ಸವದತ್ತಿಯ ಪ್ರಸಿದ್ಧ ಯಾತ್ರಾಸ್ಥಳ ಯಲ್ಲಮ್ಮಗುಡ್ಡದಲ್ಲಿರುವ ಶ್ರೀರೇಣುಕಾ ಯಲ್ಲಮ್ಮ ದೇವಸ್ಥಾನಕ್ಕೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಭೇಟಿ ನೀಡಿ, ದೇವರ ದರ್ಶನ ಪಡೆದರು. ನಾಡಿನ ಸಮಸ್ತ ಜನರಿಗೆ ಒಳಿತಾಗಲಿ, ಉತ್ತಮ ಮಳೆ ಬೆಳೆಯಾಗಲಿ, ರೈತರ ಬದುಕು ಹಸನಾಗಲಿ, ಎಲ್ಲರ ಜೀವನ ಸುಖಮಯವಾಗಿರಲಿ ಎಂದು ತಾಯಿ ರೇಣುಕಾ ಯಲ್ಲಮ್ಮನ ಬಳಿ ಪ್ರಾರ್ಥಿಸಿದರು.
ಈ ವೇಳೆ ಶಾಸಕ ವಿಶ್ವಾಸ್ ವೈದ್ಯ, ಉಮೇಶ್ ಬಾಳಿ, ಬಿ.ಎನ್.ಪ್ರಭುನವರ, ನಾಸೀಬ್ ಬಾಗೋಜಿಕೊಪ್ಪ, ಅಮೀರ್ ಗುರಿನಾಯ್ಕ್, ಮಹಾರಾಜ ಗೌಡರು ಸೇರಿದಂತೆ ಹಲವು ಮಂದಿ ಉಪಸ್ಥಿತರಿದ್ದರು.