ಬೆಳಗಾವಿ-೨೪: ಹುಬ್ಬಳ್ಳಿಯಲ್ಲಿ ನೇಹಾ ಹತ್ಯೆ ಆಗಿದ್ದು, ಲವ್ ಜಿಹಾದ್ ಮಾಡಿ ಬ್ರೇನ್ ವಾಷ್ ಮಾಡಲಾಗಿದೆ. ಇದನ್ನು ಸಿದ್ದರಾಮಯ್ಯ ಖಂಡಿಸುವ ಕೆಲಸ ಮಾಡುತ್ತಿಲ್ಲ. ಸಿದ್ದರಾಮಯ್ಯ ವಯಕ್ತಿಕ ಕಾರಣಕ್ಕೆ ಮರ್ಡರ್ ಆಗಿದೆ ಎಂದು ಹೇಳಿದ್ದಾರೆ. ಹಿಂದೂ ಹುಡುಗ ಮುಸ್ಲಿಂ ಹುಡುಗಿಯನ್ನು ಮರ್ಡರ್ ಮಾಡಿದ್ದರೆ ಅವರ ಮನೆಗೆ ಓಡಿ ಹೋಗ್ತಿದ್ದರು ಎಂದು ಕಾಂಗ್ರೆಸ್ ಸರ್ಕಾರ ವಿರುದ್ಧ ಜಗದೀಶ್ ಶೆಟ್ಟರ್ ಅವರು ವಾಗ್ದಾಳಿ ನಡೆಸಿದರು.
ಬೆಳಗಾವಿ ಉತ್ತರ ಮತ ಕ್ಷೇತ್ರದ ಬೂತ್ ಮಟ್ಟದ ಕಾರ್ಯಕರ್ತರ ಸಮಾವೇಶವನ್ನು ಮಂಗಳವಾರ ಗಾಂಧಿ ಭವನದಲ್ಲಿ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಮೊದಲು ನೇಹಾ ಹಿರೇಮಠ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಬಳಿಕ ದೀಪ ಪ್ರಜ್ವಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಈ ವೇಳೆ ಸಮಾವೇಶ ಉದ್ದೇಶಿಸಿ ಮಾತನಾಡಿದ ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ಅವರು, ಒಬ್ಬಂಟಿ ಮಹಿಳೆ ನುಡುರಾತ್ರಿಯಲ್ಲಿ ಓಡಾಡಿದರೆ ಸ್ವಾತಂತ್ರ ಅಂತಿದ್ರು, ಈಗ ಹಾಡು ಹಗಲೇ ಮಹಿಳೆಯರ ಕೊಲೆ ಅತ್ಯಾಚಾರಗಳು ನಡೆಯುತ್ತಿವೆ. ಅಲ್ಪಸಂಖ್ಯಾರ ತುಷ್ಠಿಕರಣಕ್ಕಾಗಿ ನೇಹಾ ಅವರ ಮನೆಗೆ ಸಿಎಂ ಡಿಸಿಎಂ ಹೋಗಿಲ್ಲ. ಹೆಚ್ ಕೆ ಪಾಟೀಲರನ್ನು ಮನೆಗೆ ಕಳಿಸಿ ಫೋನ್ ಮಾಡಿಸಿ ನನ್ನ ತಪ್ಪಾಗಿದೆ ಅಂತಾರೆ. ನಿಜವಾಗಿಯೂ ನಿಮ್ಮ ತಪ್ಪಾಗಿದ್ದರೆ ಅವರ ಮನೆಗೆ ಹೋಗಿ ಕ್ಷಮೆ ಕೇಳಿ ಒತ್ತಾಯಿಸಿದರು.
ಮೋದಿಯವರು ಮೂರನೇ ಬಾರಿ ಪ್ರಧಾನಿ ಆಗಬೇಕು ಎನ್ನುವುದು 140 ಕೋಟಿ ಜನರ ಕನಸು. ಭಾರತಕ್ಕೆ ಅತ್ಯಂತ ಗೌರವ ತರುವ ಕೆಲಸ ಮಾಡಿದ್ದು ನರೇಂದ್ರ ಮೋದಿ. ಮೋದಿ ಪ್ರಧಾನಿಯಾಗುವ ಮೊದಲು ಭಾರತ ಅರ್ಥಿಕತೆ 15 ನೇ ಸ್ಥಾನದಲ್ಲಿತ್ತು, ಮೋದಿ ಪ್ರಧಾನಿಯಾಗಿ 10 ವರ್ಷಕ್ಕೆ 5ನೇ ಸ್ಥಾನಕ್ಕೆ ಏರಿದೆ. 15 ವರ್ಷಗಲ್ಲಿ ಜಗತ್ತಿನ ಸೂಪರ್ ಪವರ್ ರಾಷ್ಟ್ರವಾಗಿ ಭಾರತ ನಿಲ್ಲುತ್ತೆ ಎಂದು ತಿಳಿಸಿದರು.
ಮಹಿಳಾ ಮೀಸಲಾತಿ ನಗರಸಭೆ ಪುರಸಭೆ ತಾಲೂಕು ಪಂಚಾಯ್ತಿಯಲ್ಲಿ, ಅಸೆಂಬ್ಲಿ, ಎಂಪಿ, ಎಂಎಲ್ ಎಗೆ ಮೀಸಲಾತಿ ಇರಲಿಲ್ಲ. ಅದಕ್ಕೆ 33% ಪರ್ಸಂಟ್ ಮೀಸಲಾತಿ ನೀಡಲಾಗಿದೆ. ಬಸವಣ್ಣನವರ ಸಮಾನತೆಯ ರೀತಿಯಲ್ಲಿ ಎಲ್ಲರಿಗೂ ಅವಕಾಶ ನೀಡಲಾಗಿದೆ ಎಂದು ತಿಳಿಸಿದರು.
ನಾಲ್ಕು ಬಾರಿ ಸುರೇಶ್ ಅಂಗಡಿಗೆ ಆಶೀರ್ವಾದ ಮಾಡಿದ್ದೀರಿ. ಮಂಗಳಾ ಅಂಗಡಿ ಸಹ ಅಭಿವೃದ್ದಿ ಕೆಲಸ ಮಾಡಿದ್ದಾರೆ. ಮೋದಿ ಪ್ರತಿನಿಧಿಯಾಗಿ ನಾನು ಇಲ್ಲಿ ಸ್ಪರ್ಧೆ ಮಾಡ್ತಿದ್ದಿನಿ, ನನಗೆ ಆಶೀರ್ವಾದ ಮಾಡುವ ಮೂಲಕ ನರೇಂದ್ರ ಮೋದಿಯವರನ್ನು ಮೂರನೇ ಬಾರಿ ಪ್ರಧಾನಿ ಮಾಡಿ ಎಂದು ಜಗದೀಶ ಶೆಟ್ಟರ್ ಅವರು ಹೇಳಿದರು.
ರಾಮಮಂದಿರ ಕಟ್ಟಿದ್ದು ಸುವರ್ಣ ಅಕ್ಷರದಲ್ಲಿ ಬರೆಯಬೇಕು: ಅನಿಲ ಬೆನಕೆ
ಪ್ರಾಸ್ತಾವಿಕವಾಗಿ ಮಾತನಾಡಿದ ಬಿಜೆಪಿ ರಾಜ್ಯ ಉಪಾದ್ಯಕ್ಷ ಅನಿಲ ಬೆನಕೆ ಅವರು, ನರೇಂದ್ರ ಮೋದಿಯವರು ಮೂರನೆ ಸಲ ಪ್ರಧಾನಿ ಆಗಬೇಕು. ಕಳೆದ 10 ವರ್ಷದಿಂದ ದೇಶದಲ್ಲಿ ಸಾಕಷ್ಟು ಬದಲಾವಣೆ ಆಗಿದೆ. ದೇಶ ಮುಂದಿನ ದಿನಗಳಲ್ಲಿ ವಿಶ್ವಗುರು ಆಗಲಿ. ಏ 28 ರಂದು ಮೋದಿಯವರು ಬೆಳಗಾವಿಗೆ ಬರಲಿದ್ದಾರೆ. ಮೋದಿಯವರನ್ನು ಅದ್ಧೂರಿಯಾಗಿ ಸ್ವಾಗತ ಮಾಡಬೇಕು ಎಂದರು.
ದೇಶದಲ್ಲಿ 500 ವರ್ಷದಿಂದ ರಾಮಮಂದಿರ ಆಗಿರಲಿಲ್ಲ ಆದರೆ ಮೋದಿಯವರು ಮಂದಿರ ಕಟ್ಟಿಸಿದ್ದು, ಇತಿಹಾಸದಲ್ಲಿ ಸುವರ್ಣ ಅಕ್ಷರದಲ್ಲಿ ಬರೆಯಬೇಕುಮ ಕಳೆದ 10 ವರ್ಷದ ಹಿಂದೆ ಸಾಕಷ್ಟು ಭ್ರಷ್ಟಾಚಾರ, ಹಗರಣಗಳು ಹೊರಗೆ ಬರುತಿತ್ತು, ಆದರೆ ಮೋದಿ ಸರ್ಕಾರ ಬಂದ ಮೇಲೆ ಯಾವುದೇ ಭ್ರಷ್ಟಾಚಾರ ಆಗಿರಲಿಲ್ಲ. ಮೋದಿಯವರು ಆರ್ಟಿಕಲ್ 370 ತಗೆದಿದ್ದರಿಂದ ಕಾಶ್ಮೀರ ಸಾಕಷ್ಟು ಅಭಿವೃದ್ಧಿ ಆಗಿದೆ. ಮೋದಿ ಅವರು ಪ್ರಧಾನಿ ಆದ ಮೇಲೆ ರಕ್ಷಣಾ ಇಲಾಖೆಯಲ್ಲಿ ಸಾಕಷ್ಟು ಬದಲಾವಣೆ ಆಗಿದೆ. ಕೋವಿಡ್ ಸಂದರ್ಭದಲ್ಲಿ ಸಾಕಷ್ಟು ಸಾವು ನೋವುಗಳು ಸಂಭವಿಸಿದ್ದನ್ನು ತಡೆಯಲಾಯಿತು. ಎಲ್ಲರಿಗೂ ಉಚಿತವಾಗಿ ವ್ಯಾಕ್ಸಿನೇಷನ್ ವಿತರಣೆ ಮಾಡಲಾಯಿತು ಎಂದರು
ಜಗದೀಶ್ ಶೆಟ್ಟರ್ ನಮ್ಮವರು, ನಮ್ಮ ಬೆಳಗಾವಿಯವರು. ಅವರು ಹೊರಗಿನವರಲ್ಲ. ಮೋದಿ ಅವರು ಮತ್ತೆ ಪ್ರಧಾನಿ ಆಗಲು ಜಗದೀಶ್ ಶೆಟ್ಟರ್ ಅವರ ಗೆಲುವಿಗೆ ಶ್ರಮೀಸಬೇಕು. ನಿಮ್ಮ ಒಂದು ಮತ ಮೋದಿ ಅವರಿಗೆ ಹಾಕಿದಂತೆ ಎಂದು ಕರೆ ನೀಡಿದರು.
ಚುನಾವಣೆ ಬಳಿಕ ಗ್ಯಾಂರಂಟಿಗಳು ನಿಲ್ಲಲಿದೆ: ಪ್ರಭಾಕರ್ ಕೋರೆ
ಮಾಜಿ ರಾಜ್ಯಸಭಾ ಸದಸ್ಯ ಪ್ರಭಾಕರ ಕೋರೆ ಅವರು ಮಾತನಾಡಿ, ಕರ್ನಾಟಕದಲ್ಲಿ ಮೊದಲನೆ ಸಲ ಬೇಟಿ ಬಚಾವ್ ಬೇಟಿ ಪಾಡಾವ್ ಎಂಬ ಯೋಜನಡಿ ಭಾಗ್ಯಲಕ್ಷ್ಮಿ ಯೋಜನೆ ರಾಜ್ಯದಲ್ಲಿ ಯಡಿಯೂರಪ್ಪ ಅವರು ಜಾರಿಗೆ ತಂದರು, ಆದರೆ ಈಗನ ಸರ್ಕಾರ ಆ ಯೋಜನೆ ರದ್ದು ಮಾಡಿದ್ದಾರೆ. ಬಾಲ ಸಂಜೀವಿನಿ ಯೋಜನೆ ರದ್ದು ಮಾಡಿದ್ದಾರೆ. ಈಗಿನ ಸರ್ಕಾರದ ಹತ್ತಿರ ದುಡ್ಡೆ ಇಲ್ಲ. ಅವರ ಗ್ಯಾಂರಂಟಿ ಸಲುವಾಗಿ ಎಲ್ಲಾ ಯೋಜನೆಗಳು ಸ್ಥಗಿತಗೊಂಡಿದೆ. ಲೋಕಸಭಾ ಚುನಾವಣೆ ಮೂಗಿದ ಬಳಿಕ ಅವರ ಗ್ಯಾಂರಂಟಿಗಳು ನಿಲ್ಲಲಿದೆ. ಅವರ ಗ್ಯಾರಂಟಿಗೆ ಮರಳಾಗಬೇಡಿ ಎಂದರು
ಮೋದಿಯವರು ಪ್ರತಿ ಹಣ್ಣು ಮಕ್ಕಳಿಗೆ ಗ್ಯಾಸ್ ನೀಡುವ ಕೆಲಸ ಮಾಡಿದ್ದಾರೆ. ಈಗ ಮಹಿಳೆಯರ ಹೇಸರಿನ ಮೇಲೆ ಮನೆ ಕಟ್ಟಿಸಿಕೂಡುವ ವ್ಯವಸ್ಥೆ ಮಾಡಲಿದ್ದಾರೆ. ಮಹಿಳೆಯರಿಗೆ ರಾಜಕೀಯವಾಗಿ 33% ನೀಡಲಿದ್ದಾರೆ. ಮುಂದಿನ ಐದು ವರ್ಷದಲ್ಲಿ ಪಿಓಕೆ ನಮ್ಮ ವಶವಾಗಲಿದೆ ಎಂದು ತಿಳಿಸಿದರು.
ಜಗದೀಶ್ ಶೆಟ್ಟರ್ ಅವರು ತುಂಬಾ ಅನುಭವ ಇರುವ ರಾಜಕಾರಣಿ, ಅವರು ಎಲ್ಲಿಯೂ ಚುನಾವಣೆಗೆ ನಿಂತರು ತಪ್ಪಿಲ್ಲ. ಹಾಗಾಗಿ ಜಗದೀಶ್ ಶೆಟ್ಟರ್ ಅವರನ್ನು ಗೆಲ್ಲಿಸಬೇಕು ಎಂದರು.
ನಿಮ್ಮ ಸ್ವಾಭಿಮಾನ ಬಿಟ್ಟು ಮತ ನೀಡಬೇಡಿ: ಸಂಜಯ ಪಾಟಿಲ್
ಸಂಜಯ ಪಾಟೀಲ್ ಮಾತನಾಡಿ, ನಿಮ್ಮ ಸ್ವಾಭಿಮಾನ ಬಿಟ್ಟು ಮತ ನೀಡಬೇಡಿ, ನಿಮಗೆ ರಾಮಂದಿರ ಕಟ್ಟೊದವರು ಬೇಕೊ ರಾಮ ಇಲ್ಲವೆ ಇಲ್ಲ ಎಂದು ಹೇಳಿದರು ಬೇಕು ನೀವೆ ತೀರ್ಮಾನ ಮಾಡಬೇಕು. ಪೆಂಡಾಲ್ ನಲ್ಲಿ ಇದ್ದ ರಾಮ ಈಗ ಐಶಾರಾಮಿ ಮೇಹಲ್ ನಲ್ಲಿ ಇದ್ದಾರೆ ಹಾಗಾಗಿ ಜಗದೀಶ್ ಶೆಟ್ಟರ್ ಅವರನ್ನು ಗೆಲ್ಲಿಸಬೇಕು ಎಂದು ತಿಳಿಸಿದರು.
ಈ ವೇಳೆ ಸಂಸದೆ ಮಂಗಳ ಅಂಗಡಿ ಮಹಾನಗರ ಜಿಲ್ಲಾಧ್ಯಕ್ಷೆ ಗೀತಾ ಸುತಾರ, ಪಾಲಿಕೆ ಮೇಯರ್ ಸವಿತಾ ಕಾಂಬಳೆ, ವಿಧಾನ ಪರೀಷತ್ ಸದಸ್ಯ ಹಣಮಂತ ನಿರಾಣಿ, ಮಾಜಿ ವಿಧಾನ ಪರೀಷತ್ ಸದಸ್ಯ ಮಹಾಂತೇಶ ಕವಟಗಿಮಠ, ಮಾಜಿ ಶಾಸಕ ಸಂಜಯ ಪಾಟೀಲ್, ಡಾ. ರವಿ ಪಾಟೀಲ್, ಡಾ ವಿಐ ಪಾಟೀಲ್, ಎಂಬಿ ಜಿರಳಿ, ರಮೇಶ ದೇಶಪಾಂಡೆ, ರಾಜೇಂದ್ರ ಹರಕುಣಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.