ಬೆಳಗಾವಿ-೧೪: :ಚಿಕ್ಕೋಡಿ ಲೋಕಸಭಾ ಕ್ಷೇತ್ರದಿಂದ ಅಖಾಡಕ್ಕೆ ಇಳಿದಿರುವ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಂಕಾ ಜಾರಕಿಹೊಳಿ ಅವರಿಗೆ ರೆಡಿ ಸಮುದಾಯದ ಸಂಪೂರ್ಣ ಬೆಂಬಲ ಇದೆ. ಅವರು ಬಹುಮತ ಅಂತರದಿಂದ ಗೆಲ್ಲುವ ವಿಶ್ವಾಸವಿದೆ” ಎಂದು ಸಚಿವ ಹೆಚ್ ಕೆ ಪಾಟೀಲ್ ಹೇಳಿದರು.
ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇಂದು ಸಂಜೆ ರೆಡಿ ಸಮುದಾಯದ ಮುಖಂಡರ ಜೊತೆ ಸಭೆ ನಡೆಸಲಾಗುವುದು. ರೆಡಿ ಸಮುದಾಯದ ಬಾಂಧವರು ಸಂಪೂರ್ಣವಾಗಿ “ಕೈ”ಗೆ ಶಕ್ತಿ ತುಂಬಬೇಕು. ಪ್ರಿಯಂಕಾ ಜಾರಕಿಹೊಳಿ ಅವರ ಗೆಲುವಿಗೆ ಸಹಕಾರ ನೀಡಬೇಕೆಂದು ಚರ್ಚೆ ನಡೆಸಲಾಗುವುದು ಎಂದು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದರು.
ಗ್ಯಾರಂಟಿ ಯೋಜನೆಗಳು ರಾಜ್ಯದ ಆಡಳಿತಾರೂಢ ಕಾಂಗ್ರೆಸ್ ಪಕ್ಷಕ್ಕೆ ಹೊರೆಯಾಗಿದೆ. ಸರ್ಕಾರ ಗ್ಯಾರಂಟಿ ಯೋಜನೆಗಳಿಂದ ಪಾಪ್ಲ್ ಆಗಲಿದೆ ಎಂದು ಬಿಜೆಪಿಗರು ಲೇವಡಿ ಮಾಡುತ್ತಿರುವುದು ಕೇಳಿದ್ದೆವೆ. ಆದರೆ, ಸಿಎಂ ಸಿದ್ದರಾಮಯ್ಯ ಅವರು ಉತ್ತಮವಾಗಿ ನಿರ್ವಹಿಸುತ್ತಿದ್ದಾರೆ. ಬಿಜೆಪಿಗರು ಮಧ್ಯಪ್ರದೇಶ, ಗುಜರಾತ್, ರಾಜಸ್ತಾನ ಹೀಗೆ ಇನ್ನೂಳಿದ ರಾಜ್ಯಗಳಲ್ಲಿ ಉಚಿತ ಯೋಜನೆಗಳನ್ನು ನೀಡುತ್ತಿದೆ. ಬಿಜೆಪಿ ಸರ್ಕಾರ ದಿವಾಳಿ ಆಗಲಿಲ್ಲವೇಕೆ , ಕಾಂಗ್ರೆಸ್ ಸರ್ಕಾರ ನೀಡಿದರೆ ಮಾತ್ರ ದಿವಾಳಿ ಆಗುತ್ತಾ ..? ಶ್ರೀಮಂತರಿಗೆ, ಬಂಡವಾಳ ಶಾಹಿ,ಇಂಡಸ್ಟ್ರಿಯಲ್ ಸೇರಿದಂತೆ ಹಲವಾರು ಸಂಸ್ಥೆಯ ಸಾಲ ಮನ್ನಾ ಮಾಡಲಾಗಿದೆ ಅವಾಗ ಏನು ಆಗಲಿಲ್ಲವಾ ಎಂದು ವಿಪಕ್ಷ ವಿರುದ್ಧ ಪ್ರವಾಸೋದ್ಯಮ ಸಚಿವ ಎಚ್‌ಕೆ ಪಾಟೀಲ್ ಅವರು ವಾಗ್ದಾಳಿ ನಡೆಸಿದರು.
ಗ್ಯಾರಂಟಿ ಯೋಜನೆ ಮೂಲಕ ಒಂದು ಕೋಟಿ ಬಡಜನರ “ಕೈ”ಹಿಡಿದಿರುವ ಏಕೈಕ ಪಕ್ಷ ಕಾಂಗ್ರೆಸ್, ಸರ್ಕಾರ ಏಳಿಗೆಗೆಯಿಂದ ವಿಪಕ್ಷಗಳಿಗೆ ನಿದ್ರೆ ಬರುತ್ತಿಲ್ಲ , ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಯನ್ನು ರಾಜ್ಯದ ಶೇ 99% ಜನತೆ ಉಪಯೋಗ ಮಾಡಿಕೊಳ್ಳುತ್ತಿದ್ದಾರೆ ಆ ವಿಶ್ವಾಸ ನಮಗಿದೆ. ಗಂಡನಿಗೆ ಗೊತ್ತಿಲ್ಲದೇ ಹೆಂಡತಿಗೆ ಹಣ ಬರುತ್ತಿರುವುದನ್ನು ಬಿಜೆಪಿಗರು ಸಹಿಸಿಕೊಳ್ಳಲು ಆಗುತ್ತಿಲ್ಲ ಎಂದು ಲೇವಡಿ ಮಾಡಿದರು.
ಮೋದಿ ಅವರು ಮಾತು ತಪ್ಪಿದ್ದಾರೆ: 2014 ರ ಲೋಕಸಭಾ ಚುನಾವಣಾಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಮಹಾದಾಯಿ ಬಗ್ಗೆ ಎರಡು ರಾಜ್ಯದ ಸಿಎಂ ಜಂಟಿ ಸಭೆ ನಡೆಸಿ ಯೋಜನೆ ಅನುಷ್ಠಾನಗೊಳಿಸಲಾಗುವುದು. ನೀರಿನ ಸಮಸ್ಯೆಯನ್ನು ಬಗೆಹರಿಸಲಾಗುವುದು ಎಂದು ಪ್ರಧಾನಿ ಮಂತ್ರಿ ಮೋದಿ ಅವರು ಚುನಾವಣಾ ಪ್ರಚಾರದಲ್ಲಿ ಹೇಳಿದರು. ಇಲ್ಲಿವರೆಗೂ ಯಾವುದೇ ಕಾರ್ಯ ಪ್ರಗತಿ ಆಗಿಲ್ಲ, ಮೋದಿ ಅವರು ಮಾತು ತಪ್ಪಿದ್ದಾರೆ. ಮಹಾದಾಯಿ ಬಗ್ಗೆ ಹೋರಾಟ ನಡೆಸಿ ಎಲ್ಲವನ್ನು ಮಾಡಿದ್ದು ಕಾಂಗ್ರೆಸ್, ಬಿಜೆಪಿ ಸರ್ಕಾರ ಬಂದಾಗ ನೈಯಾ ಪೈಸೆ ಕೆಲಸ ಮಾಡಿಲ್ಲ ಮಹದಾಯಿ ವಿಚಾರದಲ್ಲಿ ಮಾತನಾಡುವ ನೈತಿಕ ಹಕ್ಕಿಲ್ಲ ಅವರಿಗಿಲ್ಲ, ಮತಯಾಚನೆ ಮಾಡಲು ನೈತಿಕ ಹಕ್ಕು ಕಳೆದುಕೊಂಡಿದ್ದಾರೆಂದು ಸಚಿವರು ಕಿಡಿಕಾರಿದರು.
ಈ ಸಂದರ್ಭದಲ್ಲಿ ಶಾಸಕ ರಾಜು ಸೇಠ, ವಿನಯ ನಾವಲಗಟ್ಟಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಹಾಜರಿದ್ದರು.