ಬೆಳಗಾವಿ-೧೮ : ಲೋಕಸಭಾ ಚುನಾವಣೆಗೆ ಅಭ್ಯರ್ಥಿಗಳು ನಾಮ ಪತ್ರ, ಸಲ್ಲಿಕೆಯನ್ನು ನಾ ಮುಂದೆ ನಿ ಮುಂದೆ ಎಂದು ಅಭ್ಯರ್ಥಿಗಳು ಶಕ್ತಿ ಪ್ರದರ್ಶನವನ್ನು ಮಾಡುತ್ತಿವೆ.
ಬೆಳಗಾವಿ ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ಮೊನ್ನೆ ಸೋಮವಾರ ಸಲ್ಲಿಸಿದರು. ಮತ್ತೊಮ್ಮೆ ಇಂದು ಸಹ ನಾಮಪತ್ರ ಸಲ್ಲಿಸಿದರು. ಸಮಾದೇವಿ ದೇವಸ್ಥಾನದಲ್ಲಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ತೆರೆದ ವಾಹನದಲ್ಲಿ ಶೆಟ್ಟರ್ ಮೆರವಣಿಗೆ ಮೂಲಕ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸುವ ವೇಳೆ ಬೃಹತ್ ರೋಡ ಶೋಗೆ ಶಕ್ತಿ ತುಂಬುವುದಕ್ಕೆ ಗೋವಾ ಸಿಎಂ ಪ್ರಮೋದ್ ಸಾವಂತ್, ಶಾಸಕ ಅಭಯ್ ಪಾಟೀಲ,ಮಾಜಿ ಸಿಎಂ ಬಿಎಸ್‌ವೈ, ಸಂಸದೆ ಮಂಗಳಾ ಅಂಗಡಿ, ಈರಣ್ಣಾ ಕಡಾಡಿ, ಭೈರತಿ ಬಸವರಾಜ್ ಸಾಥ್ ಸಾಥ್ ಸೇರಿ ತೆರದ ವಾಹನದಲ್ಲಿ ಮೆರವಣಿಗೆ ಮಾಡಲಾಯಿತು, ಮೆರವಣಿಗೆ ಉದ್ದಕ್ಕೂ ಕೇಸರಿಮಯ ಬಿಜೆಪಿ ಧ್ವಜಗಳು ರಾರಾಜೀಸುತ್ತಿದ್ದವು. ಮೆರವಣಿಗೆ ಮೂಲಕ ಜಿಲ್ಲಾಧಿಕಾರಿಗಳ ಕಛೇರಿಗೆ ಸಾವಿರಾರು ಸಹಸ್ರಾರು ಜನ ಸಮೂಹ ನೇರೆವಿತು, ಸಹಸ್ರಾರು ಜನತೆಯ ಆರ್ಶಿವಾದ ಪಡೆದುಕೊಂಡರು ಚುನಾವಣಾ ಅಧಿಕಾರಿಗೆ ನಿತೀಶ್ ಪಾಟೀಲ ಅವರಿಗೆ ನಾಮಪತ್ರವನ್ನು ಸಲ್ಲಿಸಿದರು.
ಜಗದೀಶ್ ಶೆಟ್ಟರ್ ನಾಮಪತ್ರ ಸಲ್ಲಿಸಿದ ಬಳಿಕ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಮಾಧ್ಯಮಗಳೊಂದಿಗೆ ಮಾತನಾಡಿ, ಶೆಟ್ಟರ್ ಅವರ ನಾಮಪತ್ರ ಸಲ್ಲಿಸುವುದಕ್ಕೆ ನಾನು ಬೈರತಿ ಬಸವರಾಜ್,ಪ್ರಮೋದ ಸಾವಂತ ಬಂದಿದ್ದೇವೆ. ಬೃಹತ್ ಮೆರವಣಿಗೆಯಲ್ಲಿ ಭಾಗಿಯಾಗಿ ನಾಮಪತ್ರ ಸಲ್ಲಿಸಿದ್ದೇವೆ. ಉತ್ತಮವಾದ ವಾತಾವರಣ ಎಲ್ಲಾ ಕಡೆಗಳಲ್ಲಿ ಅನಕೂಲಕರವಾಗಿದೆ. ನಾನು ಈ ಹಿಂದೆ ಹೇಳಿದಂತೆ 28ಕ್ಕೆ 28 ಕ್ಷೇತ್ರ ಗೆಲ್ಲುವ ದೃಷ್ಟಿಯಿಂದ ಕೆಲಸ ಮಾಡ್ತಿದ್ದೇವೆ.ಅದರಲ್ಲಿ ನಾವು ಯಶಸ್ವಿಯಾಗುತ್ತೇವೆ ಎಂಬ ವಿಶ್ವಾಸ ಇದೆ. ಸಂಗಣ್ಣ ಕರಡಿ ಕಾಂಗ್ರೆಸ್ ಸೇರ್ಪಡೆ ವಿಚಾರವು ಗೊತ್ತಾಗಿದೆ. ಇವತ್ತು ಹೋಗಿ ಅವರನ್ನು ಭೇಟಿಯಾಗಿ ಮಾತನಾಡುತ್ತೆವೆ, ಇಂತಹ ಘಟನೆಗಳು ಸ್ವಾಭಾವಿಕ ಅಂತ ಯಡಿಯೂರಪ್ಪ ಸ್ಪಷ್ಟ ಪಡಿಸಿದರು. ಬೆಳಗಾವಿಯಲ್ಲಿ ಜಾತಿ ಆಧಾರದಮೇಲೆ ಪಾಲಿಟಿಕ್ಸ್ ವಿಚಾರವಾಗಿ ಮಾತನಾಡಿದ ಅವರು ಎನಾದ್ರೂ ಮಾಡಿಕೊಳ್ಳಲಿ, ನಾವು ಹಿಂದೂ, ಮುಸ್ಲಿಂ ಬೇಧ ಭಾವ ಇಲ್ಲ ಎಲ್ಲರ ಬೆಂಬಲದೊಂದಿಗೆ ಗೆಲ್ತಿವಿ ಅಂತ ವಿಶ್ವಾಸವನ್ನು ವ್ಯಕ್ತಿ ಪಡಿಸಿದರು.