23/12/2024
IMG-20240410-WA0000

ಬೆಳಗಾವಿ ೧೦-ನಗರದ ಚೆನ್ನಮ್ಮ ವೃತ್ತದ ಬಳಿಯಿರುವ ಕನ್ನಡ ಸಾಹಿತ್ಯ ಭವನದಲ್ಲಿ ದಿ. ೧೦ ಬುಧವಾರದಂದು ರಂಗಸಂಪದ ತಂಡದವರು ಪತ್ರಿಕಾಗೋಷ್ಠಿಯನ್ನು ಕರೆದಿದ್ದರು.

ಈ ಗೋಷ್ಠಿಯಲ್ಲಿ, ಶ್ರೀ ರಾಘವೇಂದ್ರ ಸ್ವಾಮೀಜಿಯವರ ಜೀವನ ಚರಿತ್ರೆಯಾಧಾರಿತ ನಾಟಕ ‘ಪರಿಮಳದವರು’ ಕುರಿತಂತೆ ಸಂಘದ ಅಧ್ಯಕ್ಷ ಡಾ. ಅರವಿಂದ ಕುಲಕರ್ಣಿಯವರು ಕೆಲ ವಿಷಯಗಳನ್ನು ಹಂಚಿಕೊಂಡರು.
ಮಾ. ದಿ. ೨೯ ರಂದು ಲೋಕಮಾನ್ಯ ರಂಗಮಂದಿರದಲ್ಲಿ ಸುಮಾರು ಏಳನೂರು ಪ್ರೇಕ್ಷಕರ ಮಧ್ಯದಲ್ಲಿ ಈ ನಾಟಕ ಪ್ರದರ್ಶನಗೊಂಡಿತ್ತು. ಸಭಾಗೃಹ ತುಂಬಿ ಜನ ನಿಂತುಕೊಂಡು ಈ ನಾಟಕವನ್ನು ವೀಕ್ಷಿಸಿದ್ದರು. ನಾಟಕವನ್ನು ಮೆಚ್ಚಿಕೊಂಡ ಭಕ್ತರು, ಕಲಾಸಕ್ತರು ಮರುಪ್ರದರ್ಶನಗೊಳ್ಳಬೇಕೆಂದು ಆಗ್ರಹಿಸಿದರು.
ಇದೇ ಸಂದರ್ಭದಲ್ಲಿ ಬೆಳಗಾವಿ ಅಖಿಲ ಬ್ರಾಹ್ಮಣ ಸಮಾಜದ ಅಧ್ಯಕ್ಷರಾದ ಎಸ್. ಎಂ. ಕುಲಕರ್ಣಿಯವರು ಎರಡು ಪ್ರದರ್ಶನದ ಭರವಸೆಯನ್ನಿಟ್ಟರು. ಅದರಂತೆ ಇದೇ ದಿನಾಂಕ ೧೩ ಶನಿವಾರ ಮತ್ತು ದಿನಾಂಕ ೧೪ ರವಿವಾರ ಸಾಯಂಕಾಲ ೬-೩೦ ಕ್ಕೆ ಕೋನವಾಳ ಬೀದಿಯಲ್ಲಿರುವ ಲೋಕಮಾನ್ಯ ರಂಗಮಂದಿರದಲ್ಲಿ ‘ಪರಿಮಳದವರು’ ನಾಟಕ ಪ್ರದರ್ಶನಗೊಳ್ಳಲಿದೆ. ಈ ಎರಡು ದಿನಗಳ ಈ ನಾಟಕದ ಪ್ರವೇಶವು ಸಂಪೂರ್ಣ ಉಚಿತವಾಗಿದ್ದು ಆಸಕ್ತರು ಇದರ ಸದುಪಯೋಗ ತೆಗೆದುಕೊಳ್ಳಬೇಕು ಎಂದು ಡಾ. ಅರವಿಂದ ಕುಲಕರ್ಣಿ ಹೇಳಿದರು.
ನಾಟಕದ ಪ್ರಮುಖ ಪಾತ್ರವಾದ ಶ್ರೀ ರಾಘವೇಂದ್ರ ಸ್ವಾಮಿಗಳ ಪಾತ್ರದಲ್ಲಿ ನಾನು (ಡಾ.ಅರವಿಂದ ಕುಲಕರ್ಣಿ) ಅಭಿನಯಿಸಲಿದ್ದೇನೆ. ಉಳಿದ ಪಾತ್ರಗಳಲ್ಲಿ ಪದ್ಮಾ ಕುಲಕರ್ಣಿ, ಪವಿತ್ರಾ ರೇವಣಕರ, ಸ್ನೇಹಾ ಜೋಶಿ, ಸೀಮಾ ಕುಲಕರ್ಣಿ, ನಿರ್ಮಲಾ ಬಟ್ಟಲ, ಭಾಗ್ಯಶ್ರೀ ಕುಲಕರ್ಣಿ, ಶೀಲಾ ರಾಜಪುರೋಹಿತ, ಸತ್ಯ ವಿಜಯ, ವರದ ದೇಶಪಾಂಡೆ, ಪ್ರಸಾದ ಕಾರಜೋಳ, ಯೋಗೇಶ ದೇಶಪಾಂಡೆ, ವಿನೋದ ಸಪ್ಪಣ್ಣವರ, ಆರ್. ವಿ. ಭಟ್, ವ್ಯಾಸಾಚಾರ್ಯ ಅಂಬೇಕರ, ಪ್ರಶಾಂತ ಪಾಂಡವ, ರಮೇಶ ಬಡಿಗೇರ, ಕು. ಸ್ನೇಹಾ ಕುಲಕರ್ಣಿ, ಕು. ಪೂರ್ವಿ ರಾಜಪುರೋಹಿತ ಕಾಣಿಸಿಕೊಳ್ಳಲಿದ್ದಾರೆ.
ಜಿ. ಬಿ. ಜೋಶಿ ರಚನೆಯಾಗಿದ್ದು ನಿರ್ದೇಶನ ಶ್ರೀಪತಿ ಮಂಜನಬೈಲು ಅವರದ್ದಾಗಿದೆ. ಪ್ರಸಾದನ ಸಂತೋಷ ಮಹಾಲೆ, ನೆಳಲು ಬೆಳಕು ಗುರುದತ್ತ ಪೇಡ್ನೇಕರ, ತಾಂತ್ರಿಕ ನೆರವು ಮಾಧುರಿ ಇನಾಮದಾರ, ರಂಗ ಸಜ್ಜಿಕೆ ಓಂಕಾರ ತಮೂಚೆ ಅವರದ್ದಾಗಿದೆ ಎಂದು ಡಾ. ಅರವಿಂದ ಕುಲಕರ್ಣಿ ಹೇಳಿದರು.
ವೇದಿಕೆ ಮೇಲೆ ರಂಗಸಂಪದದ ಅಧ್ಯಕ್ಷರಾದ ಡಾ.ಅರವಿಂದ ಕುಲಕರ್ಣಿ, ಉಪಾಧ್ಯಕ್ಷ ರಾಮಚಂದ್ರ ಕಟ್ಟಿ, ಕಾರ್ಯದರ್ಶಿ ಪ್ರಸಾದ ಕಾರಜೋಳ, ಆಡಳಿತ ಮಂಡಳಿ ಸದಸ್ಯ ಚಿದಾನಂದ ವಾಳಕೆ ಉಪಸ್ಥಿತರಿದ್ದರು.

error: Content is protected !!