23/12/2024
IMG-20240415-WA0000

ಚಿಕ್ಕೋಡಿ-೧೫: ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಒಟ್ಟು ಎಂಟು ವಿಧಾನಸಭಾ ಮತಕ್ಷೇತ್ರಗಳಿಗೆ ಸಂಬಂದಿಸಿದಂತೆ ಇಬ್ಬರು ವೆಚ್ಚ ವೀಕ್ಷಕರನ್ನು ನೇಮಿಸಲಾಗಿದ್ದು, ನಿಪ್ಪಾಣಿ, ಚಿಕ್ಕೋಡಿ,-ಸದಲಗಾ, ಹುಕ್ಕೇರಿ, ಯಮಕನಮರಡಿ ವಿಧಾನ ಸಭಾ ವೆಚ್ಚ ವೀಕ್ಷಕರಾದ ಐ.ಆರ್.ಎಸ್. ಅಧಿಕಾರಿ ಎನ್.ಮೋಹನ ಕೃಷ್ಣ ಅವರು ಭಾನುವಾರ ರಂದು ಸಾಯಂಕಾಲ ಚಿಕ್ಕೋಡಿ ಲೋಕಸಭಾ ಚುನಾವಣಾಧಿಕಾರಿಗಳ ಕಚೇರಿಯಲ್ಲಿ ಸ್ಥಾಪಿಸಲಾಗಿರುವ ನಿಯಂತ್ರಣ ಘಟಕಕ್ಕೆ ಅನೀರಿಕ್ಷಿತವಾಗಿ ಭೇಟಿ ನೀಡಿ ಪರಿಶೀಲಿಸಿದರು.
ನಿಯಂತ್ರಣ ಘಟಕದ ಕಾರ್ಯವೈಖರಿ ಬಗ್ಗೆ ಮಾಹಿತಿ ಪಡೆದ ವೆಚ್ಚ ವೀಕ್ಷಕರು ಚುನಾವಣಾ ಅಕ್ರಮಗಳನ್ನು ನಿಯಂತ್ರಿಸಲು ಸ್ಥಾಪಿಸಲಾಗಿರುವ ಚೆಕ್ ಪೋಸ್ಟಗಳ ಮೇಲೆ ನಿರಂತರ ನಿಗಾವಹಿಸಲು ತಿಳಿಸಿದರು. ಅಲ್ಲದೇ ಮಾಧ್ಯಮಗಳಲ್ಲಿ ಬರುವಂತಹ ಕಾಸಿಗಾಗಿ ಸುದ್ಧಿ, ಮಾದರಿ ನೀತಿ ಸಂಹಿತೆ ಉಲ್ಲಂಘನೆಗೆ ಸಂಬಂಧಿಸಿದ ವಿಷಯಗಳು ಬಿತ್ತರವಾದಲ್ಲಿ ಕೂಡಲೇ ಮಾಹಿತಿ ಒದಗಿಸಬೇಕು. ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ಧಿಗಳ ಮೇಲೆ ನಿರಂತರ ನಿಗಾವಹಿಸುವಂತೆ ವೆಚ್ಚ ವೀಕ್ಷಕರು ಸಿಬ್ಬಂದಿಗಳಿಗೆ ತಿಳಸಿದರು.
ಈ ಸಂದರ್ಭದಲ್ಲಿ ಚಿಕ್ಕೋಡಿ ತಹಶೀಲ್ದಾರ ಚಿದಂಬರ ಕುಲಕರ್ಣಿ, ಸಹಾಯಕ ವೆಚ್ಚ ವೀಕ್ಷಕರು ಮತ್ತು ನೋಡೆಲ್ ಅಧಿಕಾರಿಗಳು ಲೆಕ್ಕ ಪತ್ರ ತಂಡ ಎಸ್.ಕೆ.ನರಗಟ್ಟಿ ಸೇರಿದಂತೆ ನಿಯಂತ್ರಣ ಘಟಕ, ಲೆಕ್ಕಪತ್ರ ಘಟಕದ ಸಿಬ್ಬಂದಿಗಳು ಹಾಜರಿದ್ದರು.
ಇದಕ್ಕೂ ಮುನ್ನ ನಿಪ್ಪಾಣಿ, ಚಿಕ್ಕೋಡಿ-ಸದಲಗಾ, ಹುಕ್ಕೇರಿ ಹಾಗೂ ಯಮಕನಮರಡಿ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಸ್ಥಾಪಿಸಲಾಗಿರುವ ವಿವಿಧ ಚೆಕ್ ಪೋಸ್ಟಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.

error: Content is protected !!