ಖಾನಾಪೂರ-೨೬:ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ( ರಿ ) ಬೆಂಗಳೂರು ತಾಲೂಕು ಘಟಕ ಹಾಸನ ಇವರು ಮಹಾಶಿವರಾತ್ರಿ ಹಬ್ಬದ ಅಂಗವಾಗಿ ಏರ್ಪಡಿಸಿದ್ದ ಅಂತರ್ಜಾಲ ಆಧಾರಿತ ರಾಜ್ಯಮಟ್ಟದ ಆಧುನಿಕ ವಚನ ರಚನಾ ಸ್ಪರ್ಧೆಯಲ್ಲಿ ಹಲಶಿ ಪ್ರೌಢಶಾಲೆಯ ಶಿಕ್ಷಕರು ಹಾಗೂ ಮಕ್ಕಳ ಸಾಹಿತ್ಯ ಪರಿಷತ್ತು ಖಾನಾಪುರ ತಾಲೂಕು ಘಟಕದ ಅಧ್ಯಕ್ಷರು ಶ್ರೀ ಬಸವರಾಜ ಘೋಡಗೇರಿ ಇವರು ತೃತೀಯ ಬಹುಮಾನಕ್ಕೆ ಪಾತ್ರರಾಗಿದ್ದಾರೆ.
ಹಾಸ್ಯ ಕಲಾವಿದರು, ಹವ್ಯಾಸಿ ಬರಹಗಾರರು, ಕವಿಗಳು ಆಗಿರುವ ಬಸವರಾಜ್ ಇವರ ಸಾಧನೆಗೆ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಖಾನಾಪುರ ತಾಲೂಕು ಘಟಕದ ಅಧ್ಯಕ್ಷರು ಶ್ರೀ ವಿಜಯ ಬಡಿಗೇರ್ ಹಾಗೂ ಪದಾಧಿಕಾರಿಗಳು, ಹಲಶಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರು ಹಾಗೂ ಸಿಬ್ಬಂದಿ ವರ್ಗ, ಮ.ಸಾ.ಪ ತಾಲೂಕು ಘಟಕದ ಪದಾಧಿಕಾರಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.