23/12/2024
IMG-20240414-WA0069

ಬೆಳಗಾವಿ-೧೪:ವಿಶ್ವ ರತ್ನ ಡಾಕ್ಟರ ಬಾಬಾ ಸಾಹೇಬ ಅಂಬೇಡ್ಕರ್ ಸೇವಾ ಸಂಸ್ಥೆ ಇಂದ ಅಂಬೇಡ್ಕರ ಜಯಂತಿ ಅದ್ದೂರಿಯಾಗಿ ಕಣಬರಗಿ ನಗರದಲ್ಲಿ ನಡೆಯಿತು.

ಈ ಕಾರ್ಯಕ್ರಮದಲ್ಲಿ ಪಿಯುಸಿ ಕಾಮರ್ಸ್ ಭಾಗದಲ್ಲಿ ಉತ್ತಮ ಅಂಕಣ ಪಡೆದ ವಿದ್ಯಾರ್ಥಿಗೆ ಸತ್ಕಾರ ಮಾಡಿ (ಎಸ್ ಎಸ್ ಎಲ್ ಸಿ) ಹಾಗೂ (ಪಿಯುಸಿ) ಪರೀಕ್ಷೆ ಸಮಯದಲ್ಲಿ ಉಚಿತ ಆಟೋ ಸೇವೆ ಮಾಡಿದ ಆಟೋ ಚಾಲಕರಿಗೆ ಸನ್ಮಾನ ಮಾಡಿದರು ವೇದಿಕೆ ಮೇಲೆ ಕಣಬರಗಿ ನಗರದ ಮುಖಂಡರು ಹಾಗೂ ವಿಶ್ವ ರತ್ನ ಡಾ ಬಾಬಾ ಸಾಹೇಬ ಅಂಬೇಡ್ಕರ ಸೇವಾ ಸಂಸ್ಥೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು… ಈ ಸಂಸ್ಥೆಯಿಂದ ಹಲವಾರು ಕಾರ್ಯಕ್ರಮಗಳು ಆಗುತ್ತಿದ್ದು ಪ್ರತಿ ಒಬ್ಬರಿಗೂ ಮಾದರಿಯಾಗಿದೆ ಎಂದು ಯುವ ಹೋರಾಟಗಾರ ಮಹೇಶ ಶಿಗೀಹಳ್ಳಿ ಸಂಸ್ಥೆಯನ್ನು ಉದ್ದೇಶಿಸಿ ಮಾತನಾಡಿ ಶಿಕ್ಷಣ ಸಂಘಟನೆ ಹೋರಾಟ ನಮ್ಮಲ್ಲಿ ತೊಡಗಿಸಿಕೊಂಡು ಬಾಬಾ ಸಾಹೇಬರ ತತ್ವ ಸಿದ್ಧಾಂತಗಳನ್ನು ಪ್ರತಿ ಒಬ್ಬರು ಜೀವನದಲ್ಲಿ ಅಳವಡಿಸಿಕೊಳ್ಳೋಣ ಎಂದು ತಿಳಿಸಿದರು… ಸಂಸ್ಥೆಯ ಸಂಸ್ಥಾಪಕ ಅಕ್ಷಯ ಕೋಲಕಾರ ಹಾಗೂ ಅದ್ಯಕ್ಷರು ಅಂಜನ ಕುಮಾರ್ ಗಂಡಗುದ್ರಿ ಹಾಗೂ ಪದಾಧಿಕಾರಿ ಪ್ರಮೋದ್ ಮೇತ್ರಿ ಮತ್ತು ಪದಾಧಿಕಾರಿ ಚನ್ನಬಸಪ್ಪ ಟೋಪಿ ರವರು ಸಂಸ್ಥೆಯನ್ನು ಕಟ್ಟಿ ಒಂದು ಮಟ್ಟದಲ್ಲಿ ಬೆಳೆಸಿದ್ದಾರೆ ಇವರಿಗೆ ಒಳ್ಳೆಯ ಯಶಸ್ಸು ಲಭಿಸಲಿ ಇವರ ಜೊತೆಯಲ್ಲಿ ನಾವು ಸದಾ ಇರುತ್ತೇವೆ ಎಂದು ಯುವ ಹೋರಾಟಗಾರ ಮಹೇಶ್ ಶಿಗೀಹಳ್ಳಿ ವಿಶ್ವಾಸ ವ್ಯಕ್ತ ಪಡಿಸಿದರು.

error: Content is protected !!