ಕಾಂಗ್ರೆಸ್ ಬೆಂಬಲಿಸಲು ಸಚಿವೆ ಲಕ್ಷ್ಮೀ ಹೆಬ್ಬಾಳಕರ ಮನವಿ
ಸವದತ್ತಿ-೨೭:ಜಿಲ್ಲೆಯ ಹೊರಗಿನ ಅಭ್ಯರ್ಥಿ ಜಗದೀಶ್ ಶೆಟ್ಟರ್ ಅವರನ್ನು ವಾಪಸ್ ಹುಬ್ಬಳ್ಳಿಗೆ ಕಳುಹಿಸಿ, ಮನೆ ಮಗ ಮೃಣಾಲ್ ಹೆಬ್ಬಾಳಕರ ಅವರನ್ನು ಪಾರ್ಲಿಮೆಂಟಿಗೆ ಕಳುಹಿಸಿಕೊಡಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ ಮನವಿ ಮಾಡಿದರು.
ಸವದತ್ತಿ ಕೋರ್ಟ್ ಆವರಣದಲ್ಲಿ ಶನಿವಾರ ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್ ಹೆಬ್ಬಾಳಕರ ಪರ ಮತಯಾಚಿಸಿದ ಸಚಿವರು, ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಕಾಂಗ್ರೆಸ್ ಬೆಂಬಲಿಸುವಂತೆ ಮನವಿ ಮಾಡಿದರು.
ಜಿಲ್ಲೆಗೆ ಸಾಕಷ್ಟು ಅನ್ಯಾಯ ಎಸಗಿರುವ ವ್ಯಕ್ತಿಗೆ ಮತ್ತೆ ಮಣೆ ಹಾಕುವುದು ಬೇಡ. ಈ ಹಿಂದೆ ಉಸ್ತುವಾರಿ ಸಚಿವರಾಗಿದ್ದ ವೇಳೆ ಯಾವುದೇ ಅಭಿವೃದ್ಧಿ ಕೆಲಸ ಮಾಡದ ಬಿಜೆಪಿ ಅಭ್ಯರ್ಥಿ ಇಂದು ಮೋದಿ ಹೆಸರಿನಲ್ಲಿ ಮತ ಕೇಳುತ್ತಿದ್ದಾರೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ ಕಿಡಿ ಕಾರಿದರು. ಈ ವೇಳೆ ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್ ಹೆಬ್ಬಾಳಕರ ಅವರನ್ನು ಬೆಂಬಲಿಸುವುದಾಗಿ ವಕೀಲರ ಸಂಘ ನಿರ್ಣಯ ಕೈಗೊಂಡಿತು.
ಈ ವೇಳೆ ಶಾಸಕರಾದ ವಿಶ್ವಾಸ್ ವೈದ್ಯ, ಸವದತ್ತಿ ಬಾರ್ ಅಸೋಸಿಯೇಷನ್ ಅಧ್ಯಕ್ಷರಾದ ಸಂಜು ಮತ್ತೀನ್, ಕಾರ್ಯದರ್ಶಿ ಮಂಜುನಾಥ್ ಬಡಿಗೇರ್, ವಿ.ವಿ.ಹಿರೇಮಠ, ಆರ್.ಬಿ. ಶಂಕರಗೌಡ, ಜಿ.ಜಿ.ಕಣವಿ, ಎಸ್. ಎಂ. ಸಂಗ್ರೇಶ್ ಕೊಪ್ಪ, ಎಂ.ಎಂ.ಎಲಿಗಾರ್, ಮಹಾಂತೇಶ್ ಮತ್ತಿಕೊಪ್ಪ ಸೇರಿದಂತೆ ಹಲವು ವಕೀಲರು ಹಾಜರಿದ್ದರು.