ಬೆಳಗಾವಿ-೨೫:ನಗರದಲ್ಲಿ ಹೋಳಿ ಹಬ್ಬ, ರಂಗಪಂಚಮಿ ಆಚರಿಸಲಾಯಿತು. ಯುವಕ, ಯುವತಿಯರು ಬಣ್ಣಗಳಲ್ಲಿ ಮಿಂದೆದ್ದು ಸಂಭ್ರಮಪಟ್ಟರು.
ಗಣಪತಿ ಗಲ್ಲಿ, ಮಾರುತಿ ಗಲ್ಲಿ, ಖಡೇಬಜಾರ್, ಕಾಲೇಜು ರಸ್ತೆ, ಸಿಪಿಎಡ್ ಮೈದಿನದಲ್ಲಿ ಹೋಳಿ ಹಬ್ಬ ರಂಗೇರಿತ್ತು. ರಂಗಪಂಚಮಿ ಹಿನ್ನೆಲೆಯಲ್ಲಿ ವಿವಿಧ ಸಾಂಸ್ಕೃತಿಕ ಕ್ರೀಡೆಗಳು ನಡೆದವು. ಕಾಮ ದಹಿಸಿ ಇಡೀ ಬೆಳಗಾವಿಗರು ತರಹೇವಾರಿ ಬಣ್ಣಗಳಲ್ಲಿ ಮಿಂದೆದ್ದರು.