ಬೆಳಗಾವಿ-೨೩:ಸಮಾಜ ಸೇವಕ ಆಕಾಶ್ ಹಲಗೇಕರ್ ಅವರಿಂದ ಪ್ರಾಣಿಯ ರಕ್ಷಣೆ
ನಮಗೆ ಬಣ್ಣ ಎರಚಬೇಡಿ
ಪ್ರತಿ ವರ್ಷದಂತೆ ಈ ವರ್ಷವೂ ಹೋಳಿ ಹಬ್ಬ ಬಂದಿದೆ ಇದು ಬಣ್ಣಗಳ ಹಬ್ಬ, ಮನುಷ್ಯ ಮನುಷ್ಯನಿಗಾಗಿ ಮಾಡಿಕೊಂಡಿರುವ ಹಬ್ಬ, ಮನುಷ್ಯನ ಮೇಲೆ ಬಣ್ಣ ಎರಚಿದರೆ ತನ್ನ ಕೈಗಳಿಂದ ತೊಳೆದುಕೊಳ್ಳಬಹುದು, ಆದರೆ ಅದೇ ರಾಸಾಯನಿಕ ಯುಕ್ತ ಬಣ್ಣವನ್ನು ಮೂಕ ಪ್ರಾಣಿಗಳ ಮೇಲೆ ಎರಚಿದರೆ ಅವುಗಳು ಅದನ್ನ ಸ್ವಚ್ಛ ಮಾಡಿಕೊಳ್ಳಲು ಆಗುವುದಿಲ್ಲ ಮತ್ತು ಅವು ಅದರಿಂದ ಸಾಕಷ್ಟು ತೊಂದರೆ ಅನುಭವಿಸಬೇಕಾಗುತ್ತದೆ, ಮನುಷ್ಯ ತನ್ನ ಶೋಕಿಗೋಸ್ಕರ ಇಂತಹ ಪ್ರಮಾದ ಮಾಡುವುದು ತಪ್ಪು, ಇದರಿಂದ ಪ್ರಾಣಿಗಳ ಜೀವಕ್ಕೆ ತೊಂದರೆ ಉಂಟಾಗುತ್ತದೆ. ಈ ನಿಟ್ಟಿನಲ್ಲಿ ಹೋಳಿ ಹಬ್ಬದ ಬಗ್ಗೆ ಮತ್ತು ರಾಸಾಯನಿಕ ಯುಕ್ತ ಬಣ್ಣಗಳನ್ನು ಪ್ರಾಣಿಗಳ ಮೇಲೆ ಎರಚುವುದು ತಪ್ಪು ಅಂತ ಸಾಮಾಜಿಕ ಸಂದೇಶ ಕೊಡುವ ನಿಟ್ಟಿನಲ್ಲಿ ಸಾಮಾಜಿಕ ಕಾರ್ಯಕರ್ತರು ಅದ ಶ್ರೀ ಆಕಾಶ್ ಹಲಗೇಕರ್ ಇವರು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ.ಇವರ ಈ ಕಳಕಳಿಗೆ ಸಾರ್ವಜನಿಕರು ಸ್ಪಂದಿಸ ಬೇಕಾಗಿದೆ. ಕೇವಲ ಪ್ರಾಣಿಗಳ ಮೇಲೆ ದಯೆ ಇದ್ದರೆ ಸಾಲದು ಅದನ್ನ ಪಾಲಿಸಬೇಕಾಗುತ್ತದೆ.
ಇವರ ಈ ಕಾರ್ಯಕ್ಕೆ ಉದಯಕುಮಾರ್ ದೇವರ ಅನ್ನ ಪ್ರತಿಷ್ಠಾನ ಅಧ್ಯಕ್ಷರು, ಚಿಕ್ಕ ಮಕ್ಕಳಾದ ಕುಮಾರ ಮಂಜುನಾಥ, ಕುಮಾರಿ ಆಶಾ,ಕುಮಾರ ರಘು ಸಾಥ ನೀಡಿದರು.