24/12/2024
IMG-20240419-WA0000

ಬೆಳಗಾವಿ-೧೯:ಪರೀಕ್ಷೆಗಳ ಪೂರ್ವ ಸಿದ್ದತಾ ಸೇವೆಗಳಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಮುಂಚೂಣಿಯಲ್ಲಿರುವ ಆಕಾಶ್ ಬೈಜೂಸ್ ಏಪ್ರಿಲ್ ೨೦೨೪ ರಲ್ಲಿ ಆರಂಭವಾಗಲಿರುವ ವೈದ್ಯರು ಮತ್ತು ಎಂಜಿನಿಯರ್ ಗಳಾಗಬೇಕೆಂದು ಹೊತ್ತಿರುವ ಹಲವಾರು ವಿದ್ಯಾರ್ಥಿಗಳಕನಸನ್ನು ನನಸು ಮಾಡುವ ಉದ್ದೇಶದಿಂದ ವಿವಿಧ ವಿದ್ಯಾರ್ಥಿವೇತನಗಳನ್ನು ಪ್ರಕಟಿಸಿದೆ.
ಮೊದಲ ವಿದ್ಯಾರ್ಥಿವೇತನ ವೆಂದರೆ ಇನ್ ಸ್ಟಂಟ್ ಅಡ್ಮಿಷನ್ ಕಮ್ ಸ್ಕಾಲರ್ ಶಿಪ್ ಟೆಸ್ಟ್ (iACST)ಆಗಿದೆ. ವೈದ್ಯಕೀಯ, ಎಂಜಿನಿಯರಿಂಗ್ ಮತ್ತು ಫೌಂಡೇಶನ್ ಕೊರ್ಸಗಳ ಪ್ರವೇಶಕ್ಕೆ ಶೇ.೯೦ ರವರೆಗೆ ವಿದ್ಯಾರ್ಥಿ ವೇತನ ದೊರೆಯಲಿದೆ. ಇದಲ್ಲದೆ ಆಕಾಶ್ ಬೈಜೂಸ್ ಹುತಾತ್ಮರಾದ ಯೋಧರು, ಸೇನಾ ಸಿಬ್ಬಂದಿ ಮತ್ತು ಭಯೋತ್ಪಾದಕ ದಾಳಿಗೆ ತುತ್ತಾದವರ ಮಕ್ಕಳಿಗೆ ವಿಶೇಷ ರಿಯಾಯಿತಿ ನೀಡುತ್ತಿದೆ.
ಈ ಬಗ್ಗೆ ಮಾತನಾಡಿದ ಆಕಾಶ್ ಬೈಜೂಸ್ ನ ಚೀಫ್ ಬ್ಯುಸಿನೆಸ್ ಆಫೀಸರ್ ಅನೂಪ್ ಅಗರ್ವಾಲ್ ಅವರು ಪತ್ರಿಕಾಗೋಷ್ಠಿ ಬುಧವಾರ ಹೇಳಿದರು. ದೇಶಾದ್ಯಂತ ವಿದ್ಯಾರ್ಥಿಗಳಿಗೆ ಸುಲಭವಾಗಿ ಪ್ರವೇಶಿಸಬಹುದಾದ ಮತ್ತು ಪರಿಣಾಮಕಾರಿ ಶೈಕ್ಷಣಿಕ ಅವಕಾಶಗಳನ್ನು ಒದಗಿಸುವ ನಿಟ್ಟಿನಲ್ಲಿ ನಾವು ಬದ್ಧರಾಗಿದ್ದೇವೆ iACST ಮತ್ತು ನಮ್ಮ ವಿದ್ಯಾರ್ಥಿ ವೇತನ ಕಾರ್ಯಕ್ರಮ ಗಳಂತಹ ಉಪಕ್ರಮಗಳ ಮೂಲಕ ಅರ್ಹ ವಿದ್ಯಾರ್ಥಿಗಳಿಗೆ ಅವರ ಶೈಕ್ಷಣಿಕ ಮತ್ತು ವೃತ್ತಿ ಆಕಾಂಕ್ಷೆ ಗಳನ್ನು ಪೂರೈಸಿಕೊಳ್ಳಲ್ಲೂ ಅವಕಾಶ ಕಲ್ಪಿಸುವ ಗುರಿಯನ್ನು ನಾವು ಹೊಂದಿದ್ದೇವೆ. ನಮ್ಮ ಧ್ಯೇರ್ಯ ಶಾಲಿ ಸಶಸ್ತ್ರ ಪಡೆಗಳ ಸಿಬ್ಬಂದಿಯ ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹ ನಿಡುವ ನಮ್ಮ ಬದ್ಧತೆ ಯನ್ನು ಮುಂದುವರಿಸಲು ನಾವು ಹೆಮ್ಮೆ ಪಡುತ್ತೇವೆ ಮತ್ತು ಶಿಕ್ಷಣ ದಲ್ಲಿ ಶ್ರೇಷ್ಟತೆ ಹಾಗೂ ಒಳಗೊಳ್ಳುವಿಕೆ ಯನ್ನು ಮುಂದು ವರೆಸಲು ನಾವು ಬದ್ಧರಾಗಿದ್ದೇವೆ ಎಂದು ತಿಳಿಸಿದರು.
ಇನ್ ಸ್ಟಂಟ್ ಅಡ್ಮಿಷನ್ ಕಮ್ ಸ್ಕಾಲರ್ ಶಿಪ್ ಟೆಸ್ಟ್ (iACST)ವಿದ್ಯಾರ್ಥಿ ಗಳಿಗೆ ತಕ್ಷಣವೇ ವಿದ್ಯಾರ್ಥಿ ವೇತನ ಪಡೆದುಕೊಳ್ಳಲು ಮತ್ತು ಇನ್ ಸ್ಟಂಟ್ ಆಗಿ ಪ್ರವೇಶ ಮಾಡಿಕೊಳ್ಳಲು ಅವಕಾಶ ಕಲ್ಪಿಸುತ್ತಿದೆ. ವಿದ್ಯಾರ್ಥಿಗಳು ಆನ್ ಲೈನ್ ಮೂಲಕ ಪರೀಕ್ಷೆ ತೆಗೆದು ಕೊಳ್ಳಬಹುದು ಮತ್ತು ತಾವು ಅರ್ಹತೆ ಪಡೆಯುವ ವಿದ್ಯಾರ್ಥಿ ವೇತನದ ಮಾಹಿತಿಯನ್ನು ತ್ವರಿತವಾಗಿ ಪಡೆದು ಕೊಳ್ಳಬಹುದಾಗಿದೆ. ಅದೇ ರೀತಿ ಆಕಾಶ್ ನ ಭೋದಕ ಸಿಬ್ಬಂದಿಯ ಮಾರ್ಗದರ್ಶನದಲ್ಲಿ ಇನ್ ಸ್ಟಂಟ್ ಆಗಿ ಪ್ರವೇಶಾತಿ ಬಗ್ಗೆ ಮಾಹಿತಿಯನ್ನು ಪಡೆದು ಪ್ರವೇಶ ವನ್ನು ಪಡೆಯಲು ಇದು ನೇರವಾಗುತ್ತದೆ. ಇನ್ ಸ್ಟಂಟ್ ಅಡ್ಮಿಶನ್ ಕಮ್ ಸ್ಕಾಲರ್ ಶಿಪ್ ಟೆಸ್ಟ್(iACST)೬೦ ನಿಮಿಷ ಪರೀಕ್ಷೆ ಯಾಗಿದ್ದು,ನಿಗದಿತ ದಿನಗಳದು ಬೆಳಿಗ್ಗೆ ೧೦ ಗಂಟೆ ಯಿಂದ ರಾತ್ರಿ ೮ ಗಂಟೆಯೊಳಗೆ ಪರೀಕ್ಷೆ ಯನ್ನು ಬರೆಯಲು ಅವಕಾಶ ಇರುತ್ತದೆ.
೮ ರಿಂದ ೧೨ನೆಯ ತರಗತಿಯ ವಿದ್ಯಾರ್ಥಿಗಳನ್ನು ಗಮನ ದಲ್ಲಿಟ್ಟು ಕೊಂಡು ವೈದ್ಯಕೀಯ ಅಥವಾ ಇಂಜಿನಿಯರಿಂಗ್ ನಲ್ಲಿ ತಮ್ಮ ವೃತ್ತಿ ಜೀವನದ ಸಾಮರ್ಥ್ಯವನ್ನು ಪ್ರದರ್ಶಿಸಲು iACST ಒಂದು ವೇದಿಕೆಯಾಗಿ ಕಾರ್ಯನಿರ್ವಹಿಸುತ್ತಿದೆ. iACST ಮೂಲಕ ನೀಡಲಾಗುವ ವಿದ್ಯಾರ್ಥಿ ವೇತನಗಳು ವೈದ್ಯಕೀಯ, ಎಂಜಿನಿರಿಂಗ್ ಮತ್ತು ಫೌಂಡೇಶನ್ ತರಗತಿಯ ಕೋರ್ಸ್ ಗಳ ಪ್ರವೇಶಕ್ಕೆ ಅನ್ವಯ ವಾಗುತ್ತದೆ. iACST ಅನ್ನು ಆಕಾಶ್ ಕಂಪ್ಯೂಟರ್ -ಬೆಷ್ಠ ಟೆಸ್ಟ್ (CBT)ಪ್ಲಾಟ್ ಫಾರ್ಮ್ ಮೂಲಕ ನಡೆಸಲಾಗುತ್ತದೆ. ಇದರ ಜೊತೆಗೆ ಆಕಾಶ್ ವೆಬ್ಸೈಟ್ ಮತ್ತು ಎಂಡ್ರಾಯ್ಡ್ ಹಾಗೂ ಆಪಲ್ ಪ್ಲಾಟ್ ಫಾರ್ಮ್ ಗಳಿಗೆ ಮೀಸಲಾದ ಮೊಬೈಲ್ ಅಪ್ಲಿಕೇಶನ್ ಗಳ ಮೂಲಕ ವು ನಡೆಸಲಾಗುತ್ತದೆ.
ತನ್ನ ವಿದ್ಯಾರ್ಥಿವೇತನದ ಉಪಕ್ರಮವಲ್ಲದೇ, ಆಕಾಶ್ ಬೈಜೂಸ್ ಸೇನಾ ಸಿಬ್ಬಂದಿ ಮಕ್ಕಳ ಶಿಕ್ಷಣಕ್ಕೂ ಬೆಂಬಲ ನೀಡುವ ಮೂಲಕ ತನ್ನ ಸಾಮಾಜಿlಜವಾಬ್ದಾರಿಯ ಬದ್ಧತೆಯನ್ನು ಪ್ರದರ್ಶಿಸುತ್ತಿದೆ. ಆಕಾಶ್ ಬೈಜೂಸ್ ಹುತಾತ್ಮ ಯೋಧರ ಮಕ್ಕಳಿಗೆ ಶೇ.೧೦೦ ರವರೆಗೆ ಭೋದನಾ ಶುಲ್ಕವನ್ನು ಮನ್ನಾ ಮಾಡಲಿದೆ. ಸೇನಾ ಸಿಬ್ಬಂದಿ ಮತ್ತು ಭಯೋತ್ಪಾದಕ ದಾಳಿಗೆ ಒಳಗಾದ ವ್ಯಕ್ತಿ ಗಳ ಮಕ್ಕಳಿಗೆ ಅವರು iACST ಪಡೆದುಕೊಳ್ಳುವ ಅಂಕಗಳ ಆಧಾರದಲ್ಲಿ ಹೆಚ್ಚುವರಿ ಯಾಗಿ ಶೇ.೧೦ ರಷ್ಟು ಹೆಚ್ಚುವರಿ ರಿಯಾಯ್ತಿ ನಿಡುತ್ತಿದೆ.
೨೦೧೪ ರಿಂದ ಇದುವರೆಗೆ ಈ ವಿದ್ಯಾರ್ಥಿವೇತನ ದಿಂದ ೭೫.೦೦೦ ಕ್ಕೂ ಅಧಿಕ ವಿದ್ಯಾರ್ಥಿಗಳು ಪ್ರಯೋಜನ ಪಡೆದಿದ್ದಾರೆ. ಇತ್ತೀಚಿಗೆ ನಡೆದ ಜೆಇಇ ಮೆನ್ಸ ೨೦೨೪ ಪರೀಕ್ಷೆಯಲ್ಲಿ ಆಕಾಶ್ ಬೈಜೂಸ್ ನ ೪೧.೨೬೩ ವಿದ್ಯಾರ್ಥಿಗಳು ಅರ್ಹತೆ ಪಡೆಯುವ ಮೂಲಕ ಸಂಸ್ಥೆಯು ಯಶಸ್ಸಿನ ಮತ್ತೊಂದು ಮೆಟ್ಟಿಲೇರಿದೆ. ಇವರ ಪೈಕಿ ಸಂಸ್ಥೆಯ ೪.೧೯೮ ವಿದ್ಯಾರ್ಥಿಗಳು ಶೇ.೯೫ ಮತ್ತು ಅದಕ್ಕಿಂತ ಹೆಚ್ಚು ಅಂಕ ಪಡೆದುಕೊಂಡಿದ್ದರೆ,೯೩೯ ವಿದ್ಯಾರ್ಥಿಗಳು ಶೇ.೯೯ ಮತ್ತು ಅದಕ್ಕಿಂತ ಹೆಚ್ಚುಅಂಕ ಪಡೆದು ಹಿರಿಮೆ ತಂದಿದ್ದಾರೆ. ಹೈದ್ರಾಬಾದ್ ನ ರಿಷಿ ಶೇಖರ್ ಶುಕ್ಲಾ ಅವರು ಶೇ.೧೦೦ ಅಂಕ ಪಡೆದು ಟಾಪರ್ ಆಗಿದ್ದರೆ, ಕರ್ನಾಲ್ ನ ಅಭಿರಾಜ್ ಸಿಂಗ್, ತ್ರಿನುಲ್ವೇಲಿಯ ಶ್ರೀರಾಮ್ ಮತ್ತು ಹೈದ್ರಾಬಾದ್ ನ ವಿಶ್ವನಾಥ ಕೆ.ಎಸ್. ಅವರು ಶೇ.೯೯.೯೯ ಅಂಕ ಪಡೆದು ಸಂಸ್ಥೆಗೆ ಹೆಮ್ಮೆ ಬರುವಂತೆ ಮಾಡಿದ್ದಾರೆ. ಕ್ಲಾಸ್ ರೂಮವಿದ್ಯಾರ್ಥಿಗಳಲ್ಲದೆ, ಆಕಾಶ್ ಬೈಜೂಸ್ ನ ಡಿಜಿಟಲ್ ಪ್ರೋಗ್ರಾಮ್ ನ ವಿದ್ಯಾರ್ಥಿಗಳು ಜೆಇಇ ಮೆನ್ಸ್ ೨೦೨೪(ಸೇಶನ -೦೧)ರಲ್ಲಿ ಉತ್ತಮ ಸಾಧನೆ ತೋರಿದ್ದಾರೆ. ಗಣಿತದಲ್ಲಿ ೧೦೦ ಅಂಕಗಳೊಂದಿಗೆ ರೀತಮ್ ಬ್ಯಾನರ್ಜಿ ಒಟ್ಟಾರೆ ಶೇ.೯೯.೯೬ ಅಂಕ ಪಡೆಯುವುದರೊಂದಿಗೆ ಈ ವಿಭಾಗದಲ್ಲಿ ಟಾಪರ ಆಗಿದ್ದಾರೆ. ಅದೇ ರೀತಿ ರಾಸಾಯನಶಾಸ್ತ್ರದಲ್ಲಿ ೧೦೦ ಅಂಕಗಳನ್ನು ಪಡೆಯುವುದರ ಜೊತೆಗೆ ಅರ್ಹ ಸಾಹೂ ಅವರು ಶೇ.೯೯.೯೧ ಅಂಕ,ಧೃತಿಶ್ಮಾನ್ ದತ್ತಾ ಶೇ.೯೯.೮೭,ಹರೀಶ್ ಕುಮಾರ್ ಶೇ.೯೯.೮೬,ರಸಾಯನಶಾಸ್ತ್ರದಲ್ಲಿ ೧೦೦ ಅಂಕಗಳನ್ನು ಪಡೆಯುವುದರ ಜೊತೆಗೆ ಈಶ್ವರ ನಾಥ್ ಶೇ.೯೯.೮೬,ಇಶಾಂತ್ ಪಟೇಲ್ ಶೇ.೯೯.೮೫,ಸಯಾನ್ ಮಂಡಲ್ ಶೇ.೯೯.೮೨,ಜೇನ್ ಜೋನ್ಸ ಶೇ.೯೯.೭೮,ಸೃಜನ ಗುಪ್ತ ಶೇ.೯೯.೭೪, ದೀಲಿಪ್ ಕುಮಾರ್ ಎ ಶೇ.೯೯.೭೦, ರಕ್ಷಿತ್ ಮೋದಿ ಶೇ.೯೯.೬೭ ಸೇರಿದಂತೆ ಒಟ್ಟು ೨೬ ವಿದ್ಯಾರ್ಥಿಗಳು NTA ನಲ್ಲಿ ಶೇ.೯೯ ಕ್ಕಿಂತ ಹೆಚ್ಚುಅಂಕ ಪಡೆದು ಸಂಸ್ಥೆಗೆ ಯಶಸ್ಸನ್ನು ತಂದುಕೊಟ್ಟಿದ್ದಾರೆ.
ಅದೇ ರೀತಿ, ಜೆಇಇ (ಅಡ್ವಾನ್ಸ್)ನಲ್ಲಿ ಆಕಾಶ್ ಬೈಜೂಸ್ ನ ಡಿಜಿಟಲ್ ಪ್ರೋಗ್ರಾಮ್ ನ ವಿದ್ಯಾರ್ಥಿ ಮಯಾಂಕ್ ಸೋನಿ ಅವರು AIR-೨೬(OBC category Rank 2)ಪಡೆದುಕೊಳ್ಳುವ ಮ‌ೂಲಕ ಭಾರತದ ಅತ್ಯಂತ ಕ್ಲಿಷ್ಟಕರವಾದ ಪರೀಕ್ಷೆಯಲ್ಲಿ ಡಿಜಿಟಲ್‌ ಮಾದರಿಯ ಕಲಿಕೆಯ ಮೂಲಕ ಅತ್ಯುತ್ತಮ ಸಾಧನೆ ತೋರಬಹುದು ಎಂಬುದಕ್ಕೆ ಸಾಕ್ಷಿಯಾಗಿದ್ದಾರೆ.
ಇನ್ನೂ NEET ಉಘೇ ಪರೀಕ್ಷೆ ೨೦೨೩ ರಲ್ಲಿ ಆಕಾಶ್ ಬೈಜೂಸ್ ನ ೧,೦೬,೮೭೦ ವಿದ್ಯಾರ್ಥಿಗಳು ಅರ್ಹತೆ ಪಡೆದಿರುವುದು ಒಂದು ಮೈಲಿಗಲ್ಲಾಗಿದೆ.ಇವರಲ್ಲಿ ೧೭ ಮಂದಿ ವಿದ್ಯಾರ್ಥಿಗಳು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಟಾಪರಗಳಾಗಿ ಹೊರಹೊಮ್ಮಿದ್ದಾರೆ.ಆಲ್ ಇಂಡಿಯಾ ರ್ಯಾಂಕಿಂಗ್ ಅಂದರೆ AIR ನಲ್ಲಿ ಮೂರನೇ ಟಾಪರ್,ಕೌಸ್ತುಭ ಬೌರಿ,ಧೃವ ಅಡ್ವಾಣಿ ೫ ನೇ ಟಾಪರ್,ಸೂರ್ಯಸಿದ್ದಾರ್ಥ್ ನಾಗರಾಜನ್ ೬ ನೇ ಟಾಪರ್, ಸ್ವಯಂ ಶಕ್ತಿ ತ್ರಿಪಾಠಿ ೮ ನೇ ಟಾಪರ್ ಮತ್ತು ಪಾರ್ಥ ಖಂಡೇಲ್ವಾಲ್ ೧೦ ನೇ ಟಾಪರ್ ಆಗಿ ಹೊರಹೊಮ್ಮಿದ್ದಾರೆ ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಈ ಸಂದರ್ಭದಲ್ಲಿ ಗಿರೀಶ್, ಸಿ.ಎಸ್‌. ವಿಜಯ ಉಪಸ್ಥಿತಿರಿದ್ದರು.

error: Content is protected !!