ಚಿಕ್ಕೋಡಿ-೨೮: ಲೋಕಸಭಾ ಸಾರ್ವತ್ರಿಕ ಚುನಾಣೆ -2024ಕ್ಕೆ ಸಂಬಂಧಿಸಿದಂತೆ ಚಿಕ್ಕೋಡಿಯ ಆರ್.ಡಿ. ಹೈಸ್ಕೂಲಿನ ಮತ ಏಣಿಕೆ ಕೇಂದ್ರಕ್ಕೆ ಜಿಲ್ಲಾ ಚುನಾವಣಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳು ಆದ ನಿತೇಶ್ ಪಾಟೀಲ ಅವರು ಗುರುವಾರದಂದು ಭೇಟಿ ನೀಡಿ ಪರಿಶೀಲಿಸಿದರು.
ಮತ ಏಣಿಕೆ ಕೇಂದ್ರದಲ್ಲಿನ ಚಿಕ್ಕೋಡಿ ಲೋಕಸಭಾ ಮತಕ್ಷೇತ್ರದ ವಿಧಾನ ಸಭಾ ಕ್ಷೇತ್ರವಾರು ಸ್ಟ್ರಾಂಗ ರೂಂಗಳಿಗೆ ಒದಗಿಸಲಾದ ಭದ್ರತೆ ಹಾಗೂ ಮತ ಏಣಿಕೆ ಕೊಠಡಿಗಳನ್ನು ಪರಿಶೀಲಿಸಿದ ಅವರು, ಸುಗಮ, ಶಾಂತಿಯುತ ಹಾಗೂ ವ್ಯವಸ್ಥಿತ ಮತ ಏಣಿಕೆಗೆ ಅಗತ್ಯದ ಎಲ್ಲ ಪೂರ್ವಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಚಿಕ್ಕೋಡಿ ಲೋಕಸಭಾ ಮತಕ್ಷೇತ್ರದ ಚುನಾವಣಾಧಿಕಾರಿ ಹಾಗೂ ಜಿ.ಪಂ.ಸಿ.ಇ.ಓ ರಾಹುಲ್ ಶಿಂಧೆ, ಜಿಲ್ಲಾ ಪೊಲಿಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ, ಜಿ.ಪಂ. ಉಪ ಕಾರ್ಯದರ್ಶಿ ಬಸವರಾಜ ಅಡವಿಮಠ, ಚಿಕ್ಕೋಡಿ ಉಪ ವಿಭಾಗಾಧಿಕಾರಿ ಶ್ರೀಮತಿ ಮೆಹಬೂಬಿ. ತಹಶೀಲ್ದಾರ ಚಿದಂಬರ ಕುಲಕರ್ಣಿ, ಸಿ.ಪಿ.ಆಯ್. ಗೋಪಾಲಕೃಷ್ಣ ಗೌಡರ, ತಾ.ಪಂ. ಇ.ಓ. ಜಗದೀಶ ಕಮ್ಮಾರ, ಪೋಲಿಸ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತಿರಿದ್ದರು.