23/12/2024
IMG-20240503-WA0003

ಬೆಳಗಾವಿ-೦೩: ಬೆಳಗಾವಿಯಲ್ಲಿ ನೆಲೆಸಿರುವ ಜೈನ ರಾಜಸ್ಥಾನಿ ಸಾಮಾಜ ಜನರು ಸದಾಕಾಲ ಬೆಳಗಾವಿಯ ಅಭಿವೃದ್ಧಿಗೆ ಶ್ರಮಿಸುತ್ತಿದೆ. ನಿಮ್ಮ ಆರ್ಥಿಕ ಬದ್ದತೆಯಿಂದ ನೀವು ನೆಲೆಸಿರುವ ಸ್ಥಳಗಳ ಅಭಿವೃದ್ಧಿ ಆಗಿದೆ. ಸಾವಿರಾರು ಉದ್ಯೋಗಗಳು ಸೃಷ್ಟಿಸಿ, ಇಲ್ಲಿನ ಯುವಕರಿಗೆ ಉದ್ಯೋಗ ಕೊಡುವ ಕೆಲಸ ನಿಮ್ಮ ಸಮಾಜ ಮಾಡಿದೆ. ಉದ್ಯೋಗ ಸೃಷ್ಟಿಯಿಂದ ಆರ್ಥಿಕ ವಹಿವಾಟಕ್ಕೆ ಅನುಕುಲ ಆಗಿದೆ ಎಂದು ಬೆಳಗಾವಿ ಲೊಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ಅವರು ತಿಳಿಸಿದರು.‌

ಲೋಕಸಭಾ ಚುನಾವಣೆ ಅಂಗವಾಗಿ ಬೆಳಗಾವಿಯ ಪಾಂಗುಳ ಗಲ್ಲಿಯ ಜೈನ ಮಂದಿರದ ಹತ್ತಿರ ಸಮಸ್ತ ರಾಜಸ್ಥಾನಿ ಸಮಾಜ ಮತ್ತು ವೈವಿಧ್ಯ ಭಾಷಿಕ ಸಮಾಜದ ಬಹಿರಂಗ ಸಭೆ ನಡೆಸಿ ಮತಯಾಚನೆ ಮಾಡಿ, ಮಾತನಾಡಿದ ಅವರು, ಜೈನ ಸಮಾಜದ ರಾಜಸ್ಥಾನಿ ಬಂದುಗಳು ಸಭೆಗೆ ಆಗಮಿಸಿದ್ದೀರಿ, ನಿಮ್ಮ ಮೂಲ ರಾಜಸ್ತಾನಿ ಇದ್ದರು ಸೂಮಾರು ನೂರಾರು ವರ್ಷದಿಂದ ಬೆಳಗಾವಿ ಸೇರಿದಂತೆ ರಾಜ್ಯದ ಅನೇಕ ಭಾಗದಲ್ಲಿ ನೇಲೆಸಿ ಉದ್ಯೋಗ ಸೃಷ್ಟಿ ಮಾಡುತ್ತಿದ್ದೀರಿ. ದೇಶದ ಅರ್ಥಿಕತೆಗೆ ನಿಮ್ಮ ಕೊಡುಗೆ ದೊಡ್ಡದು ಇದೆ ಎಂದು ತಿಳಿಸಿದರು.‌

ದೇಶದ ಭದ್ರತೆ, ಸುರಕ್ಷತೆಗಾಗಿ ಮೋದಿಯವರು ಮತ್ತೆ ಪ್ರಧಾನಿ ಆಗಬೇಕು.‌ ಹಾಗಾಗಿ ತಾವು ಎಲ್ಲರೂ ಬಿಜೆಪಿಗೆ ಬೆಂಬಲ ನೀಡಬೇಕು. ಈ ಹಿಂದೆ ಕೂಡಾ ದಿ.ಸುರೇಶ ಅಂಗಡಿ ಅವರು ನಾಲ್ಕು ಬಾರಿ ಸಂಸದರಾದಾಗ ಅವರಿಗೆ ಬೆಂಬಲ ನೀಡಿ ಅವರ ಗೆಲುವಿಗೆ ಕಾರಣರಾಗಿದ್ದೀರಿ. ಅದೇ ರೀತಿ ನನಗೆ ಬೆಂಬಲ ನೀಡಿ, ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಿಸಬೇಕು ಎಂದು ತಿಳಿಸಿದರು.‌

ಈ ಸಂದರ್ಭದಲ್ಲಿ ನಿರಮಾ ಸುಂದರ ವಿಜಯ ಮಹಾರಾಜ, ಬಿಜೆಪಿ ರಾಜ್ಯ ಉಪಾಧ್ಯಕ್ಷರಾದ ಅನಿಲ ಬೆನಕೆ, ಪ್ರಮುಖರಾದ ಉತ್ತಮ ಸರೆಮತ್ ಜೈನ, ವಿಜಯ ಪೂರ್ವಾಲ, ವಿಜಯ ಸಾಗವಿ, ವಿಕ್ರಮ್ ನಾಕೂಡ, ಹೇಮರಾಜ ಭಂಡಾರಿ, ಬಾಬುಲಾಲ್ ರಾಜಪುರೋಹಿತ, ವಿಕ್ರಮ ಪುರೋಹಿತ ಹಾಗೂ ಜೈನ ಸಮಾಜದ ಬಂಧುಗಳು ಹಾಜರಿದ್ದರು.

error: Content is protected !!