23/12/2024
1715146201266
ನೇಸರಗಿ-೦೮: ಸಮೀಪದ ದೇಶನೂರ ಗ್ರಾಮದ ಶ್ರೀ ಗ್ರಾಮದೇವತೆ, ಶ್ರೀ ಭಾಂವಿ   ಬಸವೇಶ್ವರ ಜಾತ್ರೆ  ಹಾಗೂ ಹನುಮಂತ ದೇವರ ಜಾತ್ರಾ ಮಹೋತ್ಸವವು ಶುಕ್ರವಾರ ದಿ. 10-5-2024 ರಿಂದ 20-5-2024 ರ ವರೆಗೆ ನೆರವೇರಲಿದ್ದು ಜಾತ್ರೆಯ ದಿವ್ಯಾಸಾನಿಧ್ಯವನ್ನು ದೇಶನೂರ ವಿರಕ್ತ ಮಠದ ಶ್ರೀ ಮಡಿವಾಳ ರಾಜಯೋಗಿಂದ್ರ ಮಹಾಸ್ವಾಮಿಗಳು ವಹಿಸಲಿದ್ದಾರೆ.ಮೇ 10 ರಿಂದ  ಹೊನ್ನಾಟ, ಉಡಿ ತುಂಬುವದು. ಮೇ 11,12,13 ರಂದು  ರಂದು ಗ್ರಾಮದಲ್ಲಿ ಹೊನ್ನಾಟ್, ಮೇ 13 ರಂದು ದೇಶನೂರಿನ ಸಂತೋಷ್ ಮೆಲೋನಿ ಆರ್ಕೆಸ್ಟ್ರಾ ಇವರಿಂದ  ರಾತ್ರಿ 8 ಕ್ಕೆ ರಸಮಂಜರಿ ಕಾರ್ಯಕ್ರಮ, ಮೇ 14 ರಂದು ಬೆಳಿಗ್ಗೆ 10 ಕ್ಕೆ ಶ್ರೀ ಭಾಂವಿ ಬಸವೇಶ್ವರ ದೇವಸ್ಥಾನದ ಮಹಾದ್ವಾರ ಉದ್ಘಾಟನೆ, ಕುಂಭಮೇಳ, ಸಂಜೆ 4 ಗಂಟೆಗೆ ಕಳಸರೋಹಣ  ಅಂದು ರಾತ್ರಿ 9 ಕ್ಕೆ  ಮಲಗೌಡ ಪಾಟೀಲ ಕಲಾ ತಂಡದಿಂದ ಶ್ರೀ ಜಗಜ್ಯೋತಿ ಬಸವೇಶ್ವರ ನಾಟಕ, ಮೇ 15 ರಂದು ಬೆಳಿಗ್ಗೆ 9 ಕ್ಕೆ ರಂಗೋಲಿ ಸ್ಪರ್ಧೆ, ರಾತ್ರಿ ವೇದಿಕೆ ಕಾರ್ಯಕ್ರಮ ಮತ್ತು ಮೇ 16 ರಂದು ಸಂಜೆ 4 ಕ್ಕೆ ಬಾಂವಿ ಬಸವೇಶ್ವರ ಮಹಾ ರಥೋತ್ಸವ  ರಾತ್ರಿ 9 ಕ್ಕೆ ಬನಶಂಕರಿ ದೇವಿ ನಾಟ್ಯ ಸಂಗದಿಂದ ಬಾಳು ಬೆಳಗಿದ ಮನೆ ನಾಟಕ, ಮೇ 17 ರಂದು ಬೆಳಿಗ್ಗೆ 8 ಕ್ಕೆ ವಾಲಿಬಾಲ್ ಪಂದ್ಯಾವಳಿ, ಸಂಜೆ ಹನುಮಂತ ದೇವರ ಒಕಳಿ,ಮೇ 19 ಕ್ಕೆ ಕಳಸ ಇಳಿಸುವದು. ಮೇ 19 ರಂದು ಸಂಜೆ 4 ಕ್ಕೆ ಭಾರಿ ಜಂಗಿ ಕುಸ್ತಿ, ಮೇ 20 ಕ್ಕೆ ಶ್ರೀ ಗ್ರಾಮದೇವತೆಯ ಹೊನ್ನಾಟ ಸಂಜೆ ದೇವಿ ಸೀಮೆಗೆ ಹೋಗುವಳು ಎಂದು ದೇಶನೂರ ಶ್ರೀ ಗ್ರಾಮದೇವತೆ ಜಾತ್ರಾ ಕಮಿಟಿ ತಿಳಿಸಿದೆ.
error: Content is protected !!