ಚಿಕ್ಕೊಡಿ-೧೯ :- ಪ್ರಜಾಪ್ರಭುತ್ವದಲ್ಲಿ ಮತದಾನ ಹಾಗೂ ಚುನಾವಣೆ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ತಾವೆಲ್ಲರೂ ಕಡ್ಡಾಯವಾಗಿ ಮತದಾನ ಮಾಡುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಗಟ್ಟಿಗೊಳಿಸುವಂತೆ ಚಿಕ್ಕೋಡಿ ಲೋಕಸಭಾ ಮತಕ್ಷೇತ್ರದ ಚುನಾವಣಾಧಿಕಾರಿ ಹಾಗೂ ಜಿ.ಪಂ. ಸಿ.ಇ.ಓ ರಾಹುಲ ಶಿಂಧೆ ಹೇಳಿದರು.
ಚಿಕ್ಕೋಡಿ ತಾ.ಪಂ ಆವರಣದಲ್ಲಿ ಶುಕ್ರವಾರ ರಂದು ಮತದಾನ ಜಾಗೃತಿ ಕುರಿತು ಆಯೋಜಿಸಲಾಗಿದ್ದ ಎತ್ತಿನ ಬಂಡಿ ಜಾಥಾಗೆ ಚಾಲನೆ ನೀಡಿ ಅವರು ಮಾತನಾಡಿದರು.
ಮೇ 7 ರಂದು ಲೋಕಸಭಾ ಸಾರ್ವತ್ರಿಕ ಚುನಾವಣೆಗೆ ಮತದಾನ ನಡೆಯುತ್ತಿದೆ. ಮತದಾನದ ದಿನದಂದು ಪ್ರತಿಯೊಬ್ಬರು ತಪ್ಪದೆ ಮತದಾನ ಮಾಡುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಗಟ್ಟಿಗೊಳಸಬೇಕು ಎಂದರು. ಮತದಾನ ಎಂಬುವದು ಸಂವಿಧಾನ ನೀಡಿದ ವರದಾನವಾಗಿದ್ದು ಇಂತಹ ಅತ್ಯಮೂಲ್ಯವಾದ ಹಕ್ಕನ್ನು ತಪ್ಪದೇ ಚಲಾಯಿಸುವುದು ಪ್ರತಿಯೊಬ್ಬ ಅರ್ಹ ಮತದಾರರ ಜವಾಬ್ದಾರಿಯಾಗಿದೆ. ಪ್ರಜಾಪ್ರಭುತ್ವ ಗಟ್ಟಿಗೊಳ್ಳಬೇಕಾದರೆ ಎಲ್ಲರೂ ತಪ್ಪದೇ ಮತ ಚಲಾಯಿಸಬೇಕು. ಸ್ವಯಂ ಪ್ರೇರಣೆಯಿಂದ ಅರ್ಹ ಮತದಾರರು ಮತ ಚಲಾಯಿಸುವದರ ಜೊತೆಗೆ ತಮ್ಮ ನೆರೆಹೊರೆಯವರು ಸಹ ತಪ್ಪದೇ ಮತದಾನ ಮಾಡುವಂತೆ ಜಾಗೃತಿ ಮೂಡಿಸಲು ಮುಂದಾಗುವಂತೆ ಜಿ.ಪಂ.ಸಿ.ಇ.ಓ. ರಾಹುಲ ಶಿಂಧೆ ಕರೇ ನೀಡಿದರು.
ಜಾಥಾ ಕಾರ್ಯಕ್ರಮವು ತಾಲ್ಲೂಕ ಪಂಚಾಯತ ಕಚೆರಿಯಿಂದ ಪ್ರಾರಂಭವಾಗಿ ಬಸವೇಶ್ವರ ಸರ್ಕಲ್ ಇಂದ ಬಸ ನಿಲ್ದಾಣ ಸರ್ಕಲ ಸುತ್ತಾಡಿ ತಾಲ್ಲೂಕ ಪಂಚಾಯತಿ ಮುಂದೆ ಕಾರ್ಯಕ್ರಮ ಮುಕ್ತಾಯಗೊಳಿಸಲಾಯಿತು. ಚಿಕ್ಕೋಡಿ ತಾಲ್ಲುಕಿನ ಸುತ್ತಮುತ್ತಲಿನ ರೈತರು ಚಕ್ಕಡಿ ಬಂಡೆಯೊಂದಿಗೆ ಭಾಗಿಯಾಗಿದ್ದರು. ಅಲ್ಲದೇ ಸಾಂಪ್ರದಾಯಿಕ ಉಡುಗೆ ಯೋಂದಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕಾರ್ಯಕರ್ತರು, ಎಸ್.ಎಚ್.ಜಿ ಸದಸ್ಯರು, ತಾಲ್ಲೂಕಾ ಪಂಚಾಯತ ಸಿಬ್ಬಂದಿ, ಪುರಸಭೆ ಸಿಬ್ಬಂದಿಗಳು ಭಾಗಿ ರಸ್ತೆ ಉದ್ದಕ್ಕು ಚುನಾವಣೆ ಘೋಷಣೆ ಕೂಗುತ್ತಾ, ಬಿದಿ ವ್ಯಾಪಾರಿಗಳಿಗೆ ಕರ ಪತ್ರವನ್ನು ಹಂಚುತ್ತಾ ಮತದಾನದ ಕುರಿತು ಜಾಗೃತಿ ಮೂಡಿಸಲಾಯಿತು.
ಈ ಸಂದರ್ಭದಲ್ಲಿ ಚಿಕ್ಕೋಡಿ ಉಪವಿಭಾಗಾಧಿಕಾರಿ ಮೆಹಬೂಬಿ, ಜಿ.ಪಂ ಯೋಜನಾ ನಿರ್ದೆಶಕ ಡಾ: ಎಮ್ ಕೃಷ್ಣರಾಜು, ಚಿಕ್ಕೋಡಿ ತಹಶೀಲ್ದಾರ ಚಿದಂಬರ ಕುಲಕರ್ಣಿ, ಜಿ.ಪಂ ಲೆಕ್ಕಾಧಿಕಾರಿ ಗಂಗಾ ಹಿರೇಮಠ, ಚಿಕ್ಕೋಡಿ ತಾ.ಪಂ.ಇ.ಓ.ಜಗದೀಶ ಪೂಜಾರ ಸೇರಿದಂತೆ ವಿವಿಧ ಇಲಾಖೆ ಪುರಸಭೆಯ ಮುಖ್ಯಾಧಿಕಾರಿ ಮಹಾಂತೇಶ ನಿಡವಣಿ ಹಾಗೂ ವಿವಿಧ ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.