ಬೆಳಗಾವಿ-೨೮ : ಭಾರತೀಯ ಜನತಾ ಪಾರ್ಟಿ ಗ್ರಾಮಾಂತರ ಜಿಲ್ಲೆ ಕಾರ್ಯಾಲಯ ಮಾಜಿ ಸಚಿವರು ಹಾಗೂ ಗೋಕಾಕ ಶಾಸಕರಾದ ಶ್ರೀ ರಮೇಶ ಜಾರಕಿಹೊಳಿ ಅವರು ಗುರುವಾರ ಬೆಳಗಾವಿ ಲೋಕಸಭಾ ಅಭ್ಯರ್ಥಿಯಾದ ಜಗದೀಶ್ ಶೆಟ್ಟರ ಅವರನ್ನು ಭೇಟಿಯಾಗಿ ಸತ್ಕರಿಸಿ ಶುಭಕೋರಿದರು. ಲೋಕಸಭಾ ಚುನಾವಣೆಯ ಪೂರ್ವತಯಾರಿ ಹಾಗೂ ಪ್ರಚಾರಕಾರ್ಯ ಸೇರಿದಂತೆ ಹಲವು ವಿಷಯಗಳ ಕುರಿತು ಚರ್ಚಿಸಿದರು.ಈ ಸಂದರ್ಭದಲ್ಲಿ ಭಾರತೀಯ ಜನತಾ ಪಾರ್ಟಿ ಗ್ರಾಮಾಂತರ ಜಿಲ್ಲೆಯ ಅಧ್ಯಕ್ಷರಾದ ಸುಭಾಷ್ ಪಾಟೀಲ, ಭಾಜಪ ಮುಖಂಡರಾದ ಮುರಘೇಂದ್ರಗೌಡ ಪಾಟೀಲ್,ಭಾಜಪ ಯುವ ಮೋರ್ಚಾ ರಾಜ್ಯ ಉಪಾಧ್ಯಕ್ಷ ಈರಣ್ಣ ಅಂಗಡಿ,ಕಿರಣ್ ಜಾಧವ್,ಯಲ್ಲೇಶ್ ಕೋಲಕಾರ,ವೀರಭದ್ರ ಪೂಜಾರಿ ಹಾಗೂ ಅನೇಕರು ಉಪಸ್ಥಿತರಿದ್ದರು