ಬೆಳಗಾವಿ-೧೨: “ಬಿಜೆಪಿಯವರದು ” 400″ ಪಾರ್ ಅಲ್ಲ, 420 ಆಗಿದ್ದಾರೆ. ಬಿಜೆಪಿಯನ್ನು ಸೋಲಿಸಿ, ಸರ್ಕಾರ ರಚನೆ ಮಾಡುವಷ್ಟು ಸಂಖ್ಯಾಬಲ ನಮಗೆ ಸಿಗಲಿದೆ” ಎಂದು ವಿಧಾನ ಪರಿಷತ್ ಸದಸ್ಯ ಬಿಕೆ ಹರಿಪ್ರಸಾದ್ ಅವರು ವಿಶ್ವಾಸ ವ್ಯಕ್ತಪಡಿಸಿದರು.
ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಶುಕ್ರವಾರ ಪತ್ರಿಕಾ ಗೋಷ್ಠಿಯಲ್ಲಿ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ಪ್ರಚಾರ ವೇಳೆ ದೇಶಾದ್ಯಂತ ಬಿಜೆಪಿಯವರು 400 ಹೇಳುತ್ತಿದ್ದಾರೆ. ಸಧ್ಯದ ಸ್ಥಿತಿ 360 ಹತ್ತಿರ ಬಂದು ನಿಂತಿದ್ದಾರೆ. ಚುನಾವಣೆ ಹತ್ತಿರ ಬಂದಾಗ 300 ಸಂಖ್ಯೆಗೆ ಬರುವ ಸಾಧ್ಯತೆ ಇದೆ ಎಂದರು.
ಸಂಫೂರ್ಣ ಗ್ಯಾರಂಟಿ ಕಾಂಗ್ರೆಸ್ ನಲ್ಲಿದೆ. ಮೋದಿ ಸರ್ಕಾರ 3.5 ಸಾವಿರ ಕೋಟಿ ಭ್ರಷ್ಟಾಚಾರ ಮಾಡಿದೆ ಎಂದು ಸುಪ್ರೀಂ ಕೋರ್ಟ್ ಎಚ್ಚರಿಕೆ ನೀಡಿದೆ. ಭ್ರಷ್ಟಾಚಾರದಲ್ಲಿ ಮುಳಗಿರುವ ಸರ್ಕಾರವನ್ನು ಇಳಿಸಲು ವಿಪಕ್ಷಗಳು ಒಗ್ಗಟ್ಟಾಗಿ ನಿಂತಿವೆ. ದೇಶದಲ್ಲಿ ಭ್ರಷ್ಟಾಚಾರ ಬುಡಸಮೇತ ಕಿತ್ತುಹಾಕಬೇಕಾದರೆ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು ಎಂದು ಹೇಳಿದರು.
ಬಿಜೆಪಿಯವರದು ತಿರುಕನ ಕನಸು:
ಚುನಾವಣೆ ಬಳಿಕ ಬಿಜೆಪಿಯವರು ಸಿದ್ದರಾಮಯ್ಯನವರ ಸರ್ಕಾರವನ್ನು ಉರುಳಿಸುತ್ತೆವೆ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ಬಿಜೆಪಿ ತಿರುಕನ ಕನಸು ಕಾಣುತ್ತಿದ್ದಾರೆ. ಒಂದ ಕಡೆ ಸಂವಿದಾನ ಬದಲಾವಣೆ ಜತೆಗೆ ಸರ್ಕಾರ ಬದಲಾವಣೆ ಹೇಳುತ್ತಿದ್ದಾರೆ, ಇಡಿ, ಐಟಿ ಸಂಸ್ಥೆಯನ್ನು ಇಟ್ಟುಕೊಂಡು ಭಯ ಬಿಳಿಸುವ ಯತ್ನ ಮಾಡುತ್ತಿದ್ದಾರೆ. ಅವರ ಮಾತಿನಲ್ಲಿ ಉರುಳಿಲ್ಲ ಎಂದು ಬಿಜೆಪಿಗೆ ತೀರುಗೇಟು ನೀಡಿದರು.
ದೇಶದ ಉದ್ದಗಲಕ್ಕೂ ಕಾಂಗ್ರೆಸ್ ನ್ಯಾಯಯಾತ್ರೆ ಮಾಡಿ, ಜನರ ಸಮಸ್ಯೆ ಆಲಿಸಿ ಬಳಿಕ ಪ್ರಣಾಳಿಕೆ ರೆಡಿ ಮಾಡಿದೆ. ದೇಶದ ಜನರ ತೊಂದರೆಗಳಿಗೆ ಧ್ವನಿಗೂಡಿಸುವ ಉದ್ದೇಶದಿಂದ ಪ್ರಣಾಳಿಕೆಯಲ್ಲಿರುವ ಕಾಂಗ್ರೆಸ್ 25 ಗ್ಯಾರಂಟಿ ಯೋಜನೆ ಘೋಷಣೆ ಮಾಡಿದೆ. ಯಾವುದು ಅಮೃತ ಕಾಲವೆಂದು ಬಿಜೆಪಿಗರು ಹೇಳಿಕೊಂಡು ಬರುತ್ತಿದ್ದಾರೆ ಅದು, ಅನ್ಯಾಯ ಕಾಲವಾಗಿದೆ. ಅನ್ಯಾಯವನ್ನು ಬದಿಗೊತ್ತಿ ನ್ಯಾಯವಾದ ಕಾಲವನ್ನು ನೀಡಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಹೇಳಿದರು.
ಪ್ರಧಾನಿ ಮೋದಿ ಅವರು 10 ವರ್ಷದಲ್ಲಿ ಆಡಳಿತ ಅವಧಿಯಲ್ಲಿ ವಿದ್ಯಾರ್ಥಿಗಳ ಎಜ್ಯುಕೇಶನ್ ಸಾಲ ಸಮರ್ಪಕವಾಗಿಲ್ಲ. ರೈತರ, ಕಾರ್ಮಿಕ ಸಾಲ ಮಾಡದೇ ಬಂಡವಾಳ ಸಾಯಿಗಳ ಸಾಲ ಮನ್ನಾ ಮಾಡಿ, ದೇಶದಕ್ಕೆ ಅನ್ಯಾಯ ಮಾಡಿದೆ. ಮಣಿಪುರದಲ್ಲಿ ಸಾವು-ನೋವುಗಳು ಸಂಬವಿಸಿದರೂ ಕೇಂದ್ರ ಸರ್ಕಾರ ಮೌನಕ್ಕೆ ಶರಣಾಗಿದೆ. ದೇಶದಲ್ಲಿ 6 ನಿಮಿಷಕ್ಕೊಂದು ಮಹಿಳೆಯರ ಮೇಲೆ ಅತ್ಯಾಚಾರವಾಗುತ್ತಿದೆ. ಇನ್ಯಾಯ ಮುಖ ಇಟ್ಟಕೊಂಡು ಪ್ರಚಾರಕ್ಕೆ ಹೋಗುತ್ತಾರೆ ಬಿಜೆಪಿಗರು ಎಂದು ಮೋದಿ ಸರ್ಕಾರಕ್ಕೆ ಚಾಟಿ ಬೀಸಿದರು.
ಸಿಎಂ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಗ್ಯಾರಂಟಿಯನ್ನು ಮೋದಿ ಗ್ಯಾರಂಟಿ ಎಂದು ನಕಲು ಮಾಡಿಕೊಂಡಿದೆ. ಸಾಂವಿಧಾನಿಕ ಸಂಸ್ಥೆಯ ಅಧಿಕಾರಿಗಳು ಕೇಂದ್ರ ಸರ್ಕಾರ ಕೈಗೊಂಬೆಯಾಗಿ ಕೆಲಸ ಮಾಡತ್ತಿವೆ, ಒಂದು ಪಕ್ಷದ ನಾಯಕರನ್ನು ಟಾರ್ಗೆಟ್ ಮಾಡಿ, ವಿರೋಧ ಪಕ್ಷದ ನಾಯಕರನ್ನು ಜೈಲಿಗಟ್ಟಿ ಚುನಾವಣೆ ಮಾಡುತ್ತಿದೆ. ಚುನಾವಣೆ ಎದುರಿಸಲು ಆಗಬಾರದೆಂದು ವಿಪಕ್ಷ ನಾಯಕರ ಬ್ಯಾಂಕ್ ಖಾತೆಗಳನ್ನು ಸಿಜ್ ಮಾಡಿಸಿದ್ದಾರೆ. ಇದು ಪ್ರಜಾಪ್ರಭುತ್ವಕ್ಕೆ ಕಳಂಕವಾಗಿದೆ. ಪ್ರಜಾಪ್ರಭುತ್ವ, ಜಾತ್ಯಾತೀತ, ಸಂವಿಧಾನ ಉಳಿವಿಗಾಗಿ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕಾಗಿದೆ ಎಂದು ಹೇಳಿದರು.
ಈ ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಗ್ರಾಮೀಣ ಅಧ್ಯಕ್ಷ ವಿನಯ ನಾವಲಗಟ್ಟಿ, ಕಾಂಗ್ರೆಸ್ ಮುಖಂಡ ರಾಜೇಂದ್ರ ಪಾಟೀಲ, ಜಯಶ್ರೀ ಮಾಳಗಿ ಸೇರಿದಂತೆ ಹಲವಾರು ಹಾಜರಿದ್ದರು.