23/12/2024
IMG-20240329-WA0001

ಧಾರವಾಡ-೨೯:ಮಾದಿಗ ದಂಡೋರ MRPS ಸಂಘಟನೆಯ ರಾಷ್ಟ್ರೀಯ ಸಂಸ್ಥಾಪಕ ಅಧ್ಯಕ್ಷರಾದ ಶ್ರೀ ಮಂದಕೃಷ್ಣ ಮಾದಿಗ ಮತ್ತು ಕರ್ನಾಟಕ ರಾಜ್ಯಾಧ್ಯಕ್ಷ ಬಿ ನರಸಪ್ಪ ಅವರ ಆದೇಶದ ಅನ್ವಯ ಸಂಘಟನೆಯ ಧಾರವಾಡ ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷರನ್ನಾಗಿ ಶ್ರೀ ಪ್ರಕಾಶ ಎಸ್ ಕನಮಕ್ಕಲ್ ಮತ್ತು ಜಿಲ್ಲಾ ಸಂಘಟನಾ ಕಾರ್ಯದರ್ಶಿಯಾಗಿ ಶ್ರೀ ಆನಂದ ವಿ ಮಾದರ ಹಾಗೂ ಹುಬ್ಬಳ್ಳಿ ನಗರ ಯುವ ಘಟಕದ ಅಧ್ಯಕ್ಷರನ್ನಾಗಿ ಶ್ರೀ ಸತ್ಯನಾರಾಯಣ ಆರ್ ಸಾಕೆ ಅವರನ್ನು ನೇಮಕ ಮಾಡಲಾಗಿದೆ.

ನೂತನ ಪದಾಧಿಕಾರಿಗಳು ಮಾದಿಗ ದಂಡೋರ MRPS ಸಂಘಟನೆಯನ್ನು ಬಲಪಡಿಸಿ ಸಂವರ್ಧಿಸುವ ನಿಟ್ಟಿನಲ್ಲಿ ಕೆಲಸ ನಿರ್ವಹಿಸಲಿದ್ದಾರೆ ಎಂದು ಮಾದಿಗ ದಂಡೋರ MRPS ಉತ್ತರ ಕರ್ನಾಟಕ ಅಧ್ಯಕ್ಷರಾದ ಮಂಜುನಾಥ ಕೊಂಡಪಲ್ಲಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

error: Content is protected !!