ಬೆಳಗಾವಿ-೩೦: ದೇಶದ ಹಿತ ಕಾಪಾಡಲು, ದೇಶದ ಅಭಿವೃದ್ಧಿಗಾಗಿ ಮತದಾರರು ಕಾಂಗ್ರೆಸ್ ಗೆ ಬೆಂಬಲ ನೀಡುವ ಮೂಲಕ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ನಿಮ್ಮ ಸಹೋದರಿಗೆ ಮತದಾರರು ತಮ್ಮ ಅಮೂಲ್ಯವಾದ ನೀಡಬೇಕು ಎಂದು ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ ಅಭ್ಯರ್ಥಿ ಪ್ರಿಯಂಕಾ ಜಾರಕಿಹೊಳಿ ಅವರು ಮನವಿ ಮಾಡಿಕೊಂಡರು.
ಚಿಕ್ಕೋಡಿ ಲೋಕಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಬೆಳಗಾವಿ ತಾಲೂಕಿನ ಅಗಸಗಾ , ಹಂದಿಗನೂರು, ಕೇದನೂರು ಗ್ರಾಮದಲ್ಲಿ ಬೂತ ಮಟ್ಟದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಜನಸೇವೆ ಮಾಡಲು ಅವಕಾಶ ಸಿಕ್ಕಿದೆ. ನಿಮ್ಮ ಮನೆ-ಮಗಳನ್ನು ಕೈ ಹಿಡಿದು ನಡೆಸುವ ಜವಾಬ್ದಾರಿ ನಿಮ್ಮ ಮೇಲಿದೆ. ಈ ಕ್ಷೇತ್ರದಿಂದ ಆಯ್ಕೆಯಾದರೆ, ಹಗಲಿರುಳು ಕ್ಷೇತ್ರದ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಹೇಳಿದರು.
ತಂದೆಯವರು ಅಭಿವೃದ್ಧಿ ಹರಿಕಾರರು:ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ನಡೆಯಬೇಕು. ಮೊದಲ ಬಾರಿಗೆ ಚುನಾವಣೆ ಅಖಾಡಕ್ಕೆ ಹೆಜ್ಜೆ ಇಟ್ಟಿರುವುದು , ಹೆಜ್ಜೆ ಹೊಸದಾಗಿರಬಹುದು ಬೇರು ಮಾತ್ರ ಹಳೆಯದು ಎನ್ನುತ್ತ ಯಾಕೆಂದರೆ ತಂದೆಯವರ ಅಭಿವೃದ್ಧಿ ಕಾರ್ಯಗಳನ್ನು ನೋಡಿ ಮತದಾರರು ಮತ ನೀಡಬೇಕು. ಅಪಾರ ವಿಶ್ವಾಸ ಇಟ್ಟಿದ್ದೆನೆ ಎಂದು ಅಭ್ಯರ್ಥಿ ಪ್ರಿಯಂಕಾ ಜಾರಕಿಹೊಳಿ ಹೇಳಿದರು. ತಂದೆಯವರಾದ ಸತೀಶ ಜಾರಕಿಹೊಳಿ ಅವರು ಭಾಷಣ ಮಾಡುವವರಲ್ಲ, ಅವರ ಅಭಿವೃದ್ಧಿಗಳ ಕಾರ್ಯಗಳು ಮಾಡಿ ಹೆಸರುವಾಸಿಯಾದರೂ. ಇಲ್ಲಿಂದ ಆಯ್ಕೆಯಾದರೆ ಕೇಂದ್ರದಿಂದ ಅನುದಾನ ತರಲು ಹಾದಿ ಸುಮಗವಾಗಲಿದೆ ಜತೆಗೆ ಚಿಕ್ಕೋಡಿಯಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಸಲು ಅನುಕೂಲ ವಾಗಲಿದೆ ಎಂದರು.
ಕಾಂಗ್ರೆಸ್ ವಿಧಾನ ಸಭಾ ಚುನಾವಣೆ ಪೂರ್ವ ಪ್ರಣಾಳಿಕೆಯಲ್ಲಿನ ಐದು ಗ್ಯಾರಂಟಿ ಯೋಜನೆಗಳನ್ನು ರಾಜ್ಯ ಸರ್ಕಾರ ಅನುಷ್ಠಾನಗೊಳಿಸಿದ್ದಾರೆ. ಈ ಯೋಜನೆಗಳಿಂದ ರಾಜ್ಯದ ಜನತೆ ನೆಮ್ಮದಿ ಜೀವನ ಸಾಗಿಸುತ್ತಿದ್ದಾರೆ.
ಕಾಂಗ್ರೆಸ್ ಹೈಕಮಾಂಡ ಕೂಡ ಚುನಾವಣೆ ಪೂರ್ವ ಪ್ರಣಾಣಿಕೆ ಬಿಡುಗಡೆ ಮಾಡಲಾಗಿದೆ. ಲೋಕಸಮರದಲ್ಲಿ ಕೈ ಅಧಿಕಾರಿಕ್ಕೆ ಬಂದರೆ ಮಹಿಳೆರಿಗಾಗಿ ಮೀಸಲಾತಿ ಸೇರಿದಂತೆ ಪ್ರತಿವರ್ಷವೂ ಮದ್ಯದ ವರ್ಗದ ಕುಟುಂಬಕ್ಕೆ 1 ಲಕ್ಷ ರೂ. ನೀಡುವುದಾಗಿ ಭರವಸೆ ನೀಡಿದೆ. ಜತೆ ಹತ್ತಾರೂ ಯೋಜನೆಗಳನ್ನು ಘೋಷಣೆ ಮಾಡಲಾಗಿದೆ. ಇವೆಲ್ಲವೂ ನಿಮ್ಮ ಪಾಲಾಗಬೇಕೆಂದರೆ ಮತದಾರರು ಕಾಂಗ್ರೆಸ್ ಗೆ ಮತಚಲಾಯಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಕೆಪಿಸಿಸಿ ಸದಸ್ಯ ಮಲಗೌಡ ಪಾಟೀಲ್, ಮಾಜಿ ಜಿಪಂ ಅಧ್ಯಕ್ಷ ಅರುಣ ಕಟಾಂಬಳೆ, ಜಯಶ್ರೀ ಮಾಳಗಿ,
ಗ್ರಾಪಂ ಅಧ್ಯಕ್ಷ ಅಮೃತ ಮುದ್ದನ್ನವರ, ಉಪಾಧ್ಯಕ್ಷ ಶೋಭಾ ಕುರೆನ್ನವರ, ಉಮಾ ಕೋಲಕಾಲ, ಯಲ್ಲಪ್ಪಾ ಪಾಟೀಲ್, ಬಸನಗೌಡ ಪಾಟೀಲ್, ಮಾರುತಿ ಕಂಗ್ರಾಳಕರ್, ಸಾಗರ ಪಿಂಜಟ, ಪರಶುರಾಮ ರೆಡೆಕರ್, ಶೆಟ್ಟು ಗೆವಡೆ, ಜ್ಯೋತಿಬಾ ಜೋವಡೆ, ಲಕ್ಷ್ಮ ಣ ಕಂಗ್ರಾಳಕರ್ ಹಾಗೂ ಗ್ರಾಮಸ್ಥರು ಇತರರು ಉಪಸ್ಥಿತಿರಿದ್ದರು.