನಾರ ನಿರೂಪಿಸಲಿದ್ದಾರೆ.